AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಗೋದಾವರಿಯಲ್ಲಿ ಹಸುವಿಗೆ ಸೀಮಂತ, ಕರುವಿಗೆ ತೊಟ್ಟಿಲು ಶಾಸ್ತ್ರ ಅದ್ದೂರಿಯಾಗಿ ನಡೆಯಿತು!

Seemanta -Cradle Ceremony: ಆ ಪುಟ್ಟ ಕರುವಿಗೆ ಹಣೆಯಲ್ಲಿ ತಿಲಕವಿಟ್ಟು, ಅಕ್ಷತೆ ಹಾಕಿ ಆಶೀರ್ವದಿಸಿದರು. ಇದಲ್ಲದೆ, ತೊಟ್ಟಿಲಿಗೆ ಹೂವು, ಬಣ್ಣಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಪ್ರಸ್ತುತ ಈ ಪುಟ್ಟ ಕರುವಿಗೆ ನಡೆದ ಜನ್ಮದಿನ ಆಚರಣೆ ಏಲೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಶ್ಚಿಮ ಗೋದಾವರಿಯಲ್ಲಿ ಹಸುವಿಗೆ ಸೀಮಂತ, ಕರುವಿಗೆ ತೊಟ್ಟಿಲು ಶಾಸ್ತ್ರ ಅದ್ದೂರಿಯಾಗಿ ನಡೆಯಿತು!
ಹಸುವಿಗೆ ಸೀಮಂತ ಮತ್ತು ಕರುವಿಗೆ ತೊಟ್ಟಿಲು ಸಮಾರಂಭ
Follow us
ಸಾಧು ಶ್ರೀನಾಥ್​
|

Updated on: Dec 10, 2023 | 1:03 PM

ಏಲೂರು, (ಪಶ್ಚಿಮ ಗೋದಾವರಿ) ಡಿಸೆಂಬರ್ 10: ಸೀಮಂತ, ಯಾವುದೇ ಮಹಿಳೆ ತನ್ನ ಜೀವಿತಾವಧಿಯಲ್ಲಿ ಆಚರಿಸಲು ಇಷ್ಟಪಡುವ ಹಬ್ಬ. ಏಕೆಂದರೆ ತನ್ನ ಹೊಟ್ಟೆಯಲ್ಲಿರುವ ಮಗು ಹಂತ ಹಂತವಾಗಿ ರೂಪಾಂತರಗೊಳ್ಳುತ್ತಿದ್ದಂತೆ ಮಹಿಳೆ ತುಂಬಾ ಸಂತೋಷವನ್ನು ಅನುಭವಿಸುತ್ತಾಳೆ. ಇಂತಹ ಸಮಯದಲ್ಲಿ ಗಂಡನ ಬಂಧುಗಳು, ಹೆಣ್ಣಿನ ಬಂಧುಗಳು ಎಲ್ಲರೂ ಸೇರಿ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ನಂತರ ಆಕೆಗೆ ಹುಟ್ಟಿದ ಮಗುವನ್ನು 21ನೇ ದಿನ ಅದೇ ಅದ್ಧೂರಿಯಿಂದ ತೊಟ್ಟಿಲು ಶಾಸ್ತ್ರ ( Cradle Ceremony) ಆಚರಿಸುತ್ತಾರೆ. ಇದು ಮಾನವರಲ್ಲಿ ಕಂಡುಬರುವ ಸಾಮಾನ್ಯ ಸಂಪ್ರದಾಯವಾಗಿದೆ. ಆದರೆ ಜಾನುವಾರು ಮತ್ತಿತರೆ ಸಾಕು ಪ್ರಾಣಿಗಳಿಗೂ (Cow) ಸೀಮಂತ ನಡೆಸುವ (Seemantha) ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಏಲೂರು ಜಿಲ್ಲೆಯಲ್ಲಿ ಇಂತಹುದೇ ಕಾರ್ಯಕ್ರಮ ನಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.

