ಪುಣೆಯ ವಿಮಾನ ನಿಲ್ದಾಣದ ರನ್ವೇಯಲ್ಲಿ ಏರ್ ಇಂಡಿಯಾ ವಿಮಾನ(Air India Flight)ವು ಟಗ್ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ವಿಮಾನದಲ್ಲಿ 180 ಪ್ರಯಾಣಿಕರಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರು, ಪೈಲಟ್ ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ, ಆದರೆ ವಿಮಾನವು ಹಾನಿಗೊಳಗಾಗಿದೆ. ಘಟನೆಯ ಕುರಿತು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್‌ಐಗೆ ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಲ್ಲಿ ಟಗ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.
ಘರ್ಷಣೆ ಸಂಭವಿಸಿದ ತಕ್ಷಣ, ಪ್ರಯಾಣಿಕರಲ್ಲಿ ಭೀತಿಯನ್ನು ಸೃಷ್ಟಿಸಿತ್ತು, ಮಾನದ ಮುಂಭಾಗ ಮತ್ತು ಲ್ಯಾಂಡಿಂಗ್ ಗೇರ್ ಬಳಿಯ ಟೈರ್‌ಗೆ ಹಾನಿಯಾಗಿದೆ. ಬಿಗಿ ಭದ್ರತೆಯ ನಡುವೆ ಪ್ರಯಾಣಿಕರನ್ನು ಎಚ್ಚರಿಕೆಯಿಂದ ವಿಮಾನದಿಂದ ಕೆಳಗಿಳಿಸಲಾಗಿದೆ. ಇದಾದ ಬಳಿಕ ವಿಮಾನವನ್ನು ದುರಸ್ತಿಗಾಗಿ ಕಾರ್ಯಾಗಾರಕ್ಕೆ ಕಳುಹಿಸಲಾಗಿತ್ತು.
ನಿನ್ನೆ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಇದೆ ಎಂಬ ವದಂತಿ ಹಬ್ಬಿತ್ತು. ಬಾಂಬ್ ಮತ್ತು ಶ್ವಾನ ದಳದ ತಪಾಸಣೆಯಲ್ಲಿ ಅನುಮಾನಾಸ್ಪದ ಏನೂ ಪತ್ತೆಯಾಗದಿದ್ದರೂ, ವದಂತಿ ಹರಡಿರುವುದು ವಿಮಾನ ನಿಲ್ದಾಣದ ಅಧಿಕಾರಿಗಳು, ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಭೀತಿಯನ್ನು ಸೃಷ್ಟಿಸಿತ್ತು.
ಮತ್ತಷ್ಟು ಓದಿ: ಏರ್ ಇಂಡಿಯಾ ವಿಮಾನದ ಟಾಯ್ಲೆಟ್ನ ಟಿಶ್ಯೂ ಪೇಪರ್ನಲ್ಲಿತ್ತು ಬಾಂಬ್ ಬೆದರಿಕೆ ಸಂದೇಶ
ಏರ್ ಇಂಡಿಯಾ ವಿಮಾನ ಗುಜರಾತ್ ನ ವಡೋದರಾಕ್ಕೆ ಟೇಕ್ ಆಫ್ ಆಗಬೇಕಿತ್ತು. ಪ್ರಯಾಣಿಕರೊಬ್ಬರಿಗೆ ವಿಮಾನದ ಶೌಚಾಲಯದಲ್ಲಿ ಟಿಶ್ಯೂ ಪೇಪರ್ ಸಿಕ್ಕಿದ್ದು, ಅದರಲ್ಲಿ ಬಾಂಬ್ ಬೆದರಿಕೆ ಸಂದೇಶ ಇತ್ತು.
ಪ್ರಯಾಣಿಕರು ಆ ಟಿಶ್ಯೂ ಪೇಪರ್ ಅನ್ನು ವಿಮಾನದ ಸಿಬ್ಬಂದಿಗೆ ನೀಡಿದರು ಮತ್ತು ನಂತರ ವಿಮಾನದ ಟೇಕ್ ಆಫ್ ವಿಳಂಬವಾಯಿತು. ಪ್ರಯಾಣಿಕರನ್ನು ವಿಮಾನದಿಂದ ಇಳಿಸಿದ ನಂತರ ಸಂಪೂರ್ಣ ವಿಮಾನ ಮತ್ತು ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:26 am, Fri, 17 May 24