ಬೆಳಗಿನ ಜಾವ ದೊಪ್ಪನೆ ಕುಸಿಯಿತು ನಿರ್ಮಾಣ ಹಂತದಲ್ಲಿದ್ದ ದೊಡ್ಡ ಫ್ಲೈ ಓವರ್! ಆಮೇಲೆ ಏನಾಯ್ತು?

| Updated By: ಆಯೇಷಾ ಬಾನು

Updated on: Sep 17, 2021 | 8:32 AM

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಬಳಿ ನಿರ್ಮಾಣ ಹಂತದ ಫ್ಲೈಓವರ್ನ ಒಂದು ಭಾಗ ಕುಸಿದು ಬಿದ್ದಿದ್ದು ಹಲವಾರು ಕಾರ್ಮಿಕರು ಗಾಯಗೊಂಡಿದ್ದಾರೆ.

ಬೆಳಗಿನ ಜಾವ ದೊಪ್ಪನೆ ಕುಸಿಯಿತು ನಿರ್ಮಾಣ ಹಂತದಲ್ಲಿದ್ದ ದೊಡ್ಡ ಫ್ಲೈ ಓವರ್! ಆಮೇಲೆ ಏನಾಯ್ತು?
ನಿರ್ಮಾಣ ಹಂತದ ಫ್ಲೈಓವರ್ ಕುಸಿದು ಹಲವರಿಗೆ ಗಾಯ
Follow us on

ಮಹಾರಾಷ್ಟ್ರ: ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ ಬಳಿ ಅವಘಡವೊಂದು ಸಂಭವಿಸಿದೆ. ನಿರ್ಮಾಣ ಹಂತದ ಫ್ಲೈಓವರ್ನ ಒಂದು ಭಾಗ ಕುಸಿದು ಬಿದ್ದಿದ್ದು ಹಲವಾರು ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಕಾರ್ಯಾಚರಣೆ ಶುರು ಮಾಡಿದ್ದಾರೆ.

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಇಂದು ಬೆಳಗಿನ ಜಾವ 4:40 ರ ಸುಮಾರಿಗೆ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನ ಒಂದು ಭಾಗ ಕುಸಿದ ಬಿದಿದ್ದು 14 ಜನರಿಗೆ ಗಾಯಗಳಾಗಿವೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ವಲಯ 8ರ ಪೊಲೀಸ್ ಉಪ ಆಯುಕ್ತರಾದ ಮಂಜುನಾಥ ಸಿಂಗೆ ತಿಳಿಸಿದರು.

ಇನ್ನು ಘಟನೆಯಲ್ಲಿ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆಯೇ ಎಂದು ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಕಂಡು ಬಂದಿಲ್ಲ. ಮತ್ತು ಯಾವುದೇ ವ್ಯಕ್ತಿ ಕಾಣೆಯಾಗಿಲ್ಲ ಎಂದು ಡಿಸಿಪಿ ಮಾಹಿತಿ ನೀಡಿದರು.

ಇದನ್ನೂ ಓದಿ: ಸಂಜಯನಗರ ಬಸ್‌ ಸ್ಟಾಪ್‌ ಬಳಿ ಗುಂಡು ಹಾರಿಸಿಕೊಂಡು ಮೃತಪಟ್ಟ ಪ್ರತಿಭಾನ್ವಿತ ವಿದ್ಯಾರ್ಥಿ; ಪೋಷಕರು ಕಂಗಾಲು

Published On - 8:23 am, Fri, 17 September 21