ಪಾಕ್ ಗೆ ಡವಡವ, ಚೀನಾ ಎದೆಯಲ್ಲಿ ನಡುಕ: ಮಿಂಚಿನಂತೆ ಭಾರತಕ್ಕೆ ಬರುತ್ತಿದೆ ಫೈಟರ್ ಜೆಟ್

ಪಾಕ್ ಗೆ ಡವಡವ, ಚೀನಾ ಎದೆಯಲ್ಲಿ ನಡುಕ: ಮಿಂಚಿನಂತೆ ಭಾರತಕ್ಕೆ ಬರುತ್ತಿದೆ ಫೈಟರ್ ಜೆಟ್
ರಫೇಲ್​ ವಿಮಾನ

ದೆಹಲಿ: ವಾಯುಪಡೆಯ ದೈತ್ಯ ರಫೇಲ್ ಯುದ್ಧ ವಿಮಾನಗಳು ಇಂದು ಭಾರತದ ವಾಯುಪಡೆಯ ಬತ್ತಳಿಕೆ ಸೇರಲಿವೆ. ಜುಲೈ 27 ಸಂಜೆಯೇ ರಫೇಲ್ ಯುದ್ಧ ವಿಮಾನಗಳು ಯುನೈಟೆಡ್ ಅರಬ್ ಎಮಿರೇಟ್ಸ್​ನ ಏರ್ ಬೇಸ್ ಅನ್ನು ತಲುಪಿವೆ. ಇಂದು ಅಂಬಾಲದಲ್ಲಿ ರಫೇಲ್ ಜೆಟ್ ಸ್ವಾಗತಿಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಅಂಬಾಲ ವಾಯುನೆಲೆ ಸುತ್ತಮುತ್ತ ಸೆಕ್ಷನ್ 144 ಜಾರಿಯಾಗಿದೆ. ಮಿಂಚಿಗಿಂತಲೂ ವೇಗ.. 5 ದೈತ್ಯ ಆನೆಗಳನ್ನ ಹೊತ್ತೊಯ್ಯಬಲ್ಲಂಥಾ ಸಾಮರ್ಥ್ಯ.. ರಫೇಲ್‌ ಹೆಸರು ಕೇಳಿದ್ರೆ ಎದುರಾಳಿ ಪಡೆಗೆ ನಡುಕ.. ಅಂತಹ ಡೇರ್‌ಡೆವಿಲ್‌ ಯುದ್ಧವಿಮಾನ 4 […]

Ayesha Banu

| Edited By:

Jul 30, 2020 | 8:24 PM

ದೆಹಲಿ: ವಾಯುಪಡೆಯ ದೈತ್ಯ ರಫೇಲ್ ಯುದ್ಧ ವಿಮಾನಗಳು ಇಂದು ಭಾರತದ ವಾಯುಪಡೆಯ ಬತ್ತಳಿಕೆ ಸೇರಲಿವೆ. ಜುಲೈ 27 ಸಂಜೆಯೇ ರಫೇಲ್ ಯುದ್ಧ ವಿಮಾನಗಳು ಯುನೈಟೆಡ್ ಅರಬ್ ಎಮಿರೇಟ್ಸ್​ನ ಏರ್ ಬೇಸ್ ಅನ್ನು ತಲುಪಿವೆ. ಇಂದು ಅಂಬಾಲದಲ್ಲಿ ರಫೇಲ್ ಜೆಟ್ ಸ್ವಾಗತಿಸಲು ಭಾರತೀಯ ವಾಯುಪಡೆ ಸಜ್ಜಾಗಿದೆ. ಅಂಬಾಲ ವಾಯುನೆಲೆ ಸುತ್ತಮುತ್ತ ಸೆಕ್ಷನ್ 144 ಜಾರಿಯಾಗಿದೆ.

ಮಿಂಚಿಗಿಂತಲೂ ವೇಗ.. 5 ದೈತ್ಯ ಆನೆಗಳನ್ನ ಹೊತ್ತೊಯ್ಯಬಲ್ಲಂಥಾ ಸಾಮರ್ಥ್ಯ.. ರಫೇಲ್‌ ಹೆಸರು ಕೇಳಿದ್ರೆ ಎದುರಾಳಿ ಪಡೆಗೆ ನಡುಕ.. ಅಂತಹ ಡೇರ್‌ಡೆವಿಲ್‌ ಯುದ್ಧವಿಮಾನ 4 ವರ್ಷಗಳ ಬಳಿಕ ಭಾರತದ ಭೂಮಿ ಸ್ಪರ್ಶಿಸಲು ಬರ್ತಿದೆ.

