AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಮ್ಮೆ ನೀನು ಹಾಗೆ ಮಾಡಿದರೆ ನನ್ನ ಎಸೆತ ನೇರ ನಿನ್ನ ತಲೆಗೆ ಬೀಳಬಹುದು! ಅಖ್ತರ್ ಕುತಂತ್ರ ನೆನೆದ ಉತ್ತಪ್ಪ

ರಾಬಿನ್ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ ಮತ್ತು ನೀವು ನನ್ನ ಎಸೆತಗಳನ್ನು ಸರಿಯಾಗಿಯೇ ದಂಡಿಸಿದ್ದೀರಿ. ಆದರೆ ಮುಂದಿನ ಬಾರಿ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ.

ಮತ್ತೊಮ್ಮೆ ನೀನು ಹಾಗೆ ಮಾಡಿದರೆ ನನ್ನ ಎಸೆತ ನೇರ ನಿನ್ನ ತಲೆಗೆ ಬೀಳಬಹುದು! ಅಖ್ತರ್ ಕುತಂತ್ರ ನೆನೆದ ಉತ್ತಪ್ಪ
ಶೋಯೆಬ್ ಅಖ್ತರ್
ಪೃಥ್ವಿಶಂಕರ
|

Updated on: May 16, 2021 | 5:47 PM

Share

ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ತನ್ನ ಎದುರಾಳಿಗಳಲ್ಲಿ ನಡುಕವನ್ನುಂಟು ಮಾಡುವ ಆಟಗಾರನೆಂದು ಎಲ್ಲರಿಗು ಗೊತ್ತಿರುವ ವಿಚಾರವೆ. ರಾವಲ್ಪಿಂಡಿ ಎಕ್ಸ್​ಪ್ರೆಸ್ ಎಂದು ಕರೆಯಲ್ಪಡುವ ಈ ಬೌಲರ್, ಬ್ಯಾಟ್ಸ್‌ಮನ್​ಗಳಿಗೆ ಹಲವು ಬಾರಿ ತಮ್ಮ ಘಾತಕ ವೇಗದ ಮೂಲಕ ಭಯವನ್ನುಂಟು ಮಾಡುತ್ತಿದ್ದರು. ಜೊತೆಗೆ ಶೋಯೆಬ್ ಅಖ್ತರ್ ಅವರ ಬೌನ್ಸರ್ ಎಷ್ಟು ಅಪಾಯಕಾರಿ ಆಗಿರುತ್ತಿತ್ತೆಂದರೆ ಅದರ ಸಹಾಯದಿಂದ ಅವರು ಅನೇಕ ಆಟಗಾರರನ್ನು ಗಾಯಗೊಳಿಸಿದ್ದರು. ಈ ಭಯಕ್ಕೆ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಒಳಗಾಗಿದ್ದರು. ಈ ವಿಚಾರವನ್ನು ಇತ್ತೀಚೆಗೆ ಉತ್ತಪ್ಪ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೋಯೆಬ್ ಅಖ್ತರ್ ಪಂದ್ಯದ ಸಮಯದಲ್ಲಿ ಹೇಗೆ ಬೆದರಿಕೆ ಹಾಕಿದ್ದರೆಂದು ಹೇಳಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯದ ವೇಳೆ ನಡೆದ ಘಟನೆಯನ್ನು ರಾಬಿನ್ ಯೂಟ್ಯೂಬ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದು, ರಾಬಿನ್​ಗೆ ಅಖ್ತರ್ ಹೇಗೆ ಬೆದರಿಕೆ ಹಾಕಿದ್ದರು ಎಂಬುದನ್ನು ವಿವರಿಸಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನದ ತಂಡ ಭಾರತ ಪ್ರವಾಸದಲ್ಲಿತ್ತು. ಈ ಪಂದ್ಯವನ್ನು ಎರಡೂ ತಂಡಗಳು ಗುವಾಹಟಿಯಲ್ಲಿ ಆಡುತ್ತಿದ್ದವು. ಭಾರತ ಗೆಲ್ಲಲು 25 ಎಸೆತಗಳಲ್ಲಿ 12 ರನ್ ಗಳಿಸಬೇಕಿತ್ತು. ಈ ವೇಳೆ ರಾಬಿನ್ ಮತ್ತು ಇರ್ಫಾನ್ ಪಠಾಣ್ ಬ್ಯಾಟಿಂಗ್ ಮಾಡುತ್ತಿದ್ದರು.

