ಮಗಳ ಸಾವಿಗೆ ನ್ಯಾಯ ಸಿಕ್ಕು ಕೆಲವೇ ದಿನಗಳಲ್ಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ತಂದೆ ನಿಧನ

|

Updated on: Dec 10, 2023 | 1:13 PM

ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ತಂದೆ ಎಂ.ಕೆ.ವಿಶ್ವನಾಥನ್ (82) ವಿಧಿವಶರಾಗಿದ್ದಾರೆ. ನ್ಯಾಯಕ್ಕಾಗಿ ಸುದೀರ್ಘ ಹೋರಾಟದ ನಂತರ ಮಗಳ ಹಂತಕರಿಗೆ ಶಿಕ್ಷೆಯಾದ ನಂತರ ತಂದೆ ವಿದಾಯ ಹೇಳಿದರು. ಎರಡು ದಿನಗಳ ಹಿಂದೆ ಹೃದಯಾಘಾತದಿಂದ ವಿಶ್ವನಾಥನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನೈದು ವರ್ಷಗಳ ಕಾನೂನು ಹೋರಾಟದ ನಂತರ, ಆಕೆಯ ಮಗಳ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಮಗಳ ಸಾವಿಗೆ ನ್ಯಾಯ ಸಿಕ್ಕು ಕೆಲವೇ ದಿನಗಳಲ್ಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ತಂದೆ ನಿಧನ
ಎಂಕೆ ವಿಶ್ವನಾಥನ್​
Image Credit source: India Today
Follow us on

ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ತಂದೆ ಎಂ.ಕೆ.ವಿಶ್ವನಾಥನ್ (82) ವಿಧಿವಶರಾಗಿದ್ದಾರೆ.
ನ್ಯಾಯಕ್ಕಾಗಿ ಸುದೀರ್ಘ ಹೋರಾಟದ ನಂತರ ಮಗಳ ಹಂತಕರಿಗೆ ಶಿಕ್ಷೆಯಾದ ನಂತರ ತಂದೆ ವಿದಾಯ ಹೇಳಿದರು. ಎರಡು ದಿನಗಳ ಹಿಂದೆ ಹೃದಯಾಘಾತದಿಂದ ವಿಶ್ವನಾಥನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನೈದು ವರ್ಷಗಳ ಕಾನೂನು ಹೋರಾಟದ ನಂತರ, ಆಕೆಯ ಮಗಳ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಹೃದಯಾಘಾತದ ಬಳಿಕ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು, ಮಗಳ ಕೊಂದ ಹಂತಕರಿಗೆ ಶಿಕ್ಷೆಯಾಗುವುದನ್ನು ನೋಡಬೇಕು ಎಂದು ಹಂಬಲಿಸುತ್ತಿದ್ದರು. ಕೊಲೆ ನಡೆದು 15 ವರ್ಷಗಳ ಬಳಿಕ ಶಿಕ್ಷೆ ಪ್ರಕಟವಾಗಿತ್ತು. ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್ ಮತ್ತು ಬಲ್ಜೀತ್ ಮಲಿಕ್ ಅವರನ್ನು ದೆಹಲಿ ಸಾಕೇತ್ ಸೆಷನ್ಸ್ ಕೋರ್ಟ್ ದೋಷಿಗಳೆಂದು ಘೋಷಿಸಿದೆ.

ಪತ್ರಕರ್ತೆ ಸೌಮ್ಯಾ ವಿಶ್ವನಾಥನ್​ ಅವರನ್ನು 2008ರ ಸೆಪ್ಟೆಂಬರ್ 30ರಂದು ಹತ್ಯೆ ಮಾಡಲಾಗಿತ್ತು, ಅವರಿಗೆ ಆಗ 26 ವರ್ಷ ವಯಸ್ಸು.
ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಮತ್ತಷ್ಟು ಓದಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಗೈದ ಪತ್ನಿ: ಆರೋಪಿಗಳ ಕೃತ್ಯವನ್ನು ಲೈವ್​ ಆಗಿ ಕಂಡು ಗಾಭರಿಗೊಂಡ ಮನೆ ಓನರ್​

ಅಕ್ಟೋಬರ್ 18 ರಂದು ನ್ಯಾಯಾಲಯವು ಪ್ರಕರಣದಲ್ಲಿ ಎಲ್ಲಾ ಐವರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತು. 14 ವರ್ಷಗಳ ವಿಚಾರಣೆಯ ಉದ್ದಕ್ಕೂ, ಇಬ್ಬರೂ ಪೋಷಕರು ನ್ಯಾಯಾಲಯದಲ್ಲಿ ಇದ್ದರು, ಪ್ರತಿ ವಿಚಾರಣೆಗೆ ಹಾಜರಾಗಿದ್ದರು ಮತ್ತು ಪ್ರಕ್ರಿಯೆಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದ್ದರು.

ಆರೋಗ್ಯದ ಸಮಸ್ಯೆಗಳು ತಲೆದೋರಿದರೂ, ವಿಶ್ವನಾಥನ್ ಅವರು ಕೋರ್ಟಿನಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ತಮ್ಮ ಮಗಳಿಗೆ ನ್ಯಾಯಕ್ಕಾಗಿ ಆಶಿಸಿದರು. ಐವರು ಆರೋಪಿಗಳಿಗೆ ಶಿಕ್ಷೆಯಾದ ದಿನ ವಿಶ್ವನಾಥನ್ ನಿರಾಳರಾಗಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