AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಬುದ್ಧಿ ಮ್ಯಾಚ್ ಫಿಕ್ಸಿಂಗ್ ವೇಳೆ ಇರಬೇಕಿತ್ತು; ಕೊಹ್ಲಿ ಪರ ಮಾತನಾಡಿದ್ದ ಪಾಕ್ ಕ್ರಿಕೆಟಿಗನಿಗೆ ವಾನ್ ತರಾಟೆ

ಸಲ್ಮಾನ್ ಬಟ್ ನೀಡಿರುವ ಹೇಳಿಕೆಗಳನ್ನು ಕೇಳಿದ್ದೇನೆ, ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ ಆದರೆ ಇಷ್ಟೊಂದು ಬುದ್ಧಿ ಆತನಿಗೆ 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವಾಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

ಈ ಬುದ್ಧಿ ಮ್ಯಾಚ್ ಫಿಕ್ಸಿಂಗ್ ವೇಳೆ ಇರಬೇಕಿತ್ತು; ಕೊಹ್ಲಿ ಪರ ಮಾತನಾಡಿದ್ದ ಪಾಕ್ ಕ್ರಿಕೆಟಿಗನಿಗೆ ವಾನ್ ತರಾಟೆ
ಮೈಕೆಲ್ ವಾನ್ ಮತ್ತು ವಿರಾಟ್​ ಕೊಹ್ಲಿ
ಪೃಥ್ವಿಶಂಕರ
|

Updated on: May 16, 2021 | 8:03 PM

Share

ಈ ಹಿಂದೆ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್‌ರನ್ನು ಹೋಲಿಸಿದ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್, ನ್ಯೂಜಿಲೆಂಡ್ ನಾಯಕನನ್ನು ಅತ್ಯುತ್ತಮ ಎಂದು ಬಣ್ಣಿಸಿದ್ದರು. ಇದಕ್ಕೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ತೀವ್ರವಾಗಿ ಪ್ರತಿಕ್ರಿಯಿಸಿದರು. ವಾನ್ ಅವರ ವಿಶ್ಲೇಷಣೆ ನಿಷ್ಪ್ರಯೋಜಕವಾಗಿದೆ ಎಂದು ಅವರು ಹೇಳಿದ್ದಲ್ಲದೆ, ವಿವಾದವನ್ನು ಉಂಟುಮಾಡುವ ವಿಷಯಗಳನ್ನು ಮಾತನಾಡುವುದು ಅವರ ಅಭ್ಯಾಸವಾಗಿದೆ ಎಂದು ಸಲ್ಮಾನ್ ಹೇಳಿದ್ದರು. ಬಟ್​ ಪ್ರತಿಕ್ರಿಯೆಗೆ ಕೆಂಡವಾಗಿರುವ ವಾನ್, ಸಲ್ಮಾನ್ ಬಟ್ ಅವರನ್ನು ಮ್ಯಾಚ್ ಫಿಕ್ಸರ್ ಎಂದು ಕೆಣಕಿದರು. ಇದಕ್ಕೂ ಮೊದಲು ಸ್ಪಾರ್ಕ್ ಸ್ಪೋರ್ಟ್‌ನೊಂದಿಗೆ ಮಾತನಾಡುವಾಗ ವಾನ್, ವಿಲಿಯಮ್ಸನ್ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್ ಕೊಹ್ಲಿಗೆ ಸಮಾನರು, ಆದರೆ ಜನಪ್ರಿಯತೆಯಿಂದಾಗಿ, ಭಾರತೀಯ ನಾಯಕ ಅತ್ಯುತ್ತಮ ಎಂದು ಜನರು ಪರಿಗಣಿಸಿದ್ದಾರೆ ಎಂದು ಹೇಳಿದ್ದರು. ವಾನ್ ಅವರ ಹೇಳಿಕೆಯ ನಂತರ, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು.

