AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ನಿದ್ದೆ ಬರುತ್ತಿರಲಿಲ್ಲ, 24 ವರ್ಷಗಳ ಕ್ರಿಕೆಟ್​ನಲ್ಲಿ ಭಾಗಶಃ ಜೀವನವನ್ನು ಒತ್ತಡದಲ್ಲೇ ಕಳೆದೆ: ಸಚಿನ್ ತೆಂಡೂಲ್ಕರ್

Sachin Tendulkar: ನಾನು 10-12 ವರ್ಷಗಳ ಕಾಲ ಒತ್ತಡಕ್ಕೊಳಗಾಗಿದ್ದೆ, ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ನಂತರ ಇದು ನನ್ನ ತಯಾರಿಕೆಯ ಭಾಗ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸಿದೆ: ಸಚಿನ್ ತೆಂಡೂಲ್ಕರ್

ರಾತ್ರಿ ನಿದ್ದೆ ಬರುತ್ತಿರಲಿಲ್ಲ, 24 ವರ್ಷಗಳ ಕ್ರಿಕೆಟ್​ನಲ್ಲಿ ಭಾಗಶಃ ಜೀವನವನ್ನು ಒತ್ತಡದಲ್ಲೇ ಕಳೆದೆ: ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್
ಪೃಥ್ವಿಶಂಕರ
| Updated By: Digi Tech Desk|

Updated on:May 17, 2021 | 9:55 AM

Share

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ವೃತ್ತಿಜೀವನದ ಪ್ರಮುಖ ಭಾಗವನ್ನು ಒತ್ತಡದಲ್ಲಿ ಕಳೆದಿದ್ದೆ ಎಂದು ಹೇಳಿದ್ದಾರೆ. ಪಂದ್ಯದ ಮುಂಚಿನ ಉದ್ವಿಗ್ನತೆಯು ಆಟದ ಸಿದ್ಧತೆಯ ಪ್ರಮುಖ ಭಾಗವಾಗಿದೆ ಎಂದು ನಾನು ನಂತರ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದರು. ಕೊವಿಡ್ -19 ರ ಸಮಯದಲ್ಲಿ ಬಯೋ-ಬಬಲ್‌ನಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್, ಅದನ್ನು ಎದುರಿಸಲು ಅದರ ಸ್ವೀಕಾರ ಅಗತ್ಯ ಎಂದು ಹೇಳಿದರು. ಅಕಾಡೆಮಿ ಆಯೋಜಿಸಿದ್ದ ಚರ್ಚೆಯಲ್ಲಿ ಸಚಿನ್, ಆಟಕ್ಕೆ ದೈಹಿಕವಾಗಿ ತಯಾರಿ ಮಾಡುವುದರ ಜೊತೆಗೆ, ನೀವು ಮಾನಸಿಕವಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಕಾಲಾನಂತರದಲ್ಲಿ ನಾನು ಅರಿತುಕೊಂಡೆ. ನನ್ನ ಮನಸ್ಸಿನಲ್ಲಿ, ನಾನು ಮೈದಾನಕ್ಕೆ ಪ್ರವೇಶಿಸುವ ಮೊದಲೇ ಪಂದ್ಯವು ಪ್ರಾರಂಭವಾಗುತ್ತಿತ್ತು. ಒತ್ತಡದ ಮಟ್ಟ ತುಂಬಾ ಹೆಚ್ಚಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ ನಾನು 10-12 ವರ್ಷಗಳ ಕಾಲ ಒತ್ತಡಕ್ಕೊಳಗಾಗಿದ್ದೆ, ರಾತ್ರಿಯಲ್ಲಿ ನಿದ್ದೆ ಬರುತ್ತಿರಲಿಲ್ಲ. ನಂತರ ಇದು ನನ್ನ ತಯಾರಿಕೆಯ ಭಾಗ ಎಂದು ಒಪ್ಪಿಕೊಳ್ಳಲು ಪ್ರಾರಂಭಿಸಿದೆ. ರಾತ್ರಿಯಲ್ಲಿ ನಿದ್ದೆ ಮಾಡಲು ನನಗೆ ತೊಂದರೆ ಇದೆ ಎಂದು ನಾನು ಕಾಲಾನಂತರದಲ್ಲಿ ಒಪ್ಪಿಕೊಂಡೆ. ನನ್ನ ಮನಸ್ಸನ್ನು ಹಾಯಾಗಿಡಲು ನಾನು ಏನಾದರೂ ಮಾಡುತ್ತಿದ್ದೆ. ಅವುಗಳಲ್ಲಿ ಬ್ಯಾಟಿಂಗ್ ಅಭ್ಯಾಸ, ಟಿವಿ ನೋಡುವುದು ಮತ್ತು ವಿಡಿಯೋ ಗೇಮ್‌ಗಳನ್ನು ಆಡುವುದರ ಜೊತೆಗೆ ಬೆಳಿಗ್ಗೆ ಚಹಾವನ್ನು ತಯಾರಿಸುವುದು ಕೂಡ ಸೇರಿತ್ತು ಎಂದು ಸಚಿನ್ ಹೇಳಿಕೊಂಡಿದ್ದಾರೆ.

