AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ನಮ್ಮ ಬೇಡಿಕೆ ಈಡೇರಿಸಿ: ಹೊಸ ಸರ್ಕಾರಕಕ್ಕೆ ರಿಯಲ್ ಎಸ್ಟೇಟ್ ಉದ್ಯಮದ ಕೋರಿಕೆ

Real estate sector demands to new govt: ಕಳೆದ ಕೆಲ ವರ್ಷಗಳಿಂದ ಇನ್ಫ್ರಾಸ್ಟ್ರಕ್ಚರ್ ಯೋಜನೆಗಳ ಪರಿಣಾಮವಾಗಿ ಭಾರತದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗಣನೀಯವಾಗಿ ಬೆಳೆದಿದೆ. ಈ ಬೆಳವಣಿಗೆಗೆ ಇನ್ನಷ್ಟು ಪುಷ್ಟಿ ಕೊಡಲು ಬೇಕಾದ ಕ್ರಮಗಳನ್ನು ಜಾರಿಗೊಳಿಸಿ ಎಂದು ಈ ಉದ್ಯಮದವರು ಬೇಡಿಕೆ ಮುಂದಿಟ್ಟಿದ್ದಾರೆ. ಬಡ್ಡಿದರ ಇಳಿಕೆಯಿಂದ ಹಿಡಿದು ತೆರಿಗೆ ಇಳಿಕೆಯವರೆಗೆ ವಿವಿಧ ಬೇಡಿಕೆಗಳ ಬಗ್ಗೆ ವಿವರ ಇಲ್ಲಿದೆ.

ಈ ನಮ್ಮ ಬೇಡಿಕೆ ಈಡೇರಿಸಿ: ಹೊಸ ಸರ್ಕಾರಕಕ್ಕೆ ರಿಯಲ್ ಎಸ್ಟೇಟ್ ಉದ್ಯಮದ ಕೋರಿಕೆ
ರಿಯಲ್ ಎಸ್ಟೇಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 05, 2024 | 3:10 PM

Share

ನವದೆಹಲಿ, ಜೂನ್ 5: ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಯಿತು. ಎನ್​ಡಿಎ 3.0 ಸರ್ಕಾರ ರಚನೆ ಆಗುವುದು ಬಹುತೇಕ ಖಚಿತವಾಗಿದೆ. ಹೊಸ ಸರ್ಕಾರ ರಚನೆ ಇದೇ ಎಂಟರಂದು ಆಗುವ ಸಾಧ್ಯತೆ ಇದೆ. ಕಳೆದ ಕೆಲ ವರ್ಷಗಳಿಂದ ಹುಲುಸಾಗಿ ಬೆಳೆದಿರುವ ರಿಯಲ್ ಎಸ್ಟೇಟ್ ಉದ್ಯಮ (real estate sector) ಈಗ ಹೊಸ ಸರ್ಕಾರದಿಂದ ಇನ್ನಷ್ಟು ಪುಷ್ಟಿ ಪಡೆಯಲು ಅಪೇಕ್ಷಿಸುತ್ತಿದೆ. ಉದ್ಯಮವನ್ನು ಇನ್ನಷ್ಟು ಬಲಪಡಿಸಬಲ್ಲ ಕೆಲ ಕ್ರಮಗಳಿಗೆ ಮನವಿ ಮಾಡಲಾಗುತ್ತಿದೆ. ಆದಾಯ ತೆರಿಗೆ, ಜಿಎಸ್​ಟಿ ತೆರಿಗೆ, ಇಎಂಐ ಇತ್ಯಾದಿಯಲ್ಲಿ ಬದಲಾವಣೆ ತರಬಹುದು ಎನ್ನುವ ಸಲಹೆಯನ್ನು ಉದ್ಯಮಿಗಳು ನೀಡಿದ್ದಾರೆ.

ಬಡ್ಡಿದರ, ಇಎಂಐ ಇಳಿಸಿ…

ಬ್ಯಾಂಕ್​ನಲ್ಲಿ ಗೃಹ ಸಾಲಕ್ಕೆ ಬಡ್ಡಿದರ ಅಧಿಕ ಮಟ್ಟದಲ್ಲಿದೆ. ಪರಿಣಾಮವಾಗಿ ಇಎಂಐ ಹೊರೆ ಮಧ್ಯಮವರ್ಗದ ಗ್ರಾಹಕರಿಗೆ ಹೆಚ್ಚಾಗಿದೆ. ಕೋವಿಡ್​ಗೆ ಮುನ್ನ ಶೇ. 6.25ರಷ್ಟಿದ್ದ ಗೃಹಸಾಲ ದರ ಈಗ ಶೇ. 8.75ರ ಆಸುಪಾಸಿನಲ್ಲಿ ಇದೆ. ಗೃಹಸಾಲದ ಮೊದಲ 20 ಲಕ್ಷ ರೂ ಮೊತ್ತಕ್ಕೆ ಮೊದಲ ಐದು ವರ್ಷದಲ್ಲಿ ಶೇ. 5ರಷ್ಟು ಮಾತ್ರ ಬಡ್ಡಿ ವಿಧಿಸುವುದು ಸೂಕ್ತ ಎನ್ನುವ ಸಲಹೆಯನ್ನು NAREDCO ಅಧ್ಯಕ್ಷ ಜಿ ಹರಿಬಾಬು ನೀಡಿದ್ದಾರೆ.

