ಮನೆಯಲ್ಲಿ ಜಾಗವಿಲ್ಲದೆ, ಮರದ ಮೇಲೆ 11 ದಿನ ಐಸೋಲೇಟ್ ಆದ ಕೊವಿಡ್​ 19 ಸೋಂಕಿತ ಯುವಕ..

|

Updated on: May 16, 2021 | 8:53 PM

ಈ ಯುವಕನ ಹೆಸರು ಶಿವ. ಕೊರೊನಾ ಸೋಂಕಿತನಾಗಿದ್ದು, ಸೌಮ್ಯ ಲಕ್ಷಣಗಳು ಇದ್ದವು. ಆದರೆ ಮನೆಯಲ್ಲಿ ಐಸೋಲೇಟ್ ಆಗೋಣವೆಂದರೆ ಜಾಗವಿಲ್ಲ. ಬೇರೆ ದಾರಿ ಕಾಣದೆ ಈತ ಮನೆಯಿಂದ ಸ್ವಲ್ಪದೂರದಲ್ಲಿರುವ ಮರವನ್ನೇ ಆಶ್ರಯಿಸಿದ್ದಾನೆ.

ಮನೆಯಲ್ಲಿ ಜಾಗವಿಲ್ಲದೆ, ಮರದ ಮೇಲೆ 11 ದಿನ ಐಸೋಲೇಟ್ ಆದ ಕೊವಿಡ್​ 19 ಸೋಂಕಿತ ಯುವಕ..
ತೆಲೆಂಗಾಣದಲ್ಲಿ ಯುವಕ ಮರ ಏರಿ ಕುಳಿತಿರುವುದು
Follow us on

ಹೈದರಾಬಾದ್​: ತೆಲಂಗಾಣದ ನಲಗೊಂಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕೊವಿಡ್​ 19 ರೋಗಿಗಳಿಗೆ ಮನೆಯಲ್ಲಿ ಐಸೋಲೇಟ್​ ಆಗುವುದೇ ದೊಡ್ಡ ಸಮಸ್ಯೆಯಾಗಿದೆ. ಈ ಹಳ್ಳಿಯ ಹಲವು ಮನೆಗಳು ಕೇವಲ ಒಂದೇ ಕೋಣೆಯನ್ನು ಹೊಂದಿವೆ..ಹೀಗಾಗಿ ಕೊರೊನಾ ಸೋಂಕಿತರು ಪ್ರತ್ಯೇಕವಾಗಿ ಇರಲು ಸಾಧ್ಯವೇ ಆಗುತ್ತಿಲ್ಲ. ಈ ವಿಚಾರ ಬೆಳಕಿಗೆ ಬಂದಿದ್ದು, 18 ವರ್ಷದ ಕೊರೊನಾ ಸೋಂಕಿನ ಯುವಕನೊಬ್ಬ ಮರದ ಮೇಲೆ ಐಸೋಲೇಟ್ ಆದ ಫೋಟೋ ವೈರಲ್ ಆದಬಳಿಕ.. !

ಈ ಯುವಕನ ಹೆಸರು ಶಿವ. ಕೊರೊನಾ ಸೋಂಕಿತನಾಗಿದ್ದು, ಸೌಮ್ಯ ಲಕ್ಷಣಗಳು ಇದ್ದವು. ಆದರೆ ಮನೆಯಲ್ಲಿ ಐಸೋಲೇಟ್ ಆಗೋಣವೆಂದರೆ ಜಾಗವಿಲ್ಲ. ಬೇರೆ ದಾರಿ ಕಾಣದೆ ಈತ ಮನೆಯಿಂದ ಸ್ವಲ್ಪದೂರದಲ್ಲಿರುವ ಮರದ ಮೇಲೆ ಬಂಬೂ ಕೋಲುಗಳಿಂದ ಸಣ್ಣ ಮಂಚ ನಿರ್ಮಿಸಿಕೊಂಡು, ಅದರ ಮೇಲೆಲ್ಲ ಬೆಡ್​ಶೀಟ್​ ಹಾಕಿಕೊಂಡು ಐಸೋಲೇಟ್​ ಕೋಣೆ ಮಾಡಿಕೊಂಡಿದ್ದಾರೆ. ಈ ಯುವಕ ಮರದ ಮೇಲೆ ಕುಳಿತು, ಮೊಬೈಲ್​ ನೋಡುತ್ತಿರುವ ಫೋಟೋ ವೈರಲ್ ಆಗಿದೆ.

