ಕಲಾಕೃತಿಯಲ್ಲಿ ಶ್ರೀರಾಮನ ಭವ್ಯ ಚರಿತ್ರೆ ಅಯೋಧ್ಯೆಯಲ್ಲಿ ಮಾತ್ರ

ಅಯೋಧ್ಯಾ: ಅಯೋಧ್ಯೆಯಲ್ಲಿ ಆಗಸ್ಟ್‌ ಐದರಂದು ರಾಮ ಮಂದಿರದ ನಿರ್ಮಾಣ ಶಿಲಾನ್ಯಾಸ ನೆರವೇರಲಿದೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಬಹುದಿನಗಳ ರಾಮ ಭಕ್ತರ ಕನಸು ನನಸು ಮಾಡುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಇಡೀ ರಾಮಾಯಣವನ್ನೇ ಕಲ್ಲಿನ ಕೆತ್ತನೆಯಲ್ಲಿ ಹೇಳುವ ಶಿಲ್ಪಕಲೆಯ ಮೂರ್ತಿಗಳನ್ನ ತಯಾರು ಮಾಡಲಾಗುತ್ತಿದೆ. ಇದಕ್ಕಾಗಿ ಆಸ್ಸಾಂನಿಂದ ವಿಶೇಷವಾಗಿ ನುರಿತ ಶಿಲ್ಪಕಲಾಕಾರರು ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಶ್ರೀರಾಮನ ಬಾಲ್ಯದಿಂದ ಹಿಡಿದು ಪಟ್ಟಾಭಿಷೇಕದ ವರೆಗಿನ ಶ್ರೀರಾಮನ ಲೀಲೆಗಳನ್ನು ಈ ಮೂರ್ತಿಗಳ ಮುಖಾಂತರ ಭಕ್ತರಿಗೆ ತಿಳಿಸುವ […]

ಕಲಾಕೃತಿಯಲ್ಲಿ ಶ್ರೀರಾಮನ ಭವ್ಯ ಚರಿತ್ರೆ ಅಯೋಧ್ಯೆಯಲ್ಲಿ ಮಾತ್ರ

Updated on: Aug 02, 2020 | 7:27 PM

ಅಯೋಧ್ಯಾ: ಅಯೋಧ್ಯೆಯಲ್ಲಿ ಆಗಸ್ಟ್‌ ಐದರಂದು ರಾಮ ಮಂದಿರದ ನಿರ್ಮಾಣ ಶಿಲಾನ್ಯಾಸ ನೆರವೇರಲಿದೆ. ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸುವ ಮೂಲಕ ಬಹುದಿನಗಳ ರಾಮ ಭಕ್ತರ ಕನಸು ನನಸು ಮಾಡುತ್ತಿದ್ದಾರೆ. ಆದ್ರೆ ಇನ್ನೊಂದೆಡೆ ಇಡೀ ರಾಮಾಯಣವನ್ನೇ ಕಲ್ಲಿನ ಕೆತ್ತನೆಯಲ್ಲಿ ಹೇಳುವ ಶಿಲ್ಪಕಲೆಯ ಮೂರ್ತಿಗಳನ್ನ ತಯಾರು ಮಾಡಲಾಗುತ್ತಿದೆ.

ಇದಕ್ಕಾಗಿ ಆಸ್ಸಾಂನಿಂದ ವಿಶೇಷವಾಗಿ ನುರಿತ ಶಿಲ್ಪಕಲಾಕಾರರು ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆಯಲ್ಲಿ ತೊಡಗಿದ್ದಾರೆ. ಶ್ರೀರಾಮನ ಬಾಲ್ಯದಿಂದ ಹಿಡಿದು ಪಟ್ಟಾಭಿಷೇಕದ ವರೆಗಿನ ಶ್ರೀರಾಮನ ಲೀಲೆಗಳನ್ನು ಈ ಮೂರ್ತಿಗಳ ಮುಖಾಂತರ ಭಕ್ತರಿಗೆ ತಿಳಿಸುವ ಮಹತ್ತರ ಕಾರ್ಯವಿದು. ಇದಕ್ಕಾಗಿ 2013ರಿಂದಲೇ ಕಲಾಕಾರರು ಕಾರ್ಯ ಆರಂಭಿಸಿದ್ದಾರೆ.

ರಂಜಿತ್‌ ಮಂಡಲ್‌ ಎನ್ನುವ ಕಲಾಕಾರನ ನೇತೃತ್ವದಲ್ಲಿ ತಯಾರಾಗುತ್ತಿರುವ ಈ ಕಲಾಕೃತಿಗಳಲ್ಲಿ ಶ್ರೀರಾಮ, ಲಕ್ಷ್ಮಣ, ಭರತ್‌ ಮತ್ತು ಶತೃಘ್ನರ ಮೂರ್ತಿಗಳು ಇರುತ್ತವೆ. ಇದಕ್ಕಾಗಿ ಮಂಡಲ್‌ ಜೊತೆ ಆತನ ತಂದೆ ಸೇರಿದಂತೆ ಹಲವಾರು ನುರಿತ ಕುಶಲಕರ್ಮಿಗಳು ಕೆತ್ತನೆ ಕಾರ್ಯ ಮಾಡುತ್ತಿದ್ದಾರೆ. ಈ ಎಲ್ಲ ಮೂರ್ತಿಗಳು ಪಕ್ಕಾ ಉತ್ತರ ಪ್ರದೇಶಿಯ ಶೈಲಿಯಲ್ಲಿರುತ್ತವೆ.

ಕೆತ್ತನೆ ಶೈಲಿ ಉತ್ತರ ಪ್ರದೇಶದ ಮಾದರಿಯಲ್ಲಿದ್ದರೂ ವಸ್ತ್ರಾಭರಣಗಳು ಮಾತ್ರ ಬಂಗಾಳಿ ಶೈಲಿಯಲ್ಲಿರುವತ್ತವೆ. ಹಾಗಂತ ಖುದ್ದು ಕುಶಲಕರ್ಮಿ ರಂಜಿತ್‌ ಮಂಡಲ್‌ ಅವರೇ ಹೇಳಿದ್ದಾರೆ. ಅಯೋಧ್ಯೆಗೆ ಬರುವ ಭಕ್ತರು ಈ ಕಲಾಕೃತಿಯ ಮೂಲಕವೇ ರಾಮಾಯಣವನ್ನು ಅರ್ಥಮಾಡಿಕೊಳ್ಳುವ ಯೋಚನೆ ಈ ಕಲಾಕೃತಿಗಳ ರಚನೆಯ ಹಿಂದಿನ ಉದ್ದೇಶ.