ದೆಹಲಿ: ದೆಹಲಿಯಲ್ಲಿ ಕೊವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ 6 ದಿನಗಳ ಲಾಕ್ಡೌನ್ ಘೋಷಿಸಿದ ಕೂಡಲೇ ಮದ್ಯದಂಗಡಿಯಲ್ಲಿ ಜನರು ಸಾಲುಗಟ್ಟಿ ನಿಂತ ದೃಶ್ಯ ಎಲ್ಲೆಡೆ ಕಂಡು ಬಂದಿದೆ. ದೆಹಲಿಯಲ್ಲಿ ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ಲಾಕ್ಡೌನ್ ಘೋಷಿಸಲಾಗಿದೆ. ರಾಷ್ಟ್ರ ರಾಜಧಾನಿಯ ಗೋಲ್ ಮಾರ್ಕೆಟ್ ಮತ್ತು ಖಾನ್ ಮಾರ್ಕೆಟ್ ಪ್ರದೇಶಗಳಲ್ಲಿ ಜನರು ಮದ್ಯದಂಗಡಿಯ ಮುಂದೆ ಸಾಲು ನಿಂತಿರುವ ಚಿತ್ರವನ್ನು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
ಚುಚ್ಚುಮದ್ದಿನಿಂದ ಯಾವುದೇ ಪ್ರಯೋಜನವಿಲ್ಲ, ಮದ್ಯ ಸೇವನೆ ಮಾಡುವವರೆಲ್ಲರೂ ಕೊರೊನಾವೈರಸ್ನಿಂದ ಸುರಕ್ಷಿತವಾಗಿರುತ್ತಾರೆ. ಔಷಧಿಯಿಂದ ಮದ್ಯವೇ ಲೇಸು ಎಂದು ಮದ್ಯದಂಗಡಿಗೆ ಮದ್ಯ ಖರೀದಿ ಮಾಡಲು ಬಂದ ಮಹಿಳೆಯೊಬ್ಬರು ಹೇಳುತ್ತಿರುವ ವಿಡಿಯೊವನ್ನು ಎಎನ್ಐ ಟ್ವೀಟ್ ಮಾಡಿದೆ.
Delhi: People gather in large numbers outside a liquor shop in Khan Market; social distancing norms flouted.
Lockdown to be imposed in the national capital from 10pm tonight to 6am next Monday (26th April). pic.twitter.com/Fq1iNGJo1d
— ANI (@ANI) April 19, 2021
#WATCH Delhi: A woman, who has come to purchase liquor, at a shop in Shivpuri Geeta Colony, says, “…Injection fayda nahi karega, ye alcohol fayda karegi…Mujhe dawaion se asar nahi hoga, peg se asar hoga…” pic.twitter.com/iat5N9vdFZ
— ANI (@ANI) April 19, 2021
ಲಾಕ್ಡೌನ್ ಘೋಷಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಖಾಸಗಿ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಅನುಸರಿಸಲಿದ್ದು ಕೇಂದ್ರ ಸರ್ಕಾರ, ಸಾರ್ವಜನಿಕ ಸೇವಾ ಸಂಸ್ಥೆಗಳು ಎಂದಿನಂತೆ ಕಾರ್ಯವೆಸಗಲಿವೆ. ಈ ರೀತಿಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಗುರುತಿನ ಚೀಟಿ ಬಳಸುವುದು ಕಡ್ಡಾಯ ಎಂದಿದ್ದಾರೆ.
