ದುಬೈ: ಭಾರತೀಯ ಮೂಲದ ರಾಮ್ಕುಮಾರ್ ಸಾರಂಗಪಾಣಿ ಅವರು ವಿಶ್ವದ ಅತ್ಯಂತ ದೊಡ್ಡ ಪಾಪ್-ಅಪ್ ಗ್ರೀಟಿಂಗ್ ಕಾರ್ಡ್ (3ಡಿ ಆಯಾಮ) ತಯಾರಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.
ಈ ಶುಭಾಶಯ ಪತ್ರ 8.2 ಚದರ ಮೀಟರ್ ವಿಸ್ತಾರವಾಗಿದೆ. ಯುಎಇ ಪ್ರಧಾನಿ, ಉಪಾಧ್ಯಕ್ಷ ಹಾಗೂ ದುಬೈನ ರಾಜನಾಗಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಮಕ್ತುಮ್ ಅವರ 15ನೇ ಪದಗ್ರಹಣ ದಿನದ ನಿಮಿತ್ತ ರಾಮ್ಕುಮಾರ್ ಗ್ರೀಟಿಂಗ್ ಕಾರ್ಡ್ ತಯಾರಿಸಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪಾಪ್ ಅಪ್ ಶುಭಾಶಯ ಪತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕಾರ್ಡ್ ಒಂದು ಸಹಜ ಅಳತೆಯ ಶುಭಾಶಯ ಪತ್ರಕ್ಕಿಂತ 100 ಪಟ್ಟು ದೊಡ್ಡ ಗ್ರೀಟಿಂಗ್ ಕಾರ್ಡ್ ಆಗಿದೆ. ದುಬೈ ಮೂಲದ ಕಲಾವಿದ ಅಕ್ಬರ್ ಸಾಹೇಬ್ ರಚಿಸಿರುವ ಶೇಖ್ ಮೊಹಮದ್ ಅವರ ಪೇಂಟಿಂಗ್ ಈ ಕಾರ್ಡ್ನಲ್ಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಇಷ್ಟು ದೊಡ್ಡ, ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲು 6 ತಿಂಗಳು ಬೇಕಾಯಿತು. ದೋಹಾದಲ್ಲಿ ಜನವರಿ 4ರಿಂದ 18ರವರೆಗೆ ಇದರ ಪ್ರದರ್ಶನ ನಡೆಯಲಿದೆ ಎಂದು ಸಾರಂಗಪಾಣಿ ತಿಳಿಸಿದ್ದಾರೆ. ಈ ಮೊದಲು ಹಾಂಗ್ಕಾಂಗ್ ಮೂಲದ ವ್ಯಕ್ತಿಯೋರ್ವರು 6.729 ಚದರ ಮೀಟರ್ ವಿಸ್ತೀರ್ಣದ ಗ್ರೀಟಿಂಗ್ ಕಾರ್ಡ್ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಸಾರಂಗಪಾಣಿ ಮುರಿದಿದ್ದಾರೆ. ಇವರ ಪಾಪ್ಅಪ್ ಶುಭಾಶಯ ಪತ್ರ 8.2 ಚದರ ಮೀಟರ್ ಇದೆ.
17 ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.
Ramkumar Sarangapani (UAE) had a busy #GWRDay – setting SIX new records!
His records include the largest magnet sentence and the smallest pack of cards… ? pic.twitter.com/XDDLWDszJf
— Guinness World Records 2021 Out Now (@GWR) November 19, 2020
‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