ಹೈದರಾಬಾದ್: ಬಹುಬಾಷಾ ನಟ ಸೋನು ಸೂದ್ ಮತ್ತೇ ಸುದ್ದಿಯಲ್ಲಿದ್ದಾರೆ . ಕೆಲದಿನಗಳ ಹಿಂದಷ್ಟೇ ಆಂಧ್ರದ ಬಡ ರೈತ ಮತ್ತು ಆತನ ಇಬ್ಬರು ಹೆಣ್ಣುಮಕ್ಕಳು ಹೊಲದಲ್ಲಿ ನೊಗ ಹೊತ್ತು ಉಳುಮೆ ಮಾಡುವುದನ್ನು ನೋಡಿ ಟ್ರ್ಯಾಕ್ಟರ್ ಕೊಡಿಸಿದ್ದ ಸೂದ್ ಈಗ ಮತ್ತೊಬ್ಬ ಯುವತಿಗೆ ಸಹಾಯ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೌದು ಪ್ರತಿಭಾನ್ವಿತ ನಟ ಸೋನು ಸೂದ್, ಈಗ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಬೀದಿಯಲ್ಲಿ ತರಕಾರಿ ಮಾರುತ್ತಿದ್ದ ಹೈದರಾಬಾದ್ ಟೆಕ್ಕಿ ಯವತಿಯೊಬ್ಬಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಹೈದರಾಬಾದ್‌ನ ವರ್ಚೂಸ್ ಕಾರ್ಪೋರೇಶನ್ ಎಂಬ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುದತ್ತಿದ್ದ ಶಾರದಾ ಎಂಬ ಯುವತಿಯನ್ನ ಆ ಕಂಪನಿ ಕೊರೊನಾ ಸಂಕಷ್ಟ ಆರಂಭವಾಗುತ್ತಿದ್ದಂತೆ ಕೆಲಸದಿಂದ ಬಿಡುಗಡೆ ಮಾಡಿತ್ತು.
ಹೈದರಾಬಾದ್‌ನಲ್ಲಿ ತರಕಾರಿ ಮಾರುತ್ತಿದ್ದ ಟೆಕ್ಕಿ
ಮೊದಲೇ ಬಡತನದಿಂದ ಕಷ್ಟಪಟ್ಟು ಎಂಜಿನಿಯರಿಂಗ್ ಓದಿದ್ದ ಈ ಸಾಫ್ಟವೇರ್ ಹುಡುಗಿ ಇದರಿಂದ ಆರಂಭದಲ್ಲಿ ಕಂಗಾಲಾಗಿದ್ದಳು., ಆದ್ರೆ ತಾನು ಹುಟ್ಟಿದಾಗಿನಿಂದ ಕುಟುಂಬ ನಡೆಸುತ್ತಿದ್ದ ತರಕಾರಿ ವ್ಯಾಪಾರ ಈಕೆಯ ಕೈ ಹಿಡಿದಿದೆ. ಹೊಟ್ಟೆಪಾಡಿಗೆ ಮತ್ತು ಕುಟುಂಬ ಸಲುಹಲು ಶಾರದಾ ಮತ್ತೇ ರಸ್ತೆ ಬದಿಯಲ್ಲಿ ತರಕಾರಿ ಮಾರಲು ಆರಂಭಿಸಿದ್ದಾಳೆ.
ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಕೆಲಸ ಕೊಟ್ಟ ಸೋನು
ಈ ವಿಷಯವನ್ನ ಯಾರೋ ಒಬ್ಬರು ಟ್ವೀಟ್ ಮೂಲಕ ನಟ ಸೋನು ಸೂದ್ ಗಮನಕ್ಕ ತಂದಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿರುವ ಸೋನು, ನಾನು ಈಕೆ ಕೆಲಸ ಕೊಡಿಸುತ್ತೇನೆಂದು ಅಭಯ ನೀಡಿದ್ದಾರೆ. ಅಷ್ಟೇ ಅಲ್ಲ ತಮ್ಮ ಕಚೇರಿ ಸಿಬ್ಬಂದಿಯನ್ನ ಆಕೆಯಿದ್ದಲ್ಲಿಗೆ ಕಳಿಸಿ ಸಂದರ್ಶನ ಮಾಡಿ ಕೆಲಸವನ್ನೂ ನೀಡಿದ್ದಾರೆ. ನಂತರ ಈ ವಿಷಯವನ್ನ ಟ್ವೀಟ್ ಮಾಡಿದ್ದಾರೆ.
ಕೊರೊನಾ ಸಂಕಷ್ಟದಲ್ಲಿ ಬಡವರ ಪಾಲಿಗೆ ಸೂಪರ್ ಹೀರೋ
ಕೊರೊನಾ ಸಂಕಷ್ಟದಲ್ಲಿ ಸೋನು ಸೂದ್ರ ಈ ಸಹಾಯ ಹಸ್ತದ ಗುಣ ಕೋಟ್ಯಂತರ ಜನರ ಹೃದಯ ಗೆದ್ದಿದೆ. ಈಗಾಗಲೇ ದಿನಗೂಲಿ ವಲಸೆ ಕಾರ್ಮಿಕರಿಗೆ ಬಸ್ ಸೌಲಭ್ಯ, ರೈತನ ಮಕ್ಕಳಿಗೆ ಟ್ರ್ಯಾಕ್ಟರ್ ಕೊಡಿಸಿ ಸಹಾಯ ಮಾಡಿರುವ ಸೋನು ಸೂದ್ ಈಗ ಟೆಕ್ಕಿಗೆ ಕೆಲಸವನ್ನು ಕೊಟ್ಟಿದ್ದಾರೆ. ಇದೆಲ್ಲವನ್ನ ಗಮನಿಸಿದ್ರೆ ತೆರೆ ಮೇಲೆ ಖಳನಾಯಕ ಪಾತ್ರ ಮಾಡುವ ಸೋನು ನಿಜ ಜೀವನದಲ್ಲಿ ಮಾತ್ರ ಪಕ್ಕಾ ಹೀರೋ ಎನ್ನೋದನ್ನ ತೋರಿಸಿಕೊಟ್ಟಿದ್ದಾರೆ.
My official met her.
Interview done.
Job letter already sent.
Jai hind ??? @PravasiRojgar https://t.co/tqbAwXAcYt
— sonu sood (@SonuSood) July 27, 2020
Published On - 7:11 pm, Tue, 28 July 20