ಬೀಡ್: ಕಾರು ಪಲ್ಟಿಯಾದ್ರೂ ಬದುಕುಳಿದವರು ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಸತ್ತರು

ಹುಟ್ಟು, ಸಾವು ಎರಡೂ ಭಗವಂತನ ಇಚ್ಛೆ, ಒಂದೊಮ್ಮೆ ಯಾರದ್ದೋ ಸಹಾಯದಿಂದ ಬದುಕುಳಿದರೂ, ಜವರಾಯ ಯಾವಾಗ ಯಾವ ರೀತಿಯಲ್ಲಿ ಕಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಬೀಡ್​ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಷಯವೇನೆಂದರೆ ಕಾರು ಮೊದಲ ಬಾರಿಗೆ ಅಪಘಾತಕ್ಕೀಡಾಗಿತ್ತು. ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು. ಆದರೂ ಎಲ್ಲರೂ ಬದುಕುಳಿದಿದ್ದರು.

ಬೀಡ್: ಕಾರು ಪಲ್ಟಿಯಾದ್ರೂ ಬದುಕುಳಿದವರು ಹಿಂದಿನಿಂದ ಲಾರಿ ಡಿಕ್ಕಿ ಹೊಡೆದು ಸತ್ತರು
ಅಪಘಾತ

Updated on: May 27, 2025 | 2:36 PM

ಬೀಡ್​, ಮೇ 27: ಹುಟ್ಟು, ಸಾವು ಎರಡೂ ಭಗವಂತನ ಇಚ್ಛೆ, ಒಂದೊಮ್ಮೆ ಯಾರದ್ದೋ ಸಹಾಯದಿಂದ ಬದುಕುಳಿದರೂ, ಜವರಾಯ ಯಾವಾಗ ಯಾವ ರೀತಿಯಲ್ಲಿ ಕಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಷಯವೇನೆಂದರೆ ಕಾರು ಮೊದಲ ಬಾರಿಗೆ ಅಪಘಾತಕ್ಕೀಡಾಗಿತ್ತು. ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಮಗುಚಿ ಬಿದ್ದಿತ್ತು. ಆದರೂ ಎಲ್ಲರೂ ಬದುಕುಳಿದಿದ್ದರು. ಕಾರಿನಿಂದ ಹೊರ ಬಂದ ಬಳಿಕ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಘಟನೆಯು ಇಡೀ ಬೀಡ್ ಅನ್ನು ಬೆಚ್ಚಿಬೀಳಿಸಿದೆ ಮತ್ತು ಮೃತರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಬೀಡ್ ಜಿಲ್ಲೆಯ ಮೂಲಕ ಹಾದುಹೋಗುವ ಧುಲೆ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗರ್ಹಿ ಸೇತುವೆಯಲ್ಲಿ ಗಂಭೀರ ಅಪಘಾತ ಸಂಭವಿಸಿದೆ. ಗೆವ್ರೈ ನಗರದ ಬಳಿಯ ಗರ್ಹಿ ಸೇತುವೆಯ ಮೇಲೆ ಎಸ್ಯುವಿ ವಾಹನವೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿತ್ತು.

ಯಾರಿಗೂ ಗಾಯವಾಗಿರಲಿಲ್ಲ, ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದು ಅಲ್ಲಿ ಸಿಲುಕಿಕೊಂಡಿತು ಹೀಗಾಗಿ ಕಾರಿನಲ್ಲಿದ್ದವರು ಹೇಗೋ ಮಾಡಿ ಕಾರಿನಿಂದ ಇಳಿದು ರಸ್ತೆಗೆ ಬಂದಿದ್ದರು. ಆದರೆ ಅದೇ ಹೆದ್ದಾರಿಯಲ್ಲಿ ಹಾದುಹೋಗುತ್ತಿದ್ದ ಟ್ರಕ್ ಅತಿ ವೇಗವಾಗಿ ಬಂದು ಅಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ, ಅವರ ದೇಹಗಳು ಛಿದ್ದ ಛಿದ್ರವಾಗಿದೆ.

ಇದನ್ನೂ ಓದಿ
ವಾಡಿಕೆಗಿಂತ ಮೊದಲೇ ಮುಂಗಾರು ಆಗಮನ, ಕರ್ನಾಟಕ, ಕೇರಳದಲ್ಲಿ ಭಾರಿ ಮಳೆ
ಕೊಡಗು ಜಿಲ್ಲೆಯಲ್ಲಿ ವರುಣಾರ್ಭಟ: ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಮುಂಗಾರು ಮಳೆ: ಕರವಾಳಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಅವಾಂತರ

ಮತ್ತಷ್ಟು ಓದಿ:ಬಳ್ಳಾರಿಯಲ್ಲಿ ಭೀಕರ ರಸ್ತೆ ಅಪಘಾತ: ಸ್ಥಳದಲ್ಲೇ ನಾಲ್ವರು ದುರ್ಮರಣ

ಆ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ, ಟ್ರಕ್ ಅಡಿಯಲ್ಲಿ ಸಿಲುಕಿ ಎಲ್ಲರೂ ಸಾವನ್ನಪ್ಪಿದ್ದಾರೆ. ಮೃತರ ಹೆಸರುಗಳು ಬಾಲು ಅಟ್ಕರೆ, ಮನೋಜ್ ಕರಂಡೆ, ಕೃಷ್ಣ ಜಾಧವ್, ದೀಪಕ್ ಸರೋಯಾ, ಭಾಗವತ್ ಪರಾಲ್ಕರ್ ಮತ್ತು ಸಚಿನ್ ನಾನ್ವಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ನಂತರ ಟ್ರಕ್ ಚಾಲಕ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದು, ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಟ್ರಕ್ ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಮತ್ತೊಂದು ಘಟನೆ

ಮಂಡ್ಯದಲ್ಲಿ ಮೂರು ವರ್ಷದ ಮಗುವಿಗೆ ನಾಯಿ ಕಚ್ಚಿತ್ತು, ಮಗುವನ್ನು ಕೂಡಲೂ ಆಸ್ಪತ್ರೆಗೆ ಸೇರಿಸಬೇಕೆಂದು ಗಡಿಬಿಡಿಯಲ್ಲಿ ಹೊರಟಿದ್ದ ಪೋಷಕರನ್ನು ಹೆಲ್ಮೆಟ್ ಹಾಕಿಲ್ಲ ಎನ್ನುವ ಕಾರಣಕ್ಕೆ ಟ್ರಾಫಿಕ್ ಪೊಲೀಸರು ತಡೆದಿದ್ದಾರೆ. ಆದರೆ ತಪ್ಪಿಸಿಕೊಳ್ಳುವ ಆತುರದಲ್ಲಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾರೆ, ಕೂಡಲೇ ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:36 pm, Tue, 27 May 25