ಲಕ್ನೋ: ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ನಲ್ಲಿ ಕುಡಿದ ಮತ್ತಿನಲ್ಲಿ ಪ್ರಯಾಣ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಮಾ.12ರಂದು ನಡೆದಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸೂಚನೆ ಮೇರೆಗೆ ಆತನನ್ನು ಬಂಧಿಸಿ, ಕೆಲಸದಿಂದ ವಜಾ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಮಹಿಳೆ ತನ್ನ ಪತಿ ರಾಜೇಶ್ ಕುಮಾರ್ ಜೊತೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿತ್ತು. ಇಬ್ಬರೂ ಅಮೃತಸರ ಮೂಲದವರಾಗಿದ್ದಾರೆ.
ಅಮೃತಸರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನ ಎ1 ಕೋಚ್‌ನಲ್ಲಿ ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಜಿಆರ್‌ಪಿ ಅಧಿಕಾರಿ ತಿಳಿಸಿದ್ದಾರೆ. ಮಹಿಳೆಯ ಕೂಗು ಕೇಳಿ ಸುತ್ತಮುತ್ತ ಜಮಾಯಿಸಿದ ಪ್ರಯಾಣಿಕರು ಕುಡಿದ ಮತ್ತಿನಲ್ಲಿದ್ದ ಟಿಟಿಇಯನ್ನು ಬಿಹಾರದ ನಿವಾಸಿ ಮುನ್ನಾ ಕುಮಾರ್ ಎಂದು ಗುರುತಿಸಿದ್ದಾರೆ.
ಇದನ್ನೂ ಓದಿ: ರೈಲಿನಲ್ಲಿ ಕುಡಿದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ತಲೆ ಮೇಲೆ ಮೂತ್ರ ವಿಸರ್ಜಿಸಿದ ಟಿಟಿಇ ಬಂಧನ
ಸೋಮವಾರ ರೈಲು ಲಕ್ನೋದ ಚಾರ್‌ಬಾಗ್ ರೈಲು ನಿಲ್ದಾಣವನ್ನು ತಲುಪಿದಾಗ ಟಿಟಿಇಯನ್ನು ಜಿಆರ್‌ಪಿಗೆ ಹಸ್ತಾಂತರಿಸಲಾಯಿತು. ಟಿಟಿಇ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಕೆಲ ತಿಂಗಳ ಹಿಂದೆ ವಿಮಾನದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಎನ್ನಲಾಗಿದೆ. ನಂತರ, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ ಮಿಶ್ರಾ ಅವರನ್ನು ಬಂಧಿಸಲಾಯಿತು ಮತ್ತು ಏರ್ ಇಂಡಿಯಾ ವಿಮಾನದಲ್ಲಿ ಹಾರಾಟ ಮಾಡದಂತೆ 4 ತಿಂಗಳ ನಿಷೇಧವನ್ನು ವಿಧಿಸಲಾಯಿತು.
A Ticket Examiner (TTE) Munna Kumar arrested by GRP Charbagh (UP) for allegedly urinating on a woman passenger onboard train number 12317 on March 13. She was travelling with her husband from Kiul to Amritsar. The accused has been sent to judicial custody. He also has been… https://t.co/AhSujvKs6t pic.twitter.com/FAouIJjOQX
— ANI (@ANI) March 14, 2023
ಇತ್ತೀಚೆಗಿನ ಮತ್ತೊಂದು ಘಟನೆಯೆಂದರೆ ನ್ಯೂಯಾರ್ಕ್‌ನಿಂದ ದೆಹಲಿಗೆ ಅಮೆರಿಕನ್ ಏರ್‌ಲೈನ್ಸ್ ಟ್ರಿಪ್‌ನಲ್ಲಿ ಕುಡುಕನೊಬ್ಬ ತನ್ನ ಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಅದರ ನಂತರ, ಪ್ರಯಾಣಿಕರನ್ನು ಐಜಿಐ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಬೆಂಗಳೂರಿನಲ್ಲಿ ಈ ರೀತಿಯ ಘಟನೆಯು ನಡೆದಿತ್ತು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಹೇಳಲಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Tue, 14 March 23