ಕೊರೊನಾ ಲಸಿಕೆ ಪಡೆದ AIIMS ಭದ್ರತಾ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ಅಡ್ಡಪರಿಣಾಮ

|

Updated on: Jan 16, 2021 | 11:32 PM

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯೊಬ್ಬರಿಗೆ ಲಸಿಕೆ ಪಡೆದ ಕೆಲವೇ ಗಂಟೆಗಳಲ್ಲಿ‌ ಅಡ್ಡಪರಿಣಾಮ ಉಂಟಾಗಿದೆ.

ಕೊರೊನಾ ಲಸಿಕೆ ಪಡೆದ AIIMS ಭದ್ರತಾ ಸಿಬ್ಬಂದಿಯಲ್ಲಿ ಕಾಣಿಸಿಕೊಂಡ ಅಡ್ಡಪರಿಣಾಮ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಕರ್ತವ್ಯ ನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಯೊಬ್ಬರಿಗೆ ಲಸಿಕೆ ಪಡೆದ ಕೆಲವೇ ಗಂಟೆಗಳಲ್ಲಿ‌ ಅಡ್ಡಪರಿಣಾಮ ಉಂಟಾಗಿದೆ.

ಭದ್ರತಾ ಸಿಬ್ಬಂದಿಗೆ ಇಂದು ಮೊದಲನೇ ಹಂತದಲ್ಲಿ ಕೊರೊನಾ ಲಸಿಕೆಯನ್ನು ನೀಡಲಾಗಿತ್ತು. ಸದ್ಯ, ಸಿಬ್ಬಂದಿಯನ್ನು ಆಸ್ಪತ್ರೆಯಲ್ಲೇ ದಾಖಲಿಸಲಾಗಿದ್ದು ಆತನ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು AIIMS ವೈದ್ಯರು ಮಾಹಿತಿ ನೀಡಿದ್ದಾರೆ.

ಜೊತೆಗೆ ಈವರೆಗೆ, ಪಶ್ಚಿಮ ಬಂಗಾಳದಲ್ಲಿ 14, ತೆಲಂಗಾಣದಲ್ಲಿ 11 ಹಾಗೂ ದೆಹಲಿಯಲ್ಲಿ 52 ಅಡ್ಡಪರಿಣಾಮದ ಪ್ರಕರಣಗಳು ವರದಿಯಾಗಿದೆ.

ಇದಲ್ಲದೆ, ಮಹಾರಾಷ್ಟ್ರದಲ್ಲಿ ಜ.18ರವರೆಗೆ ಲಸಿಕೆ ಅಭಿಯಾನ ಸ್ಥಗಿತಗೊಂಡಿದೆ. ಕೊವಿನ್‌ ಌಪ್‌ನಲ್ಲಿ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಅಭಿಯಾನವನ್ನು ಸ್ಥಗಿತ ಮಾಡಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ದೊರೆತಿದೆ.

ದೇಶದಲ್ಲಿಂದು ಕೊರೊನಾ ಲಸಿಕೆ ಪಡೆದವರ ಸಂಖ್ಯೆ: 1,65,714; ಕರ್ನಾಟಕದಲ್ಲಿ: 13,408

Published On - 11:06 pm, Sat, 16 January 21