ಕೋಟಿಗಟ್ಟಲೆ ಆಸ್ತಿ ಹೊಂದಿದ್ದ ಆಕೆ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು: ಇತ್ತೀಚೆಗಷ್ಟೇ ಆಕೆಯ ಆಧಾರ್ ನವೀಕರಿಸಲಾಗಿದೆ, ಹೋಗಿ ತಡಕಾಡಿದಾಗ!

|

Updated on: Sep 15, 2023 | 7:31 PM

2019 ರಲ್ಲಿ, ವಿವಾಹಿತ ಮಹಿಳೆಯ ತಂದೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಮಹಿಳೆಯನ್ನು ಪತ್ತೆ ಹಚ್ಚಲು ಮಹಿಳಾ ಪೊಲೀಸರಿಗೆ ನ್ಯಾಯಾಲಯವು ಆದೇಶಿಸಿತು. ಅದರಂತೆ ಮಹಿಳಾ ಭದ್ರತಾ ಇಲಾಖೆಯು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಾಗ ವಿವಾಹಿತ ಮಹಿಳೆಯು ಕ್ಯಾಬ್ ಬುಕ್ ಮಾಡಲು ಮೊಬೈಲ್ ಬಳಸಿರುವುದು ಪತ್ತೆಯಾಗಿದೆ. ಬಳಿಕ ಮಹಿಳೆಯ ಪುಣೆಗೆ ಹೋಗಿದ್ದಾಳೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಆದರೆ...

ಕೋಟಿಗಟ್ಟಲೆ ಆಸ್ತಿ ಹೊಂದಿದ್ದ ಆಕೆ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು: ಇತ್ತೀಚೆಗಷ್ಟೇ ಆಕೆಯ ಆಧಾರ್ ನವೀಕರಿಸಲಾಗಿದೆ, ಹೋಗಿ ತಡಕಾಡಿದಾಗ!
ಕೋಟಿಗಟ್ಟಲೆ ಆಸ್ತಿ ಹೊಂದಿದ್ದ ಆಕೆ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು
Follow us on

ಕೋಟಿಗಟ್ಟಲೆ ಆಸ್ತಿಯನ್ನು, ತನ್ನದೇ ಕುಟುಂಬ ಸದಸ್ಯರು ತನ್ನವರಲ್ಲ ಎಂದು ಕೊಡವಿಕೊಂಡು ಆ ವಿವಾಹಿತ ಮಹಿಳೆ ತನ್ನ ಇಷ್ಟದಂತೆ ಬದುಕಲು ನಿರ್ಧರಿಸುತ್ತಾಳೆ. ತಮ್ಮ ಮನೆ ಮತ್ತು ಕುಟುಂಬ ಸದಸ್ಯರನ್ನು ಬಿಟ್ಟು ಎಲ್ಲೋ ದೂರ ಹೋಗಬೇಕು ಅಂದುಕೊಂಡಳು.. ತನ್ನ ಹೆಸರು, ಊರು, ಧರ್ಮ ಬದಲಾಯಿಸಿ ತನಗೆ ಇಷ್ಟ ಪಟ್ಟವನ ಜೊತೆ ಸುಖವಾಗಿರಬೇಕು ಎಂದುಕೊಂಡಳು. ಐದು ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ಆ ವಿವಾಹಿತೆಯ ಪ್ರಕರಣದಲ್ಲಿ ಸಿನಿಮಾದಂತೆ ಕುತೂಹಲಕಾರಿ ಟ್ವಿಸ್ಟ್‌ಗಳನ್ನು ಹೊಂದಿವೆ ಓದಿ ನೋಡಿ.

