ಅಯೋಧ್ಯೆಯಲ್ಲಿ ಶಿಲಾನ್ಯಾಸ ಹೊಸ ಅಧ್ಯಾಯಕ್ಕೆ ನಾಂದಿ: ಮೋಹನ್‌ ಭಾಗವತ್

| Updated By: Guru

Updated on: Aug 05, 2020 | 3:26 PM

ಅಯೋಧ್ಯಾ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಆರ್‌ ಎಸ್‌ ಎಸ್‌ ಮುಖಂಡ ಮೋಹನ್‌ ಭಾಗವತ್‌ ಅಭಿಪ್ರಾಯ ಪಟ್ಟಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ  ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್, “ಇಡೀ ದೇಶ ಇಂದು ಆನಂದಸಾಗರದಲ್ಲಿ ತೇಲುತ್ತಿದೆ. ದಶಕಗಳ ಕನಸು ಇವತ್ತು ಈಡೇರುತ್ತಿದೆ. ಅದಕ್ಕೂ ಮಿಗಿಲಾದ ಸಂತೋಷವೆಂದರೆ, ಭಾರತವನ್ನು ಆತ್ಮನಿರ್ಭರ ದೇಶವನ್ನಾಗಿ ಮಾರ್ಪಡಿಸಲು ಅಗತ್ಯವಿದ್ದ ಆತ್ಮವಿಶ್ವಾಸ ನಮಗೆ ಲಭ್ಯವಾಗುತ್ತಿರುವುದು […]

ಅಯೋಧ್ಯೆಯಲ್ಲಿ ಶಿಲಾನ್ಯಾಸ ಹೊಸ ಅಧ್ಯಾಯಕ್ಕೆ ನಾಂದಿ: ಮೋಹನ್‌ ಭಾಗವತ್
Follow us on

ಅಯೋಧ್ಯಾ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸುವ ಮೂಲಕ ಕೋಟ್ಯಂತರ ಭಾರತೀಯರ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ ಎಂದು ಆರ್‌ ಎಸ್‌ ಎಸ್‌ ಮುಖಂಡ ಮೋಹನ್‌ ಭಾಗವತ್‌ ಅಭಿಪ್ರಾಯ ಪಟ್ಟಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ  ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗವತ್, ಇಡೀ ದೇಶ ಇಂದು ಆನಂದಸಾಗರದಲ್ಲಿ ತೇಲುತ್ತಿದೆ. ದಶಕಗಳ ಕನಸು ಇವತ್ತು ಈಡೇರುತ್ತಿದೆ. ಅದಕ್ಕೂ ಮಿಗಿಲಾದ ಸಂತೋಷವೆಂದರೆ, ಭಾರತವನ್ನು ಆತ್ಮನಿರ್ಭರ ದೇಶವನ್ನಾಗಿ ಮಾರ್ಪಡಿಸಲು ಅಗತ್ಯವಿದ್ದ ಆತ್ಮವಿಶ್ವಾಸ ನಮಗೆ ಲಭ್ಯವಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ,” ಎಂದು ಭಾಗವತ್ ಹೇಳಿದರು.

ಭಾರತವನ್ನು ಆತ್ಮನಿರ್ಭರ ಮಾಡಲು ಆತ್ಮವಿಶ್ವಾಸದ ಅಗತ್ಯವಿತ್ತು, ಅದನ್ನು ಮುನ್ನಡೆಸಲು ಆಧ್ಯಾತ್ಮಿಕ ಶಕ್ತಿಯ ಅವಶ್ಯಕತೆ ಇತ್ತು. ಅಂಥ ಆತ್ಮವಿಶ್ವಾಸದ ವ್ಯಕ್ತಿ ಶಿಲಾನ್ಯಾಸ ನೆರವೇರಿಸಿದ್ದು ಸಂತಸವುಂಟು ಮಾಡಿದೆಎಲ್ಲವೂ ಶ್ರೀರಾಮನಿಗಾಗಿ, ಎಲ್ಲರಲ್ಲಿಯೂ ಶ್ರೀರಾಮನಿದ್ದಾನೆ,” ಎಂದು ಆರ್ ಎಸ್ ಎಸ್ ಮುಖಂಡ ಹೇಳಿದರು

ಈ ಸುದಿನವನ್ನು ನೋಡಲು ಅನೇಕ ಜನ ಬಲಿದಾನ ಮಾಡಿದ್ದಾರೆ, ಅವರಲ್ಲಿ ಹಲವಾರು ಜನ ಇಲ್ಲಿ ಭೌತಿಕವಾಗಿ ಹಾಜರಿಲ್ಲ. ದೇಶದಲ್ಲಿರುವ ಪ್ರಸ್ತುತ ಸ್ಥಿತಿಯ ಹಿನ್ನೆಲೆಯಲ್ಲಿ ಶ್ರೀ ಅಡ್ವಾಣಿ ಅವರು ಮನೆಯಲ್ಲೇ ಕುಳಿತು ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಾರೆ. ಕೊವಿಡ್ ಸೋಂಕು ಸಹಸ್ರಾರು ರಾಮಭಕ್ತರನ್ನು ಮನೆಗಳಲ್ಲಿ ಉಳಿಯುವಂತೆ ಮಾಡಿದ್ದು ಎಲ್ಲರಲ್ಲೂ ನಿರಾಶೆ ಮೂಡಿಸಿದೆಎಂದು ಭಾಗವತ್ ಹೇಳಿದರು.

ನಮ್ಮ ದೇಶ ವಸುದೇವ ಕುಟುಂಬಕಂತತ್ವದಲ್ಲಿ ನಂಬಿಕೆಯಿಟ್ಟಿದೆ. ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವುದು ನಮ್ಮ ದ್ಯೇಯವಾಗಿದೆ. ನವ್ಯ ಭಾರತದ ಇತಿಹಾಸದಲ್ಲಿ ನವೀನ ಅಧ್ಯಾಯವೊಂದು ಇವತ್ತು ಆರಂಭವಾಗಿದೆಎನ್ನುವ ಮೂಲಕ ಮೋಹನ್‌ ಭಾಗವತ್‌ ಶಿಲಾನ್ಯಾಸದ ಐತಿಹಾಸಿಕ ಮಹತ್ವವನ್ನು ವಿವರಿಸಿದರು.

Published On - 3:18 pm, Wed, 5 August 20