ನಲಗೊಂಡ ಜಿಲ್ಲೆಯ ಕೋಠಾನಂದಿಕೊಂಡಾ ಎಂಬ ಬುಡಕಟ್ಟು ಜನಾಂಗದವರ ಹಳ್ಳಿಯ ನಿವಾಸಿ ಈ ಶಿವ. ಇವರಿಗೆ ಕೊರೊನಾ ಸೋಂಕು ಇರುವುದು ಮೇ 4ರಂದು ದೃಢಪಟ್ಟಿತ್ತು. ಆ ಹಳ್ಳಿಯಲ್ಲಿ ಕೊರೊನಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆಲವು ಸ್ವಯಂ ಸೇವಕರು ಶಿವ ಅವರ ಬಳಿ ನೀವು ಮನೆಯಿಂದ ಪ್ರತ್ಯೇಕವಾಗಿರಿ ಎಂದು ಹೇಳಿದರು. ಆದರೆ ಮನೆಯಲ್ಲಿ ಸ್ಥಳವೇ ಇಲ್ಲದ ಕಾರಣ ಹೀಗೆ ಮರ ಹತ್ತಬೇಕಾಯಿತು ಎಂದು ಶಿವ ಅವರು ಕೊರೊನಾ ಸೋಂಕಿನಿಂದ ಗುಣಮುಖರಾದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಹಾಗೇ, ಇದೇ ಮರದ ಮೇಲೆ ಅವರು 11ದಿನ ಕಳೆದಿದ್ದಾರೆ ಎಂದೂ ಹೇಳಿಕೊಂಡಿದ್ದಾರೆ.

ಕೋಠಾನಂದಿಕೊಂಡಾದಲ್ಲಿ ಸುಮಾರು 350 ಕುಟುಂಬಗಳು ವಾಸವಾಗಿವೆ. ಇಲ್ಲಿಂದ ಸಮೀಪದ ಆರೋಗ್ಯಕೇಂದ್ರಕ್ಕೆ ಹೋಗಬೇಕು ಎಂದರೆ 5 ಕಿಮೀ ದೂರ ಹೋಗಬೇಕು. ಹಾಗೇ, ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದರೆ ಚಿಕಿತ್ಸೆ ಪಡೆಯಲು 30 ಕಿಮೀ ದೂರ ಸಾಗಬೇಕು. ಇನ್ನು ಈ ಯುವಕ ಮರದ ಮೇಲೆ ಐಸೋಲೇಟ್ ಆದ ಬಗ್ಗೆ, ಅಲ್ಲಿನ ಆರೋಗ್ಯ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಲು ಮಾಧ್ಯಮವೊಂದು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿತ್ತು. ಆದರೆ ಜಿಲ್ಲಾಧಿಕಾರಿ ಸೇರಿ, ಯಾವುದೇ ಅಧಿಕಾರಿಗಳೂ ಕರೆ ಸ್ವೀಕರಿಸುತ್ತಿಲ್ಲ ಎಂದು ಮಾಧ್ಯಮ ಪ್ರಕಟಿಸಿದೆ.

ಇದನ್ನೂ ಓದಿ: ಈ ಬುದ್ಧಿ ಮ್ಯಾಚ್ ಫಿಕ್ಸಿಂಗ್ ವೇಳೆ ಇರಬೇಕಿತ್ತು; ಕೊಹ್ಲಿ ಪರ ಮಾತನಾಡಿದ್ದ ಪಾಕ್ ಕ್ರಿಕೆಟಿಗನಿಗೆ ವಾನ್ ತರಾಟೆ

Covid-19 Karnataka Update: ಕಳೆದ 24 ಗಂಟೆಗಳಲ್ಲಿ ಬೆಂಗಳೂರಲ್ಲಿ 8,344, ಇತರ ಜಿಲ್ಲೆಗಳಲ್ಲಿ 23,197 ಕೊವಿಡ್ ಸೋಂಕಿತರು ಪತ್ತೆ

(A student who infected by coronavirus isolated on tree in Telangana)