ಕೊನೆಗೂ ಕೋಟ್ಯಂತರ ಭಾರತೀಯರು, ಭಾರತೀಯ ವಾಯುಪಡೆ ಕಾದುಕುಳಿತಿದ್ದ ದಿನ ಬಂದೇ ಬಿಟ್ಟಿದೆ. ಜುಲೈ 27 ರಂದು, ಫ್ರಾನ್ಸ್‌ ಹಸ್ತಾಂತರಿಸಿದ 5 ರಫೇಲ್‌ ಯುದ್ಧವಿಮಾನಗಳು ಭಾರತಕ್ಕೆ ಬರ್ತಿವೆ.. ಬಾರ್ಡಾಕ್ಸ್‌ ಬಳಿಯ ಮೆರಿಗ್ನಾಕ್‌ ಏರ್‌ಬೇಸ್‌ನಿಂದ ಭಾರತದ ಐವರು ಪೈಲಟ್‌ಗಳು ರಫೇಲ್‌ ಫೈಟರ್‌ಗಳನ್ನ ಚಾಲನೆ ಮಾಡಿಕೊಂಡು ಬರ್ತಿದ್ದಾರೆ. 7 ಸಾವಿರ ಕಿಲೋಮೀಟರ್‌ ಅಂತರದ ಪ್ರಯಾಣದಲ್ಲಿ ಅರಬ್‌ ಎಮಿರೇಟ್ಸ್‌ನ ಅಲ್‌ಧಫ್ರಾದಲ್ಲಿರುವ ಫ್ರಾನ್ಸ್‌ ವಾಯುನೆಲೆಯಲ್ಲಿ 1 ಸ್ಟಾಪ್‌ ಕೊಟ್ಟಿದ್ದು, ಅಂಬಾಲಾದತ್ತ ಹೊರಟಿದೆ. ಆಗಸದಲ್ಲಿ ಸಂಚರಿಸುತ್ತಿರುವಾಗ್ಲೇ 5 ಯುದ್ಧವಿಮಾನಗಳಿಗೆ ಇಂಧನ ಪೂರೈಕೆ ಮಾಡಲಾಗಿದೆ.

ರಫೇಲ್‌ನ ಕೆಪ್ಯಾಸಿಟಿ ಭಾರತೀಯ ಪೈಲಟ್‌ಗಳಿಗೆ ಇದೊಂದು ರೋಚಕ ಅನುಭವ. ಯಾಕಂದ್ರೆ, ರಫೇಲ್‌ ಜೆಟ್‌ನ ಕಾಕ್‌ಪಿಟ್‌ನಲ್ಲಿ ಕುಳಿತ ಪೈಲಟ್‌ಗಳಿಗೆ ರಣೋತ್ಸಾಹ ಮೂಡುತ್ತೆ. ಯಾಕಂದ್ರೆ, ರಫೇಲ್‌ನ ಕೆಪ್ಯಾಸಿಟಿಯೇ ಅಂಥಾದ್ದು. ಯಾಕಂದ್ರೆ, ಗಂಟೆಗೆ ಗರಿಷ್ಟ 1,390 ವೇಗದಲ್ಲಿ ರಫೇಲ್‌ ಸಂಚರಿಸುತ್ತೆ. 17 ಟನ್ ತೂಕದ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಜೆಟ್‌ಗಿದೆ. ಏರ್‌-ಟು-ಏರ್‌ ಮತ್ತು ಏರ್‌ಟು ಸರ್ಫೇಸ್‌ ಮಾದರಿ ದಾಳಿ ಮಾಡಬಲ್ಲದು.

2016 ಜನವರಿ 26ರಂದು ಭಾರತ-ಫ್ರಾನ್ಸ್ ಮಧ್ಯೆ 36 ರಫೇಲ್ ಜೆಟ್‌ ಖರೀದಿಗೆ ಒಪ್ಪಂದ ಆಯ್ತು.. ₹59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್‌ ಸಹಿ ಹಾಕಿದ್ರು. ಈಗ ಐದು ಜೆಟ್‌ಗಳು ಇಂದು ಮಧ್ಯಾಹ್ನದ ವೇಳೆಗೆ ಬರುತ್ತಿದ್ದು, ಇನ್ನುಳಿದ 5 ಜೆಟ್‌ಗಳು ತರಬೇತಿಗಾಗಿ ಫ್ರಾನ್ಸ್‌ನಲ್ಲೇ ಉಳಿಯಲಿವೆ. 2022ರ ವೇಳೆಗೆ ಉಳಿದ 26 ಜೆಟ್‌ಗಳನ್ನ ಹಸ್ತಾಂತರಿಸುವ ಸಾಧ್ಯತೆಯಿದೆ.

2011ರಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ ಶೋನಲ್ಲಿ ಮೊದಲ ಬಾರಿಗೆ ಈ ಡಸಾಲ್ಟ್‌ ರಫೇಲ್‌ ಭಾರತದಲ್ಲಿ ತನ್ನ ಶಕ್ತಿ ತೋರಿಸಿತ್ತು. ಆಗ್ಲೇ ರಫೇಲ್ ಮೇಲೆ ಬಹುತೇಕ ದೇಶಗಳ ಕಣ್ಣು ಬಿದ್ದಿತ್ತು. 2013ರಲ್ಲೂ ತನ್ನ ಸಾಮರ್ಥ್ಯವನ್ನ ತೋರಿಸಿತ್ತು. ಈಗ ಕೊನೆಗೂ ಭಾರತೀಯ ಸೇನೆಯ ಭಾಗವಾಗ್ತಿದೆ. ಈ ಐತಿಹಾಸಿಕ ದಿನಕ್ಕಾಗಿ ಇಡೀ ದೇಶವೇ ಕುತೂಹಲದಿಂದ ಕಾಯ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada