ದೆಹಲಿ, ಜೂ.5: ಪ್ರಧಾನಿ ಮೋದಿ (Narendra Modi) ಅವರು ಇಂದು ಎನ್‌ಡಿಎ ಸಭೆಯ ನಂತರ ರಾಷ್ಟ್ರಭವನಕ್ಕೆ ತೆರಳಿ ರಾಷ್ಟ್ರಪತಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಎನ್‌ಡಿಎ ಸಭೆಯ ನಂತರ ಎಲ್ಲರ ತಿರ್ಮಾನದಂತೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಹಕ್ಕು ಮಂಡನೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಸಚಿವ ಸಂಪುಟ ಸಭೆಯನ್ನು ನಡೆಸಿ, ಪ್ರಧಾನಿ ಸ್ಥಾನ ಹಾಗೂ ಎಲ್ಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಆದರೆ ಹೊಸ ಸರ್ಕಾರ ರಚನೆ ಆಗುವವರೆಗೆ ಹಂಗಾಮಿ ಪ್ರಧಾನಿಯಾಗಿ ಹಾಗೂ ಹೀಗಿನ ಸಚಿವ ಸಂಪುಟವೇ ಮುಂದುವರಿಯುವಂತೆ ಹೇಳಿದ್ದಾರೆ.
ಇದಕ್ಕೂ ಮುನ್ನ ಸರ್ಕಾರ ರಚನೆ ಮಾಡಲು ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಹಿರಿಯ ನಾಯಕರು ರಾಷ್ಟ್ರಪತಿ ಜತೆಗೆ ಚರ್ಚೆ ನಡೆಸಲಿದ್ದಾರೆ. ಬಿಜೆಪಿ ಕಡಿಮೆ ಸ್ಥಾನ ಪಡೆದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಎನ್‌ಡಿಎ ಸಂಸದರ ಬಹುಮತದೊಂದಿಗೆ ಮೋದಿ ಹೊಸ ಸರ್ಕಾರವನ್ನು ರಚನೆ ಮಾಡಬೇಕಿದೆ. ಅದಕ್ಕಾಗಿ ಎನ್‌ಡಿಎ ಸಂಸದರ ಸಭೆ ನಡೆಸಿ ಅಲ್ಲಿ ಒಂದು ತಿರ್ಮಾನವನ್ನು ತೆಗೆದುಕೊಂಡು ನಂತರ ಸರ್ಕಾರ ರಚನೆ ಮಾಡಲಿದ್ದಾರೆ. ಈಗಾಗಲೇ ಎನ್‌ಡಿಎ ಸಭೆ ನಡೆಯುತ್ತಿದ್ದು, ಎಲ್ಲ ಆಯಾಗಳಲ್ಲೂ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಆಗಲಿದೆ ಎಂಬುದನ್ನು ಮೂಲಗಳು ತಿಳಿಸಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ
ಇನ್ನು ಈ ಎನ್‌ಡಿಎ ಒಕ್ಕೂಟದಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮತ್ತು ಜನತಾ ದಳದ ನಿತೀಶ್ ಕುಮಾರ್ ಕೂಡ ಸೇರಿದ್ದಾರೆ. ಸರ್ಕಾರ ರಚನೆಗೆ ಅವರ ಬೆಂಬಲ ಅಗತ್ಯವಾಗಿದ್ದು, ಅವರನ್ನು ಎನ್ಡಿಎಗೆ ಬೆಂಬಲ ನೀಡುವಂತೆ ಮೋದಿ ಹಾಗೂ ಅಮಿತ್ ಶಾ ಕೇಳಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಲೋಕಸಭೆಯಲ್ಲಿ 28 ಸ್ಥಾನಗಳನ್ನು ಪಡೆದಿರುವ ಚಂದ್ರಬಾಬು ನಾಯ್ಡು ಅವರ ಪಕ್ಷ ಹಾಗೂ ಬಿಹಾರದಲ್ಲಿ 17 ಸ್ಥಾನಗಳನ್ನು ಪಡೆದಿರುವ ನಿತೀಶ್ ಕುಮಾರ್ ಅವರ ಬೆಂಬಲ ಎನ್ಡಿಎಗೆ ಅಗತ್ಯವಾಗಿದೆ. ಇದೀಗ ಈ ಇಬ್ಬರು ಕಿಂಗ್ಮೇಕರ್ ಆಗಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದು ಕಡೆ ಇಂಡಿಯಾ ಒಕ್ಕೂಟ ಕೂಡ ಈ ಇಬ್ಬರಿಗಾಗಿ ಹೊಂಚು ಹಾಕಿದೆ. ಅಲ್ಲಿಯೂ ಸರ್ಕಾರ ರಚನೆ ಮಾಡಲು ಇವರು ಪ್ರಮುಖ ಪಾತ್ರವಹಿಸುತ್ತಾರೆ.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:51 pm, Wed, 5 June 24