ಅದೃಷ್ಟ ಮತ್ತು ಚಾಣಾಕ್ಷತೆಯಿದ್ರೆ ಎಂಥ ಆಪತ್ತನ್ನಾದ್ರೂ ತಪ್ಪಿಸಿಕೊಳ್ಳಬಹುದು ಎನ್ನೋದಕ್ಕೆ ಬಾತುಕೋಳಿ ಮತ್ತು ಹುಲಿಯ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ.
ಹೌದು ನೀರಲ್ಲಿ ತನ್ನ ಪಾಡಿಗೆ ತಾನು ಆಹಾರ ಅರಸುತ್ತಿದ್ದ ಬಾತುಕೋಳಿ ಮೇಲೆ ಹುಲಿಯ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅದನ್ನು ತಿಂದು ಸ್ವಾಹ ಮಾಡೋಣ ಅಂದುಕೊಂಡು ಸದ್ದಿಲ್ಲದೆ ಅದರ ಹಿಂದೆ ಈಜಿ ಬಂದಿದೆ. ಇನ್ನೇನು ಪಕ್ಕನೆ ಜಿಗಿದು ಬಾತುಕೊಳಿ ಹಿಡಿಯಲು ಮುನ್ನಗ್ಗಿದೆ. ಆದ್ರೆ ಚಾಣಾಕ್ಷ ಬಾತುಕೋಳಿ ತಕ್ಷಣವೇ ನೀರಲ್ಲಿ ಮುಳುಗಿದೆ. ಇದನ್ನು ನಿರೀಕ್ಷಿಸದ ಹುಲಿ ಒಂದು ಕ್ಷಣ ಆವಾಕ್ಕಾಗಿದೆ. ಎಲ್ಲಿ ಹೋಯಿತು ಬಾತುಕೋಳಿ ಅಂತಾ ಸುತ್ತಮುತ್ತಲೂ ನೋಡುತ್ತಾ ಕಕ್ಕಾಬಿಕ್ಕಿಯಾಗಿದೆ.
ಇನ್ನೊಂದೆಡೆ ನೀರಲ್ಲಿ ಡುಮುಕಿ ಹಾಕಿದ ಬಾತುಕೋಳಿ ಸದ್ದಿಲ್ಲದೇ ಹುಲಿಯ ಬೆನ್ನ ಹಿಂದೆ ಜಾರಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದೆ. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರು ಬಾತುಕೋಳಿಯ ಅದೃಷ್ಟ ಮತ್ತು ಜಾಣತನಕ್ಕೆ ಮಾರುಹೋಗಿದ್ದಾರೆ. ನೀವೂ ನೋಡಿ..
https://twitter.com/buitengebieden_/status/1288236951645097986?s=20
Published On - 3:45 pm, Wed, 29 July 20