ನಾನು ಕೂಡ ಚಹಾ ತಯಾರಿಸುವುದು, ಪಂದ್ಯದ ಮೊದಲು ಬಟ್ಟೆಗಳನ್ನು ಇಸ್ತ್ರಿ ಮಾಡುವುದು ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಆಟಕ್ಕೆ ಸಿದ್ಧನಾಗುತ್ತಿದ್ದೆ. ನನ್ನ ಸಹೋದರ ನನಗೆ ಇದೆಲ್ಲವನ್ನೂ ಕಲಿಸಿದನು, ಪಂದ್ಯಕ್ಕೆ ಒಂದು ದಿನ ಮೊದಲು ನಾನು ನನ್ನ ಬ್ಯಾಗನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೆ. ದಿನಕಳೆದಂತೆ ಇದು ನನಗೆ ಅಭ್ಯಾಸವಾಯಿತು. ಭಾರತಕ್ಕಾಗಿ ನಾನು ಕೊನೆಯ ಪಂದ್ಯವನ್ನು ಆಡುವ ದಿನದಲ್ಲೂ ನಾನು ಇದೇ ಕೆಲಸ ಮಾಡಿದ್ದೆ ಎಂದರು.

ದೋಸೆ ತಂದ ವ್ಯಕ್ತಿ ಅದ್ಭುತ ಸಲಹೆ ನೀಡಿದರು ಮುಂದುವರೆದು ಮಾತಾನಾಡಿದ ಸಚಿನ್, ಆಟಗಾರನು ಕಷ್ಟದ ಸಮಯಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಪರಿಸ್ಥಿತಿಗಳು ಕೆಟ್ಟದಾಗಿದ್ದಾಗಲೂ ಅದನ್ನು ಒಪ್ಪಿಕೊಳ್ಳುವುದು ಮುಖ್ಯ ಎಂದು ಹೇಳಿದರು. ನೀವು ಗಾಯಗೊಂಡಾಗ, ವೈದ್ಯರು ನಿಮಗೆ ಚಿಕಿತ್ಸೆ ನೀಡುತ್ತಾರೆ. ಮಾನಸಿಕ ಆರೋಗ್ಯದ ವಿಷಯದಲ್ಲೂ ಇದು ಒಂದೇ ಆಗಿರುತ್ತದೆ. ಪ್ರತಿಯೊಬ್ಬರು ಒಳ್ಳೆಯ ಮತ್ತು ಕೆಟ್ಟ ಸಮಯವನ್ನು ಎದುರಿಸುವುದು ಸಾಮಾನ್ಯ. ಇದಕ್ಕಾಗಿ, ನೀವು ಎಲ್ಲಾ ಸಂದರ್ಭಗಳನ್ನು ಒಪ್ಪಿಕೊಳ್ಳಬೇಕು. ಇದು ಆಟಗಾರರಿಗೆ ಮಾತ್ರವಲ್ಲ, ಅವರೊಂದಿಗೆ ಇರುವ ಯಾರಿಗಾದರೂ ಅನ್ವಯಿಸುತ್ತದೆ. ನೀವು ಅದನ್ನು ಸ್ವೀಕರಿಸಿದಾಗ, ನೀವು ಅದಕ್ಕೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೀರಿ ಎಂದರು.

ನಾನು ಕ್ರಿಕೆಟ್ ಆಡುವ ದಿನಗಳಲ್ಲಿ ಚೆನ್ನೈನ ತಾಜ್ ಕೋರಮಂಡಲ್ ಹೋಟೆಲ್​ನ ಸಿಬ್ಬಂದಿ ನೀಡಿದ ಚಿಕ್ಕ ಸಲಹೆಯಿಂದ ತಮ್ಮ ಎಲ್ಬೋ ಗಾರ್ಡ್ ​ಅನ್ನು ಮರುವಿನ್ಯಾಸ ಮಾಡಿದ್ದೆ ಎಂದು ಅಂದು ನಡೆದಿದ್ದ ಸಂಪೂರ್ಣ ಘಟನೆಯನ್ನು ಸಚಿನ್ ನೆನಪಿಸಿಕೊಂಡರು. ಟೆಸ್ಟ್ ಸರಣಿಯ ವೇಳೆ ತಾಜ್ ಕೋರಮಂಡಲ್​ನ ಸಿಬ್ಬಂದಿಯ ಜತೆ ನನ್ನ ಎಲ್ಬೋ ಗಾರ್ಡ್​ನ ಕುರಿತಾಗಿ ಚರ್ಚೆ ಮಾಡಿದ್ದೆ. ಆತ ನೀಡಿದ ಸಲಹೆ ಬಳಿಕ ನನ್ನ ಎಲ್ಬೋ ಗಾರ್ಡ್ ವಿನ್ಯಾಸ ಬದಲಿಸಿದ್ದೆ. ಎಲ್ಬೋ ಗಾರ್ಡ್ ಹಾಕಿ ಆಡುವಾಗ ಬ್ಯಾಟ್ ತೀರಾ ಸರಳವಾಗಿ ಚಲನೆ ಆಗುತ್ತಿರಲಿಲ್ಲ ಎಂದು ಆತ ನನ್ನ ಗಮನಕ್ಕೆ ತಂದ್ದ. ಆತ ನೀಡಿದ್ದ ಸಲಹೆ ಸರಿಯಾಗಿತ್ತು. ಆತನ ಸಲಹೆಯಂತೆ ನಾನು ಅದನ್ನು ಬದಲಿಸಿಕೊಂಡೆ ಎಂದು ಸಚಿನ್ ಹೇಳಿದ್ದರು.

ಇದನ್ನೂ ಓದಿ: ಟೆಸ್ಟ್​ ಕ್ರಿಕೆಟ್​ ಆಡಲು ಭುವಿಗೆ ಮನಸ್ಸಿಲ್ಲ! ಇಂಗ್ಲೆಂಡ್ ಪ್ರವಾಸಕ್ಕೆ ಭುವನೇಶ್ವರ್​ ಆಯ್ಕೆಯಾಗದಿರಲು ಕಾರಣ ಇಲ್ಲಿದೆ

Published On - 9:54 am, Mon, 17 May 21

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