ಧೂಮಪಾನ ಸೇವನೆಯಿಂದ ಕೊರೊನಾಗೆ ಆಹ್ವಾನ! ಹೇಗೆ?
ದೆಹಲಿ: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನು ಕಪಿ ಮುಷ್ಟಿಯಲ್ಲಿ ಬಂಧಿಸಿದೆ. ಜನರನ್ನು ನರಳಾಡುವಂತೆ ಮಾಡಿದೆ. ಆದರೆ ಈಗ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಂದು ಭಯಾನಕ ಸುದ್ದಿ ಹೊರ ಹಾಕಿದೆ. ಅದೇ ಧೂಮಪಾನದ ವೇಳೆ ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂಬುದು. ಧೂಮಪಾನ ಆರೋಗ್ಯವನ್ನ ಹಾಳು ಮಾಡುತ್ತೆ. ಕ್ಯಾನ್ಸರ್ಗೆ ಆಹ್ವಾನ ನೀಡುತ್ತೆ ಎಂದು ಗೊತ್ತಿದ್ದರೂ ಜನ ಧೂಮಪಾನ ಸೇವನೆ ಬಿಟ್ಟಿಲ್ಲ. ಆದರೆ ಈಗ ಕೊರೊನಾ ಕೂಡ ಧೂಮಪಾನ ಸೇವನೆ ಮಾಡುವವರ ಬೆನ್ನಿಗೆ ಬಿದ್ದಿದೆ. ಧೂಮಪಾನದ […]
ದೆಹಲಿ: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನು ಕಪಿ ಮುಷ್ಟಿಯಲ್ಲಿ ಬಂಧಿಸಿದೆ. ಜನರನ್ನು ನರಳಾಡುವಂತೆ ಮಾಡಿದೆ. ಆದರೆ ಈಗ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಂದು ಭಯಾನಕ ಸುದ್ದಿ ಹೊರ ಹಾಕಿದೆ. ಅದೇ ಧೂಮಪಾನದ ವೇಳೆ ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎಂಬುದು.
ಧೂಮಪಾನ ಆರೋಗ್ಯವನ್ನ ಹಾಳು ಮಾಡುತ್ತೆ. ಕ್ಯಾನ್ಸರ್ಗೆ ಆಹ್ವಾನ ನೀಡುತ್ತೆ ಎಂದು ಗೊತ್ತಿದ್ದರೂ ಜನ ಧೂಮಪಾನ ಸೇವನೆ ಬಿಟ್ಟಿಲ್ಲ. ಆದರೆ ಈಗ ಕೊರೊನಾ ಕೂಡ ಧೂಮಪಾನ ಸೇವನೆ ಮಾಡುವವರ ಬೆನ್ನಿಗೆ ಬಿದ್ದಿದೆ. ಧೂಮಪಾನದ ವೇಳೆ ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಿದ್ದು, ಧೂಮಪಾನಿಗಳು ಕೋವಿಡ್–19 ಅಪಾಯಕ್ಕೆ ಒಳಗಾಗುವ ಸಾಧ್ಯತೆ ಅಧಿಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ತಂಬಾಕು ಉತ್ಪನ್ನಗಳ ಬಳಕೆಯಿಂದ ಉಸಿರಾಟದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ತಂಬಾಕು ಸೇವಿಸುವ ಜನರು ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಧೂಮಪಾನ ಸೇವಿಸುವುದನ್ನು ಬಿಟ್ಟರೆ ಕೊರೊನಾ ಕೊಂಚ ಮಟ್ಟಿಗೆ ಕಟ್ಟಿ ಹಾಕಬಹುದು.
Published On - 2:23 pm, Wed, 29 July 20