ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 9 ನಕ್ಸಲರ ಬಂಧನ

ಛತ್ತೀಸ್​ಗಢದ ಬಿಜಾಪುರದಲ್ಲಿ ಬಂಧಿತರಾಗಿರುವ ಐವರು ನಕ್ಸಲೀಯರು ಕಳೆದ ತಿಂಗಳು ಐಇಡಿ ಬಳಸಿ, ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದರು. ಆದರೆ, ಆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಸ್ಫೋಟದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು.

ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 9 ನಕ್ಸಲರ ಬಂಧನ
ನಕ್ಸಲೀಯರು
Follow us
ಸುಷ್ಮಾ ಚಕ್ರೆ
|

Updated on: Jun 05, 2024 | 4:06 PM

ನವದೆಹಲಿ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ (Anti Naxal Operation) ಭಾರೀ ಯಶಸ್ಸನ್ನು ಸಾಧಿಸಿರುವ ಭದ್ರತಾ ಪಡೆ ಸಿಬ್ಬಂದಿ (Security Forces) ಇಂದು (ಬುಧವಾರ) ಛತ್ತೀಸಗಡದ ಬಿಜಾಪುರ ಜಿಲ್ಲೆಯ 2 ಸ್ಥಳಗಳಿಂದ 9 ನಕ್ಸಲೀಯರನ್ನು ಬಂಧಿಸಿವೆ. ಅವರಲ್ಲಿ ಐವರು ಕಳೆದ ತಿಂಗಳು ಪೊಲೀಸ್ ಕಾರನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟವನ್ನು ಮಾಡಿದ್ದರು. ಅವರೀಗ ಪೊಲೀಸರ ವಶದಲ್ಲಿದ್ದಾರೆ.

ಬಂಧಿಸಲಾಗಿರುವ ಈ ಐವರು ಉಗ್ರರನ್ನು ಗುಡ್ಡು ಕುಮ್ಮಾ (25), ಬುಧು ಕುಮ್ಮಾ (30), ಸುರೇಶ್ ಓಯಮ್ (29), ವಿನೋದ್ ಕೊರ್ಸಾ (25) ಮತ್ತು ಮುನ್ನಾ ಕುಮ್ಮಾ (25) ಎಂದು ಗುರುತಿಸಲಾಗಿದೆ. ಫರ್ಸೆಗಢ ಪೊಲೀಸ್ ಠಾಣೆ ವ್ಯಾಪ್ತಿಯ ಮಂಡೆಮ್-ಕುಪ್ರೆಲ್ ಗ್ರಾಮಗಳಲ್ಲಿ ಬಂಧಿಸಲಾಗಿದೆ. ಐವರು ಉಗ್ರರ ತಲೆಯ ಮೇಲೆ ತಲಾ 10,000 ರೂ. ಬಹುಮಾನ ಇತ್ತು.

ಇದನ್ನೂ ಓದಿ: ನಕ್ಸಲರಿಂದ ಬೆದರಿಕೆ; ಪದ್ಮಶ್ರೀ ಪ್ರಶಸ್ತಿ ವಾಪಾಸ್ ನೀಡಲು ವೈದ್ಯ ಹೇಮಚಂದ್ ಮಾಂಝಿ ನಿರ್ಧಾರ

ಮೇ 15ರಂದು ಫರ್ಸೆಗಢ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಆಕಾಶ್ ಮಸಿಹ್ ಮತ್ತು ಕಾನ್‌ಸ್ಟೆಬಲ್ ಸಂಜಯ್ ಪೊಲೀಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ಇದನ್ನು ಐಇಡಿ ಬಳಸಿ ಮಾಡಲಾಗಿತ್ತು. ಈ ಸ್ಫೋಟದಿಂದ ವಾಹನದ ಬಾನೆಟ್‌ಗೆ ಹಾನಿಯನ್ನುಂಟಾಗಿತ್ತು. ಈ ಸಂದರ್ಭದಲ್ಲಿ ಅವರು ಗಾಯಗಳಿಲ್ಲದೆ ಪಾರಾಗಿದ್ದರು.

ಇದಲ್ಲದೆ, ಇತರ ನಾಲ್ವರು ನಕ್ಸಲೀಯರನ್ನು ಮದ್ದೇಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಎಲ್ಲಾ 9 ನಕ್ಸಲೀಯರು ಕೊಲೆ, ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಳವಡಿಸುವುದು, ಅಕ್ರಮ ಸುಲಿಗೆ, ಮಾವೋವಾದಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಾಕುವ ಘಟನೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಮೂವರು ಮಾವೋವಾದಿಗಳ ಎನ್​ಕೌಂಟರ್, 33 ನಕ್ಸಲೀಯರು ಶರಣಾಗತಿ

ಮದ್ದೇಡ್‌ನಿಂದ ಬಂಧಿಸಲ್ಪಟ್ಟ ಇತರ ನಾಲ್ವರಲ್ಲಿ ಒಬ್ಬ ಲಚ್ಚು ಪುಣೆಂ ನಕ್ಸಲೀಯರ ಮದ್ದೇಡ್ ಪ್ರದೇಶ ಸಮಿತಿಯ ಸದಸ್ಯನಾಗಿ ಸಕ್ರಿಯನಾಗಿದ್ದನು. ಅವನ ತಲೆಯ ಮೇಲೆ 5 ಲಕ್ಷ ರೂ. ಬಹುಮಾನವಿತ್ತು. ಪೊಲೀಸರು ಅವನಿಂದ ಸ್ಫೋಟಕ, ಸುರಕ್ಷತಾ ಫ್ಯೂಸ್‌ಗಳು, ಜಿಲೆಟಿನ್ ಕಡ್ಡಿಗಳು, ಮಾವೋವಾದಿಗಳ ಕರಪತ್ರಗಳು ಮತ್ತು ಬ್ಯಾನರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಜೂನ್ 2ರಂದು ಸುಕ್ಮಾದಲ್ಲಿ 8 ನಕ್ಸಲೀಯರು ಸ್ಕ್ಯೂರಿಟಿ ಪಡೆಗಳಿಗೆ ಶರಣಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್