ಏಲೂರು ಜಿಲ್ಲೆಯ (West Godavari) ನಿಡ್ಮಾರು ಮಂಡಲದ ಫತ್ತೇಪುರಂ ಗ್ರಾಮದಲ್ಲಿ 21 ದಿನಗಳ ಚಿಕ್ಕ ಕರುವಿಗೆ ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಗ್ರಾಮಸ್ಥರು ಆಯೋಜಿದ್ದು, ಕಣ್ಣಿಗೆ ಹಬ್ಬವಾಗಿ ಕಂಗೊಳಿಸಿದೆ. ಗ್ರಾಮದ ನಡಿಮಪಲ್ಲಿ ವಾಸು ಎಂಬುವವರು ತಮ್ಮ ಹಸುವಿಗೆ ವೆಂಕಟಲಕ್ಷ್ಮಿ ಎಂದು ನಾಮಕರಣ ಮಾಡಿ ಸ್ಥಳೀಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ. ಪ್ರತಿದಿನ ದೇವಸ್ಥಾನಕ್ಕೆ ಬರುವ ಭಕ್ತರು ಆಂಜನೇಯ ಸ್ವಾಮಿಯ ಜೊತೆಗೆ ತಾಯಿ ಹಸುವಿಗೂ ಪೂಜಿಸುತ್ತಾರೆ. ಆ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ಹಾಗಾಗಿ ಗ್ರಾಮಸ್ಥರೆಲ್ಲರೂ ಸೇರಿ ತಿಂಗಳು ಮುಗಿದ ನಂತರ ಗರ್ಭಿಣಿಯಾದ ಮಹಿಳೆಯರಿಗೆ ಸೀಮಂತ ಮಾಡುವಂತೆ ವೆಂಕಟಲಕ್ಷ್ಮಿ ಹಸುವಿಗೂ ಮಾಡಬೇಕು ಎಂದು ನಿರ್ಧರಿಸಿದರು.

ವಿಜಯದಶಮಿಯ ದಿನದಂದು ಗ್ರಾಮಸ್ಥರೆಲ್ಲ ಸೇರಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲಾ ಗ್ರಾಮಸ್ಥರಿಗೆ 30 ಬಗೆಯ ಖಾದ್ಯಗಳೊಂದಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಂದಹಾಗೆ, ಕಳೆದ ತಿಂಗಳು 17ರಂದು ವೆಂಕಟಲಕ್ಷ್ಮಿಗೆ ಹೆಣ್ಣು ಕರು ಜನಿಸಿದೆ. ಇದರಿಂದ ಗ್ರಾಮಸ್ಥರು ಸಂತಸಗೊಂಡಿದ್ದರು. ಹಸುವಿಗೆ ಸೀಮಂತ ಕಾರ್ಯ ಎಷ್ಟು ಅದ್ಧೂರಿಯಾಗಿ ಮಾಡಿದ್ದರೋ, ಅದೇ ರೀತಿ ಕರುವಿನ ಜನನವನ್ನೂ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದರು. ಇತ್ತೀಚೆಗೆ ಆಂಜನೇಯಸ್ವಾಮಿ ದೇಗುಲದಲ್ಲಿ ಕರುವಿಗೆ 21 ದಿನವಾದಾಗ ಪುಟ್ಟ ಕರುವಿಗೆ ಬಟ್ಟೆಗಳನ್ನು ಜೋಡಿಸಿ, ಮಂಗಳ ಘೋಷ ಹಾಕಿದರು.

Also Read:  ಮಾನವರಂತೆ ವಿಶಿಷ್ಟ ರೀತಿಯಲ್ಲಿ ಮಲೆನಾಡು ಗಿಡ್ಡ ಹಸುವಿಗೆ ಸೀಮಂತ ಮಾಡಿ, ಮುದ್ದುಗೆರೆದ ಮುದ್ದಗೆರೆ ಗ್ರಾಮಸ್ಥರು!

ಆ ಪುಟ್ಟ ಕರುವಿಗೆ ಹಣೆಯಲ್ಲಿ ತಿಲಕವಿಟ್ಟು, ಅಕ್ಷತೆ ಹಾಕಿ ಆಶೀರ್ವದಿಸಿದರು. ಇದಲ್ಲದೆ, ತೊಟ್ಟಿಲಿಗೆ ಹೂವು, ಬಣ್ಣಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿತ್ತು. ಪ್ರಸ್ತುತ ಈ ಪುಟ್ಟ ಕರುವಿಗೆ ನಡೆದ ಜನ್ಮದಿನ ಆಚರಣೆ ಏಲೂರು ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಸು ಮತ್ತು ಕರುವನ್ನು ಸ್ವಂತ ಕುಟುಂಬದ ಸದಸ್ಯರಂತೆ ಗ್ರಾಮಸ್ಥರು ಸಮಾರಂಭ ಏರ್ಪಡಿಸಿ ಶುಭ ಕೋರಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