ರೈಲ್ವೆ ಸ್ಟೇಷನ್ನಲ್ಲಿ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕ ಬಚಾವ್, ಹೇಗೆ?
ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್ ಮಾಡಿರುವ ಘಟನೆ ನಗರದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ. ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್ ಸ್ಟೇಷನ್ ಬಂತೆಂದು ಚಲಿಸುತ್ತಿದ್ದ ಟ್ರೈನ್ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್ಫಾರ್ಮ್ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ […]
ಮುಂಬೈ: ನಿಧಾನವಾಗಿ ಚಲಿಸುತ್ತಿದ ಟ್ರೈನ್ನಿಂದ ಹಾರಲು ಯತ್ನಿಸುವಾಗ ಅದರ ಕೆಳಕ್ಕೆ ಜಾರಿದ ಪ್ರಯಾಣಿಕನನ್ನ ಅಲ್ಲೇ ಇದ್ದ ಸಿಬ್ಬಂದಿಯು ಆತನನ್ನ ಬಚಾವ್ ಮಾಡಿರುವ ಘಟನೆ ನಗರದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ನಡೆದಿದೆ.
ಚಲಿಸುವ ವಾಹನದಿಂದ ಇಳಿಯುವದೇ ತಪ್ಪು, ಅಂಥಾದ್ದರಲ್ಲಿ ಉಲ್ಟಾ ಇಳಿದ್ರೆ ಏನಾಗುತ್ತೆ ನೋಡಿ ತಾನು ಇಳಿಯಬೇಕಿದ್ದ ಕಲ್ಯಾಣ್ ಸ್ಟೇಷನ್ ಬಂತೆಂದು ಚಲಿಸುತ್ತಿದ್ದ ಟ್ರೈನ್ನಿಂದ 52 ವರ್ಷದ ಪ್ರಯಾಣಿಕನೊಬ್ಬ ಮರುಯೋಚಿಸದೆ ಹಾಗೆ ಹಾರಿಯೇ ಬಿಟ್ಟ. ಈ ವೇಳೆ ಕಾಲು ಜಾರಿ, ಪ್ಲಾಟ್ಫಾರ್ಮ್ ಮತ್ತು ಹಳಿಯ ಮಧ್ಯೆ ಕ್ಷಣಾರ್ಧದಲ್ಲಿ ಸಿಲುಕಿಕೊಂಡುಬಿಟ್ಟ.
ಇದೇ ವೇಳೆ ಅಲ್ಲೇ ನಿಯೋಜನೆಗೊಂಡಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಸಾಹೂ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಸೋಮನಾಥ್ ಮಹಾಜನ್ ಇದನ್ನ ಗಮನಿಸಿ ಅವನ ರಕ್ಷಣೆಗೆ ಓಡಿಬಂದರು. ರೈಲ್ವೆ ಹಳಿಗೆ ಸಿಲುಕಿ ಸಾವನ್ನಪ್ಪಬೇಕಿದ್ದ ಪ್ರಯಾಣಿಕನನ್ನ ತಮ್ಮ ಸಮಯಪ್ರಜ್ಞೆಯಿಂದ ಕೂಡಲೇ ಪ್ಲಾಟ್ಫಾರ್ಮ್ ಮೇಲೆ ಎಳೆತಂದರು.
#WATCH On duty Railway Protection Force personnel K Sahu and Maharashtra Security Force personnel Somnath Mahajan at Kalyan railway station saved the life of a 52-year old passenger, who slipped between the platform and track as he de-boarded from a moving a train yesterday. pic.twitter.com/rmd0OuMzEy
— ANI (@ANI) July 29, 2020
Published On - 11:45 am, Wed, 29 July 20