#Rafale Happy Landing ಅಂತೂ ಭಾರತಕ್ಕೆ ಬಂದೇ ಬಿಟ್ಟ ರಫೇಲ್ ರಣಧೀರ!
ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್ನ ಮೆರಿಜ್ಞಾಕ್ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್ ವಿಮಾನಗಳು UAE ದೇಶದ ಅಲ್-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್ ಆಫ್ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು! ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು […]
ದೆಹಲಿ: ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬಂದೇಬಟ್ಟಿತು. ಫ್ರಾನ್ಸ್ನ ಮೆರಿಜ್ಞಾಕ್ ವಾಯುನೆಲೆಯಿಂದ ಹೊರಟ ಮೊದಲ ಐದು ರಫೇಲ್ ವಿಮಾನಗಳು UAE ದೇಶದ ಅಲ್-ಧಫ್ರಾ ವಾಯುನೆಲೆಗೆ ಬಂದಿದ್ದವು. ಇದೀಗ ಅಲ್ಲಿಂದ ಟೇಕ್ ಆಫ್ ಆಗಿ ಭಾರತದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಎರಡು ಗಂಟೆಗೆ ಲ್ಯಾಂಡ್ ಆಗಬೇಕಿದ್ದ ತಂಡ ಸ್ವಲ್ಪ ತಡವಾಗಿ ಆಗಮಿಸಿತು. ಆದರೆ, Late ಆಗಿ ಬಂದ್ರೂ Latest ಆಗಿ ಬಂದಿಳಿದರು!
ವಾಯುಪಡೆ ಮುಖ್ಯಸ್ಥ RKS ಭದೌರಿಯರವರು ಖುದ್ದು ಅಂಬಾಲಾ ವಾಯುನೆಲೆಗೆ ಬಂದಿದ್ದು ಮೊದಲ ಐದು ವಿಮಾನಗಳ ತಂಡವನ್ನ ಬರಮಾಡಿಕೊಂಡರು. ಜೊತೆಗೆ, ಲ್ಯಾಂಡ್ ಆದ ಐದೂ ರಣಧೀರರಿಗೆ ವಾಟರ್ ಕ್ಯಾನನ್ಗಳ ಮೂಲಕ ಗೌರವಾರ್ಥ ಸಲ್ಯೂಟ್ ನೀಡಿ ವೆಲ್ಕಂ ಮಾಡಲಾಯಿತು.
ಇದಕ್ಕೂ ಮುಂಚೆ UAEನಿಂದ ಟೇಕ್ ಆಫ್ ಆದ ವಿಮಾನದ ತಂಡದ ಜೊತೆ INS ಕೋಲ್ಕತ್ತಾ ಮೊದಲು ಸಂಪರ್ಕ ಸಾಧಿಸಿತು.
ಆಧುನಿಕ ತಂತ್ರಜ್ಞಾನ ಹೊಂದಿರುವ ಫ್ರಾನ್ಸ್ ಮೂಲದ ರಫೇಲ್ ಯುದ್ಧ ವಿಮಾನ ವಿವಿಧ ಬಗೆಯ ಕ್ಷಿಪಣಿ ಮತ್ತು ಶಸ್ತ್ರಾಸ್ತ್ರಗಳನ್ನ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ರಫೇಲ್ ವಿಮಾನ ಖರೀದಿ ಒಪ್ಪಂದವು ಭಾರಿ ವಿವಾದಕ್ಕೆ ಒಳಗೊಂಡಿತ್ತು. ಯುದ್ಧ ವಿಮಾನದ ಖರೀದಿಯ ಮೊತ್ತ ಹಾಗೂ ಅದರ ನಿರ್ಮಾಣ ಸಂಬಂಧಿಸಿ ರಾಜಕೀಯ ಪಕ್ಷಗಳ ನಡುವೆ ಸಾಕಷ್ಟು ಚರ್ಚೆ ಕೂಡ ಆಗಿತ್ತು.
ಜೊತೆಗೆ, ಇದರ ಖರೀದಿಯ ಪ್ರಕರಣವು ಸುಪ್ರೀಮ್ ಕೋರ್ಟ್ ಮೆಟ್ಟೆಲೇರಿತು. ಈ ನಡುವೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗ ಈ ಸಂಬಂಧದಲ್ಲಿ ಕೋರ್ಟ್ ಛೀಮಾರಿ ಸಹ ಹಾಕಿತ್ತು.
ಅಂತಿಮವಾಗಿ, ರಫೇಲ್ ಖರೀದಿಗೆ ಗ್ರೀನ್ ಸಿಗ್ನಲ್ ದೊರೆತು ಇದೀಗ ಮೊದಲು ಐದು ವಿಮಾನಗಳು ಭಾರತಕ್ಕೆ ಬಂದಿಳಿದದೆ. ಗಡಿಯಲ್ಲಿ ಕಾಲ್ಕೆರೆದು ಜಗಳಕ್ಕೆ ಸಜ್ಜಾಗಿರುವ ಚೀನಾ ಮತ್ತು ಪಾಕಿಸ್ತಾನವನ್ನ ಬಗ್ಗುಬಡೆಡಿಯಲು ಬಂದೇ ಬಿಟ್ಟ ನಮ್ಮ ಈ ಅಗ್ನಿ ಜ್ವಾಲೆ.
The Touchdown of Rafale at Ambala. pic.twitter.com/e3OFQa1bZY
— Rajnath Singh (@rajnathsingh) July 29, 2020
Published On - 3:20 pm, Wed, 29 July 20