ಚೀನಾದ ಶಾಂಘೈ, ಹಾಂಗ್ಕಾಂಗ್ಗಳಲ್ಲೆಲ್ಲ ಕೊವಿಡ್ 19 ಸಿಕ್ಕಾಪಟೆ ಹೆಚ್ಚಿದೆ. ಸ್ಥಳೀಯವಾಗಿ ಕಠಿಣ ನಿರ್ಬಂಧ ಹೇರಲಾಗಿದೆ. ಈ ಮಧ್ಯೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ, ಹಾಂಗ್ಕಾಂಗ್ಗೆ ಸಂಚಾರ ಮಾಡುತ್ತಿದ್ದ ವಿಮಾನಗಳನ್ನು ರದ್ದುಗೊಳಿಸಿದೆ. ಅಂದರೆ ಮುಂದಿನ ನಿರ್ಣಯದವರೆಗೆ ಹಾಂಗ್ಕಾಂಗ್ಗೆ ಏರ್ ಇಂಡಿಯಾದ ಯಾವುದೇ ವಿಮಾನಗಳೂ ಸಂಚಾರ ಮಾಡುವುದಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಏರ್ ಇಂಡಿಯಾ, ಹಾಂಗ್ಕಾಂಗ್ನಲ್ಲಿ ಕೊವಿಡ್ 19 ಪ್ರಕರಣಗಳು ಹೆಚ್ಚಾಗಿರುವ ಕಾರಣ ಅಲ್ಲಿನ ಆಡಳಿತ ಕಠಿಣ ನಿರ್ಬಂಧಗಳನ್ನು ಹೇರಿದೆ. ಹೀಗಾಗಿ ನಮ್ಮ ವಿಮಾನವೂ ಅಲ್ಲಿಗೆ ಸಂಚಾರ ಮಾಡುವುದಿಲ್ಲ ಎಂದು ಹೇಳಿದೆ.
ಹಾಂಗ್ಕಾಂಗ್ನಲ್ಲಿ ಕೊರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಅದು ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧ ವಿಧಿಸಿದೆ. ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಏಪ್ರಿಲ್ 24ರವರೆಗೆ ನಿರ್ಬಂಧಿಸಿದ್ದಾಗಿ ಅಲ್ಲಿನ ಸರ್ಕಾರ ಹೇಳಿತ್ತು. ಅಷ್ಟೇ ಅಲ್ಲ, ಭಾರತದಿಂದ ಹಾಂಗ್ಕಾಂಗ್ಗೆ ಪ್ರವೇಶ ಮಾಡಬೇಕು ಎಂದರೆ 48 ಗಂಟೆಯ ಮೊದಲು ಕೊವಿಡ್ 19 ತಪಾಸಣೆ ಮಾಡಿಸಬೇಕು. ಅದರ ವರದಿ ನೆಗೆಟಿವ್ ಬಂದಿರಬೇಕು ಎಂದೂ ಹಾಂಗ್ಕಾಂಗ್ ಸರ್ಕಾರ ಹೇಳಿದೆ.
ಏಪ್ರಿಲ್ 16ರಂದು ದೆಹಲಿಯಿಂದ ಕೋಲ್ಕತ್ತ ಮಾರ್ಗವಾಗಿ ಹಾಂಗ್ ಕಾಂಗ್ ತಲುಪಿದ್ದ ಏರ್ ಇಂಡಿಯಾದ AI316 ವಿಮಾನದಲ್ಲಿ ಪ್ರಯಾಣಿಸಿದ್ದ ಮೂವರಲ್ಲಿ ಕೊರೊನಾ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಹಾಂಗ್ಕಾಂಗ್ ಏರ್ ಇಂಡಿಯಾ ಫ್ಲೈಟ್ಗಳಿಗೆ ನಿರ್ಬಂಧ ವಿಧಿಸಿದೆ. ಜನವರಿಯಲ್ಲೂ ಕೂಡ ಭಾರತ ಸೇರಿ ಒಟ್ಟು 8 ದೇಶಗಳ ವಿಮಾನಗಳು ಹಾಂಗ್ ಕಾಂಗ್ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗಿತ್ತು.
#FlyAI: Due to restrictions imposed by the Hong Kong authorities and limited demand on the sector, our flights to Hong Kong & back of 19th and 23rd April stand cancelled.
— Air India (@airindiain) April 17, 2022
ಇದನ್ನೂ ಓದಿ: ಜನ ತಿರಸ್ಕರಿಸಿದ ಪಕ್ಷಗಳಿಂದ ಇನ್ನೇನು ಮಾಡಲು ಸಾಧ್ಯ: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಜೆಪಿ ನಡ್ಡಾ
Published On - 9:50 am, Mon, 18 April 22