ಹುಮಾಯ್​ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತನ್ನಲ್ಲಿರುವ ಕೋಟ್ಯಂತರ ರೂಪಾಯಿ ಸಂಪತ್ತಿನ ಬಗ್ಗೆ ಯೋಚಿಸದೆ ತಂದೆ-ತಾಯಿಯನ್ನು ಬಿಟ್ಟು, ಕಟ್ಟಿಕೊಂಡ ಗಂಡನನ್ನು ಬಿಟ್ಟು, ತಾನು ಬಯಸಿದ ಜೀವನವನ್ನು ನಡೆಸಲು ನಿರ್ಧರಿಸಿ, ಮನೆ ಬಿಟ್ಟುಹೋಗಲು ನಿರ್ಧರಿಸುತ್ತಾಳೆ. ಹಾಗಾಗಿ ಆಕೆ ಎರಡು ಮೂರು ಬಾರಿ ಮನೆ ಬಿಟ್ಟು ಹೋಗಲು ಪ್ರಯತ್ನ ಪಡುತ್ತಾಳೆ. ಆದರೆ ಧೈರ್ಯ ಬರಲಿಲ್ಲ. ಹೊರಗೆ ಹೋದವರು ಮನೆಗೆ ವಾಪಸಾಗಾಗುತ್ತಾರೆ. ಹಾಗೆ ವಾಪಸಾದ ನಂತರವೂ ತನ್ನ ಜೀವನ ಅಂದುಕೊಂಡಂತೆ ಇಲ್ಲ ಎಂದು ನೊಂದುಕೊಳ್ಳುತ್ತಾಳೆ. ಆದರೆ ಈ ಬಾರಿ ಮನಸ್ಸು ಗಟ್ಟಿ ಮಾಡಿಕೊಂಡು, ಮೊಬೈಲ್ ಸೇರಿದಂತೆ ಎಲ್ಲ ಸಾಕ್ಷ್ಯಗಳನ್ನು ಬಿಟ್ಟು ಮನೆಯಿಂದ ನಿರ್ಗಮಿಸುತ್ತಾರೆ.

ಜೂನ್ 29, 2018 ರಂದು ಹುಮಾಯ್​​ ನಗರದ 36 ವರ್ಷದ ವಿವಾಹಿತ ಮಹಿಳೆ ತಮ್ಮ ಮನೆಯನ್ನು ತೊರೆದು ಹೋಗಿದ್ದರು. ಕುಟುಂಬ ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಮೊಬೈಲ್ ಸೇರಿದಂತೆ ಎಲ್ಲ ಸಾಕ್ಷ್ಯಗಳನ್ನು ಮನೆಯಲ್ಲಿಟ್ಟು ಹೋಗಿದ್ದರು. ಅಂದಹಾಗೆ, ಮೊದಲಿನಿಂದಲೂ ಪತಿಯೊಂದಿಗೆ ಮಧುರ ಸಂಬಂಧ ಹೊಂದಿಲ್ಲದ ಆ ವಿವಾಹಿತ ಮಹಿಳೆ 2014-15ರಲ್ಲಿಯೇ ಮನೆ ತೊರೆದು ಹೋಗಿದ್ದರೂ ಹಿಂದಿರುಗಿದ್ದರು. ಆದರೆ ಈ ಬಾರಿ 2018ರಲ್ಲಿ ಮನೆ ಬಿಟ್ಟು ಹೋಗಿದ್ದ ವಿವಾಹಿತ ಮಹಿಳೆ, ಎಷ್ಟು ಬಾರಿ ಹುಡುಕಿದರೂ ಪತ್ತೆಯಾಗಿರಲಿಲ್ಲ. ಇತ್ತ, ಗಂಡನ ಕಿರುಕುಳದಿಂದಲೇ ಮಗಳು ಮನೆ ಬಿಟ್ಟು ಹೋಗಿದ್ದಾಳೆ ಎಂದು ಮನೆ ಬಿಟ್ಟು ಹೋಗಿದ್ದ ಆ ವಿವಾಹಿತ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

