Crime News: ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಭಾರದ್ವಾಜ್ ಆತ್ಮಹತ್ಯೆ

| Updated By: ಸುಷ್ಮಾ ಚಕ್ರೆ

Updated on: Nov 25, 2022 | 11:10 AM

ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಪಡೆಯಲು ಸಂದೀಪ್ ಭಾರದ್ವಾಜ್ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.

Crime News: ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಭಾರದ್ವಾಜ್ ಆತ್ಮಹತ್ಯೆ
ಸಂದೀಪ್ ಭಾರದ್ವಾಜ್
Follow us on

ನವದೆಹಲಿ: ಆಮ್ ಆದ್ಮಿ ಪಕ್ಷದ (Aam Aadmi Party) ಟ್ರೇಡ್ ವಿಭಾಗದ ದೆಹಲಿ ರಾಜ್ಯ ಕಾರ್ಯದರ್ಶಿ ಸಂದೀಪ್ ಭಾರದ್ವಾಜ್ (Sandeep Bhardwaj) ಗುರುವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ಪಡೆಯಲು ಸಂದೀಪ್ ಭಾರದ್ವಾಜ್ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ಸಾವಿಗೆ ನಿಖರ ಕಾರಣಗಳು ಇನ್ನೂ ಪತ್ತೆಯಾಗಿಲ್ಲ.

ದೆಹಲಿ ಪೊಲೀಸರಿಗೆ ರಾಜೌರಿ ಗಾರ್ಡನ್‌ನ ಕುಕ್ರೇಜಾ ಆಸ್ಪತ್ರೆಯಿಂದ ಗುರುವಾರ ಸಂಜೆ 4.40ಕ್ಕೆ ಫೋನ್ ಬಂದಿತು. ಆಪ್ ನಾಯಕ ಸಂದೀಪ್ ಭಾರದ್ವಾಜ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಪೊಲೀಸರಿಗೆ ತಿಳಿಸಲಾಗಿತ್ತು. ಸಂದೀಪ್ ಭಾರದ್ವಾಜ್ ನೇಣು ಬಿಗಿದ ಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ದೆಹಲಿಯ ಜಾಮಾ ಮಸೀದಿಗೆ ಪುರುಷರಿಲ್ಲದೆ ಬರುವ ಮಹಿಳೆಯರಿಗೆ ನಿಷೇಧ; ವಿವಾದಾತ್ಮಕ ಆದೇಶಕ್ಕೆ ಭಾರೀ ವಿರೋಧ

ಆಮ್ ಆದ್ಮಿ ಪಕ್ಷದ ಟ್ರೇಡ್ ವಿಂಗ್‌ನ ಕಾರ್ಯದರ್ಶಿಯಾಗುವುದರ ಜೊತೆಗೆ, ಸಂದೀಪ್ ಭಾರದ್ವಾಜ್ ಮಾರ್ಬಲ್ ವ್ಯವಹಾರವನ್ನೂ ಹೊಂದಿದ್ದಾರೆ. ಸಂದೀಪ್ ಭಾರದ್ವಾಜ್ ವಿಚ್ಛೇದನ ಪಡೆದಿದ್ದು, ಅವರಿಗೆ 20 ವರ್ಷದ ಮಗ ಮತ್ತು ಇಬ್ಬರು ಸಹೋದರಿಯರಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಅವರ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