ಶೋಯೆಬ್ ಎಸೆತದಿಂದ ರಾಬಿನ್ ಆಘಾತ ನನಗೆ ತುಂಬಾ ಚೆನ್ನಾಗಿ ನೆನಪಿದೆ, ನಾನು ಬ್ಯಾಟಿಂಗ್ ಮಾಡುವಾಗ ಶೋಯೆಬ್ ನನಗೆ ಯಾರ್ಕರ್ ಅನ್ನು ಎಸೆದರು, ಅದರೆ ಆ ಎಸೆತವನ್ನು ದಂಡಿಸುವಲ್ಲಿ ನಾನು ವಿಫಲನಾದೆ. ಆದರೆ ಆ ಚೆಂಡನ್ನು ಅಲ್ಲಿಯೇ ಡಿಫೆಂಡ್ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ. ಆ ಚೆಂಡಿನ ವೇಗ ಗಂಟೆಗೆ 154 ಕಿಲೋಮೀಟರ್ ಆಗಿತ್ತು. ಇದರ ನಂತರ, ನಾನು ಅವರ ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದ್ದೆ. ನಂತರ ನಮಗೆ ಗೆಲ್ಲಲು 3 ಅಥವಾ 4 ರನ್ಗಳು ಬೇಕಾಗಿದ್ದವು. ಅಖ್ತರ್ ಎಸೆದ ಮುಂದಿನ ಎಸೆತವನ್ನು ನಾನು ಬೌಂಡರಿ ಬಾರಿಸಿದ್ದೆ. ಈ ಮೂಲಕ ತಂಡಕ್ಕೆ ಗೆಲುವು ಸಹ ಸಿಕ್ಕಿತ್ತು.

ರಾಬಿನ್‌ಗೆ ಬೆದರಿಕೆ ಹಾಕಿದ ಶೋಯೆಬ್ ಪಂದ್ಯದ ನಂತರ ತಂಡ ಹೋಟೆಲ್‌ಗೆ ಮರಳಿತು. ಮುಂದಿನ ಪಂದ್ಯ ಗ್ವಾಲಿಯರ್‌ನಲ್ಲಿತ್ತು. ಹೋಟೆಲ್​ನಲ್ಲಿ ಊಟದ ವೇಳೆ ರಾಬಿನ್ ಬಳಿಗೆ ಹೋದ ಶೋಯೆಬ್ ಅಖ್ತರ್, ರಾಬಿನ್ ನೀವು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೀರಿ ಮತ್ತು ನೀವು ನನ್ನ ಎಸೆತಗಳನ್ನು ಸರಿಯಾಗಿಯೇ ದಂಡಿಸಿದ್ದೀರಿ. ಆದರೆ ಮುಂದಿನ ಬಾರಿ ನೀವು ಹಾಗೆ ಮಾಡಿದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿಲ್ಲ. ನೀವು ವಿಕೆಟ್​ನಿಂದ ಮುಂದೆ ಬಂದು ಆಡಿದರೆ, ನಾನು ಚೆಂಡನ್ನು ನೇರವಾಗಿ ನಿಮ್ಮ ತಲೆಯ ಮೇಲೆ ಎಸೆಯಬಹುದು ಎಂದು ಎಚ್ಚರಿಸಿದರಂತೆ. ಆದರಿಂದ ಈ ಘಟನೆಯ ನಂತರ ನಾನು ಅವರ ವಿರುದ್ಧ ವಿಕೆಟ್​ನಿಂದ ಮುಂದೆ ಆಡುವುದನ್ನು ನಿಲ್ಲಿಸಿದೆ ಎಂದು ಉತ್ತಪ್ಪ ಹೇಳಿದರು.

ಇದನ್ನೂ ಓದಿ:ಫೈನಲ್​ ಆಡುವುದು ನಾವು, ನಿಮ್ಮ ಕುಟುಂಬದವರಿಗ್ಯಾಕೆ ಟಿಕೆಟ್?​ ಕುಚೇಷ್ಟೆ ಮಾಡಿದ್ದ ಅಖ್ತರ್​ಗೆ, ಬಜ್ಜಿ ನೀಡಿದ್ರು ಮಾತಿನ ಚಡಿ ಏಟು!

ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