2019 ರಲ್ಲಿ, ವಿವಾಹಿತ ಮಹಿಳೆಯ ತಂದೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಮಹಿಳೆಯನ್ನು ಪತ್ತೆ ಹಚ್ಚಲು ಮಹಿಳಾ ಭದ್ರತಾ ವಿಭಾಗದ ಮಾನವ ಕಳ್ಳಸಾಗಣೆ ಘಟಕದಿಂದ ಸಹಾಯ ಪಡೆಯುವಂತೆ ಪೊಲೀಸರಿಗೆ ನ್ಯಾಯಾಲಯವು ಆದೇಶಿಸಿತು. ಅದರಂತೆ ಮಹಿಳಾ ಭದ್ರತಾ ಇಲಾಖೆಯು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಾಗ ವಿವಾಹಿತ ಮಹಿಳೆಯು ಕ್ಯಾಬ್ ಬುಕ್ ಮಾಡಲು ಮೊಬೈಲ್ ಬಳಸಿರುವುದು ಪತ್ತೆಯಾಗಿದೆ.

ಬಳಿಕ ಮಹಿಳೆಯ ವಾಯ್ಸ್ ರೆಕಾರ್ಡ್ ಕೂಡ ಸಂಗ್ರಹಿಸಿ ಆಕೆ ಪುಣೆಗೆ ಹೋಗಿದ್ದಾಳೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲಿಗೆ ಹೋದರೂ ಮಹಿಳೆ ಮತ್ತೆ ಫೋನ್ ಬಿಸಾಕಿ, ಸ್ವತಂತ್ರವಾಗಿ ತೆರಳಿದ್ದರು. ಅದರೊಂದಿಗೆ ಕೇಸು ಮತ್ತೆ ಮೊದಲ ಸ್ಥಿತಿಗೆ ಬಂದಂತಾಯಿತು. ವರ್ಷಗಳಾದರೂ ಆ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಲಿಲ್ಲ. ಆದರೆ ಕಳೆದ ತಿಂಗಳು ಆಕೆ ತನ್ನ ಆಧಾರ್ ಅನ್ನು ನವೀಕರಿಸಿದಾಗ, ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕಿತು.

ಪೊಲೀಸರು ಮತ್ತೆ ತನಿಖೆ ಆರಂಭಿಸಿದಾಗ ಆಕೆ ತನ್ನ ಆಧಾರ್ ಕಾರ್ಡ್ ವಿವರಗಳನ್ನು ಬದಲಾಯಿಸಿರುವುದು ಪತ್ತೆಯಾಗಿದೆ. ಊರಿನ ಹೆಸರು, ಧರ್ಮ, ಗಂಡನ ಹೆಸರು ಬದಲಾವಣೆ ಮಾಡಿರುವ ಆಧಾರ್ ಕಾರ್ಡ್ ಗುರುತಿಸಲಾಗಿದ್ದು, ಬ್ಯಾಂಕ್ ವಿವರ ಸೇರಿದಂತೆ ಸಾಮಾಜಿಕ ಜಾಲತಾಣದ ಖಾತೆ ಗುರುತಿಸಲಾಗಿದೆ. ಈ ವಿವರಗಳ ಆಧಾರದ ಮೇಲೆ ಆಕೆ ಗೋವಾದಲ್ಲಿ ಇರುವುದು ಪತ್ತೆಯಾಗಿದೆ. ಆ ಬಳಿಕ ಆಕೆಯನ್ನು ಗೋವಾದಿಂದ ಹೈದರಾಬಾದ್‌ಗೆ ಕರೆತಂದು ಕೋರ್ಟ್​​ಗೆ ಒಪ್ಪಿಸಲಾಗಿದೆ. ತನ್ನಿಷ್ಟದಂತೆ ಬದುಕಲು ಮನೆ ಬಿಟ್ಟು ಹೋಗಿದ್ದಾಗಿ ಮಹಿಳೆ ಕೋರ್ಟ್​​ಗೆ ತಿಳಿಸಿದ್ದಾಳೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