ಕೊಹ್ಲಿ ಅತ್ಯುತ್ತಮವಾದ ಆಟಗಾರ ಈಗ ವಾನ್ ವಿರುದ್ಧ ಪಾಕಿಸ್ತಾನ ಪರ 33 ಟೆಸ್ಟ್, 78 ಏಕದಿನ ಮತ್ತು 24 ಟಿ 20 ಪಂದ್ಯಗಳನ್ನು ಆಡಿದ ಸಲ್ಮಾನ್ ಬಟ್ ಮುರುದು ಬಿದ್ದಿದ್ದರು. ಕೊಹ್ಲಿ ಅತ್ಯುತ್ತಮವಾದ ಆಟಗಾರ ಏಕೆಂದರೆ ಅವರ ದಾಖಲೆಯು ಅವರನ್ನು ಅತ್ಯುತ್ತಮ ಎಂದು ಸಾಬೀತುಪಡಿಸಿದೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ ಹಾಗೂ ಜಾಹೀರಾತಿನಲ್ಲಿ ಅಪಾರವಾದ ಹಣವನ್ನು ದುಡಿಯುತ್ತಾರೆ. ಕೊಹ್ಲಿ ಸಾಕಷ್ಟು ಜನಸಂಖ್ಯೆ ಇರುವ ದೇಶದಿಂದ ಬಂದವರು. ಅವರನ್ನು ಇಷ್ಟಪಡುವವರು ಹೆಚ್ಚು ಇದ್ದಾರೆ ಎಂಬುದು ಆಶ್ಚರ್ಯವೇನಲ್ಲ. ಅದೇ ಸಮಯದಲ್ಲಿ, ಅವರ ಅಭಿನಯವೂ ಉತ್ತಮವಾಗಿದೆ. ವಿರಾಟ್ ಅವರ ಹೆಸರಿನಲ್ಲಿ 70 ಅಂತರರಾಷ್ಟ್ರೀಯ ಶತಕಗಳಿವೆ. ಈ ಯುಗದ ಯಾವುದೇ ಬ್ಯಾಟ್ಸ್‌ಮನ್ ಇಷ್ಟು ಶತಕಗಳನ್ನು ಗಳಿಸಿಲ್ಲ. ಅವರು ದೀರ್ಘಕಾಲದವರೆಗೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಅವರ ಬ್ಯಾಟಿಂಗ್ ಅದ್ಭುತವಾಗಿದೆ ಎಂದು ಸಲ್ಮಾನ್ ಬಟ್ ಕೊಹ್ಲಿಯನ್ನು ಹೊಗಳಿದ್ದರು.

ವಾನ್​ಗೆ ಒಂದು ಶತಕ ಗಳಿಸಲು ಸಾಧ್ಯವಾಗಲಿಲ್ಲ ಮೈಕೆಲ್ ವಾನ್ ಅವರನ್ನು ಗುರಿಯಾಗಿಸಿಕೊಂಡ ಸಲ್ಮಾನ್ ಬಟ್, ಅವರು ಉತ್ತಮ ನಾಯಕರಾಗಿದ್ದರು ಆದರೆ ವಾಘನ್ ಅವರ ಬ್ಯಾಟಿಂಗ್ ಏಕದಿನ ಪಂದ್ಯಗಳಲ್ಲಿ ಅಷ್ಟೊಂದು ವಿಶೇಷವಲ್ಲ ಎಂದು ಹೇಳಿದರು. ಜೊತೆಗೆ ಅವರು ಉತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದರು ಆದರೆ ವಾನ್ ಏಕದಿನ ಪಂದ್ಯಗಳಲ್ಲಿ ಒಂದು ಶತಕ ಕೂಡ ಬಾರಿಸಲಿಲ್ಲ. ಓಪನರ್ ಆಗಿದ್ದರೂ ನೀವು ಶತಕ ಗಳಿಸಿಲ್ಲ. ಹೀಗಾಗಿ ನೀವು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಈ ಬುದ್ಧಿ ಮ್ಯಾಚ್ ಫಿಕ್ಸಿಂಗ್ ವೇಳೆ ಇರಬೇಕಿತ್ತು ಇದೀಗ ಸಲ್ಮಾನ್ ಬಟ್ ಹೇಳಿಕೆಗೆ ಪ್ರತಿಕ್ರಿಯಿಸುವುದರ ಮೂಲಕ ಮೈಕಲ್ ವಾನ್ ತಿರುಗೇಟು ನೀಡಿದ್ದಾರೆ. ಸಲ್ಮಾನ್ ಬಟ್ ನೀಡಿರುವ ಹೇಳಿಕೆಗಳನ್ನು ಕೇಳಿದ್ದೇನೆ, ಆತ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ ಆದರೆ ಇಷ್ಟೊಂದು ಬುದ್ಧಿ ಆತನಿಗೆ 2010ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಕೊಳ್ಳುವಾಗ ಇದ್ದಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಮೈಕಲ್ ವಾನ್ ಸಲ್ಮಾನ್ ಭಟ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

2010 ರ ಇಂಗ್ಲೆಂಡ್ ಪ್ರವಾಸದಲ್ಲಿ ಸಲ್ಮಾನ್ ಬಟ್ ನಾಯಕನಾಗಿದ್ದಾಗ ಪಾಕಿಸ್ತಾನದ ಆಟಗಾರರು ಮಾಡಿದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ವಾಘನ್ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಫಿಕ್ಸಿಂಗ್ನಲ್ಲಿ ಬಟ್ ಸ್ವತಃ ತೊಡಗಿಸಿಕೊಂಡಿದ್ದ. ಅಲ್ಲದೆ ಮೊಹಮ್ಮದ್ ಆಸಿಫ್ ಮತ್ತು ಮೊಹಮ್ಮದ್ ಅಮೀರ್ ಅವರೊಂದಿಗೆ ಪಾಲುದಾರರಾಗಿದ್ದರು. ಈ ಪ್ರಕರಣದಲ್ಲಿ ಮೂವರಿಗೂ ಶಿಕ್ಷೆಯಾಗಿದೆ.

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್