ಎಲ್ಲ ಖಾಸಗಿ ಆರೋಗ್ಯ ಸಂಸ್ಥೆ, ಆಸ್ಪತ್ರೆ, ವೈದ್ಯರ ಸೇವೆ, ನರ್ಸಿಂಗ್, ಅರೆ ವೈದ್ಯಕೀಯ ಸಂಸ್ಥೆಗಳು ಕಾರ್ಯವೆಸಗಲಿವೆ. ಗರ್ಭಿಣಿಯುರು, ರೋಗಿಗಳು, ಕೊವಿಡ್ ಪರೀಕ್ಷೆಗಾಗಿ ಹೋಗುವವರು, ಲಸಿಕೆ ಪಡೆಯಲು ಹೋಗುವವರು, ವಿಮಾನ ನಿಲ್ದಾಣಕ್ಕೆ ಹೋಗುವವವರು ಅಥವಾ ಬರುವವರು, ರೈಲು ಮತ್ತು ಬಸ್ ನಿಲ್ದಾಣಗಳಿಗೆ ಹೋಗುವುದಕ್ಕೆ ಅನುಮತಿ ಇದೆ. ಪ್ರಯಾಣಿಕರು ಪ್ರಯಾಣದ ಟಿಕೆಟ್ ತೋರಿಸಬೇಕು, ರೋಗಿಗಳಾಗಿದ್ದರೆ ವೈದ್ಯರ ಸಲಹೆ ಚೀಟಿ, ಕೆಲಸದ ಕಾರ್ಮಿಕರಾಗಿದ್ದರೆ ಸಂಸ್ಥೆಯ ಗುರುತಿನ ಚೀಟಿ ತೋರಿಸಬೇಕು. ವಿದ್ಯಾರ್ಥಿಗಳು ಪರೀಕ್ಷೆ ಗುರುತಿನ ಚೀಟಿ ತೋರಿಸಬೇಕು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು, ಶಿಕ್ಷಕರಿಗೆ, ಪರೀಕ್ಷೆಯ ಕರ್ತವ್ಯದಲ್ಲಿರುವ ಇತರ ಸಿಬ್ಬಂದಿಗಳಿಗೆ ನಿರ್ಬಂಧಗಳಿರುವುದಿಲ್ಲ. ಅಂತರ್ ರಾಜ್ಯ, ರಾಜ್ಯದೊಳಗಿನ ಸಾರಿಗೆ ಸಂಪರ್ಕ, ಅಗತ್ಯ ವಸ್ತುಗಳ ಪೂರೈಕೆ ಅಬಾಧಿತವಾಗಿರಲಿದೆ. ಇದಕ್ಕಾಗಿ ಪ್ರತ್ಯೇಕ ಅನುಮತಿ, ಇ- ಪಾಸ್ ಅಗತ್ಯವಿರುವುದಿಲ್ಲ
ಆಹಾರ, ಆಹಾರೋತ್ಪನ್ನ, ದವಸ ಧಾನ್ಯ, ತರಕಾರಿ, ಹಣ್ಣು, ಹಾಲು, ಮೀನು, ಮಾಂಸ, ಪಶು ಆಹಾರ, ಫಾರ್ಮಸಿ, ವೈದ್ಯಕೀಯ ಕೇಂದ್ರಗಳು, ಪತ್ರಿಕೆ, ಬ್ಯಾಂಕ್, ಎಟಿಎಂ, ಸ್ಟಾಕ್ ಎಕ್ಸ್ಚೇಂಜ್, ಟೆಲಿ ಕಮ್ಯುನಿಕೇಷನ್, ಇಂಟರ್ನೆಟ್, ಬ್ರಾಡ್ ಕಾಸ್ಟಿಂಗ್ ಮತ್ತು ಕೇಬಲ್ ಸರ್ವೀಸ್, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು ಇರಲಿವೆ.
ದೆಹಲಿಯಲ್ಲಿ ಭಾನುವಾರ 25,462 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಪಾಸಿಟಿವಿಟಿ ದರ 29.74 ಆಗಿದೆ. ಕಳೆದ 24ಗಂಟೆಗಳಲ್ಲಿ ಕೊವಿಡ್ ನಿಂದ 161 ಮಂದಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ 6 ದಿನಗಳ ಲಾಕ್ಡೌನ್; ಇಂದು ರಾತ್ರಿಯಿಂದಲೇ ಕಠಿಣ ನಿಯಮ ಜಾರಿ: ಅರವಿಂದ ಕೇಜ್ರಿವಾಲ್
(After 6 day Lockdown announcement in Delhi long queues were seen outside liquor shops)