ಇದನ್ನೂ ಓದಿ: ಪರ್ಸನಲ್ ಲೋನ್ ಅನ್ನು ಮುಂಗಡವಾಗಿ ತೀರಿಸಬೇಕೆ? ಈ ಅಂಶಗಳು ತಿಳಿದಿರಲಿ

ಉದ್ಯಮದವರಿಗೆ ಉತ್ತೇಜಕಗಳನ್ನು ನೀಡಬೇಕು

ರಿಯಲ್ ಎಸ್ಟೇಟ್ ವಲಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಅಗತ್ಯವಾದ ನೀತಿ ಸುಧಾರಣೆಗಳನ್ನು ತರಬೇಕು. ಸುಸ್ಥಿರ ಕಟ್ಟಡ ನಿರ್ಮಾಣ ಕ್ರಮ ಅನುಸರಿಸುವ ಬಿಲ್ಡರ್​ಗಳಿಗೆ ಹಣಕಾಸು ಉತ್ತೇಜಕ, ತೆರಿಗೆ ರಿಯಾಯಿತಿ ಇತ್ಯಾದಿಯನ್ನು ಕೊಟ್ಟು ಪ್ರೇರೇಪಿಸಬಹುದು ಎಂದು ಹರಿಬಾರು ಅಭಿಪ್ರಾಯಪಟ್ಟಿದ್ದಾರೆ.

ಗೃಹ ಸಾಲಗಳಿಗೆ ಟ್ಯಾಕ್ಸ್ ಡಿಡಕ್ಷನ್

ಗೃಹಸಾಲಗಳಿಗೆ ಸರ್ಕಾರ ನೀಡುತ್ತಿರುವ ಟ್ಯಕ್ಸ್ ಡಿಡಕ್ಷನ್ಸ್ ಪ್ರಮಾಣ ಸಾಲದು. ರಿಯಲ್ ಎಸ್ಟೇಟ್ ಬೆಲೆ ಬಹಳ ಹೆಚ್ಚಾಗಿದೆ. ಆದ್ದರಿಂದ ಗೃಹಸಾಲಗಳಿಗೆ ಹೆಚ್ಚಿನ ತೆರಿಗೆ ರಿಯಾಯಿತಿ ಕಲ್ಪಿಸಬೇಕು ಎಂದು ಪ್ರಾಪ್​ಈಕ್ವಿಟಿ ಎಂಬ ಸಂಸ್ಥೆಯ ಸಿಇಒ ಮತ್ತು ಎಂಡಿ ಸಮೀರ್ ಜಸುಜಾ ಕೋರಿಕೊಂಡಿದ್ದಾರೆ.

ಇದನ್ನೂ ಓದಿ: ಚೆಕ್ ಲೀಫ್, ಪಾಸ್​ಬುಕ್ ಫೋಟೋ ಲಗತ್ತಿಸುವ ಅಗತ್ಯವಿಲ್ಲ; ಸರಳವಾಗಲಿದೆ ಪಿಎಫ್ ಹಣಕ್ಕೆ ಕ್ಲೇಮ್ ಪ್ರಕ್ರಿಯೆ

ಜಿಎಸ್​ಟಿ ಹೊರೆ ಇಳಿಸಿ…

ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಾಕಲಾಗುತ್ತಿರುವ ಜಿಎಸ್​ಟಿ ತೆರಿಗೆಯ ಪ್ರಮಾಣವನ್ನು ಕಡಿಮೆಗೊಳಿಸಬೇಕು ಎನ್ನುವ ಬೇಡಿಕೆಯೂ ಇದೆ. ಈ ನಿಟ್ಟಿನಲ್ಲಿ ಜಿಎಸ್​ಟಿ ಕೌನ್ಸಿಲ್​ನ ಮನವೊಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಸಿಗ್ನೇಚರ್ ಗ್ಲೋಬಲ್ ಸಂಸ್ಥೆಯ ಛೇರ್ಮನ್ ಪ್ರದೀಪ್ ಅಗರ್ವಾಲ್ ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು