
ವಿಶಾಖಪಟ್ಟಣಂ, ಜನವರಿ 20: ಹಬ್ಬಕ್ಕೆ ಅಮ್ಮ ಸೀರೆ ಕೊಡಿಸಿಲ್ಲವೆಂದು 14 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ(Suicide)ಯಂತದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದು ಹೆಚ್ಚಾಗಿದೆ. ಓದು ಅಂದಿದ್ದಕ್ಕೆ, ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಹೀಗೆ ಸಣ್ಣ ಸಣ್ಣ ವಿಚಾರಗಳನ್ನೂ ಅವರು ದೊಡ್ಡದಾಗಿ ತೆಗೆದುಕೊಳ್ಳುತ್ತಿದ್ದಾರೆ.
ಅಮ್ಮ ಸೀರೆ ಕೊಡಿಸಿಲ್ಲವೆಂದು ಈ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ತಂದೆ ಟೈಲರ್ ಆಗಿದ್ದು, ಅಜ್ಜ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಜ್ಜ-ಅಜ್ಜಿ ಊರಿಗೆ ಹೋಗಿರುವಾಗ ಆಕೆ ತನ್ನ ತಾಯಿಯ ಜತೆ ಏನಾದರೂ ಖರೀದಿ ಮಾಡಬೇಕು ಎಂದು ಹೋಗಿದ್ದಳು.
ಆಗ ತಾಯಿ ಬಳಿ ಸೀರೆ ಕೊಡಿಸು ಎಂದು ಕೇಳಿದ್ದಾಳೆ, ಆಗ ನೀನಿನ್ನು ಚಿಕ್ಕವಳು ಅದನ್ನು ಬಿಟ್ಟು ಬೇರೇನಾದರೂ ಕೇಳು ಕೊಡಿಸುತ್ತೇನೆ ಎಂದು ಶಾಂತವಾಗಿಯೇ ಹೇಳಿದ್ದರು. ಆದರೆ ಆಕೆ ತುಂಬಾ ಹಠ ಮಾಡಿದ್ದಳು. ಮನೆಗೆ ಬಂದು ಅಮ್ಮ ಎಷ್ಟೇ ಸಮಾಧಾನ ಪಡಿಸಿದರೂ ಸಮಾಧಾನವಾಗಲೇ ಇಲ್ಲ.
ಅಸಮಾಧಾನದಿಂದ ತನ್ನ ಅಜ್ಜನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮತ್ತಷ್ಟು ಓದಿ: ಗಂಡನ ಜತೆ ಜಗಳ: 4 ವರ್ಷ ಮಗಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಮಗಳು ಎಲ್ಲೂ ಕಾಣದಿದ್ದಾಗ ತನ್ನ ಹಿರಿಯ ಮಗಳ ಬಳಿ ಆಕೆಗೆ ಕರೆ ಮಾಡಲು ಕೇಳಿದ್ದಾರೆ, ಆದರೂ ಆಕೆ ಕರೆ ರಿಸೀವ್ ಮಾಡಿರಲಿಲ್ಲ. ಕೊನೆಗೆ ಇಡೀ ಮನೆಯಲ್ಲಾ ಹುಡುಕಿದ್ದಾರೆ. ಆಗ ಅಜ್ಜನ ಕೋಣೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮತ್ತೊಂದು ಘಟನೆ
ಪತಿ ಹೊಸ ಮೊಬೈಲ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ಪತ್ನಿ
ಸಣ್ಣ ಪುಟ್ಟ ವಿಚಾರಗಳಿಗೆ ಆತ್ಮಹತ್ಯೆ(Suicide)ಯಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಷ್ಟು ಮನಸ್ಥಿತಿ ಸೂಕ್ಷ್ಮವಾಗುತ್ತಿದೆ ಎಂಬುದು ಕಳವಳಕಾರಿ ಸಂಗತಿ. ಪತಿ ಹೊಸ ಮೊಬೈಲ್ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್ನ ಮೋಡಸಾದಲ್ಲಿ ನಡೆದಿದೆ.ಶನಿವಾರ ಈ ಘಟನೆ ನಡೆದಿದೆ. ಊರ್ಮಿಳಾ ಎಂಬ ಮಹಿಳೆ ಪತಿಯೊಂದಿಗೆ ಚೀನೀ ಆಹಾರ ವ್ಯವಹಾರ ನಡೆಸುತ್ತಿದ್ದರು.
ಮೂಲಗಳ ಪ್ರಕಾರ, ಮಹಿಳೆ ಕೆಲವು ದಿನಗಳ ಹಿಂದೆ ತನ್ನ ಪತಿಗೆ ಹೊಸ ಮೊಬೈಲ್ ಫೋನ್ ಕೇಳಿದ್ದರು. ಆದರೆ, ಆರ್ಥಿಕ ತೊಂದರೆಗಳನ್ನು ಉಲ್ಲೇಖಿಸಿ ಆ ವ್ಯಕ್ತಿ ನಿರಾಕರಿಸಿದ್ದರು. ಅದಕ್ಕೆ ಬೇಸರಗೊಂಡಿದ್ದ ಊರ್ಮಿಳಾ ಮತ್ತು ಪತಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು. ಮಹಿಳೆ ತನ್ನ ಮನೆಯಲ್ಲಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.
ಸ್ಥಳೀಯ ಪೊಲೀಸರಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಯಿತು ಮತ್ತು ಮಾಹಿತಿ ಪಡೆದ ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಆಕಸ್ಮಿಕ ಸಾವು ಎಂದು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