ಗುಜರಾತ್: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ರ ಏಕತಾ ಪ್ರತಿಮೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಂದ ಸಂಗ್ರಹಿಸಿದ್ದ ₹ 5.24 ಕೋಟಿ ಹಣವನ್ನು ಏಜೆನ್ಸಿ ನೌಕರರು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ದೂರು ಕೇಳಿಬಂದಿದೆ. ಈ ಕುರಿತು ಕೆವಾಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತವಾಗಿ ಪ್ರಧಾನಿ ನರೇಂದ್ರ ಮೋದಿ ಏಕತಾ ಪ್ರತಿಮೆಯನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದರು. ಪ್ರತಿಮೆಯ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಸಂಗ್ರಹಿಸಿದ್ದ ಹಣವನ್ನು ಕಳೆದ ಒಂದೂವರೆ ವರ್ಷಗಳಿಂದ ಖಾಸಗಿ ಏಜೆನ್ಸಿ ನೌಕರರು ಮಂಡಳಿಯ ಖಾತೆಗೆ ಜಮೆ ಮಾಡಲು ವಂಚಿಸಿದ್ದಾರೆ.
ವಿಶ್ವದ ಅತಿ ಎತ್ತರದ ಪ್ರತಿಮೆಗಳ ಪೈಕಿ ಒಂದಾಗಿರುವ ಗುಜರಾತನ್ನ ಕೆವಾಡಿಯಲ್ಲಿರುವ ಪಟೇಲ್ರ ಏಕತಾ ಪ್ರತಿಮೆಯನ್ನು ನಿರ್ಮಿಸಲು ₹2,989 ಕೋಟಿ ಖರ್ಚಾಗಿತ್ತು. ಇದನ್ನು ವೀಕ್ಷಿಸಲು ವಿಶ್ವದ ಹಲವು ಕಡೆಗಳಿಂದ ಆಗಮಿಸುತ್ತಿದ್ದು ಒಂದೂವರೆ ವರ್ಷದಲ್ಲಿ ಸುಮಾರು ₹5.24 ಕೋಟಿ ರೂ. ಸಂಗ್ರಹವಾಗಿತ್ತು.
Published On - 7:00 pm, Wed, 2 December 20