Swathi Maliwal Case: ನನ್ನ ಜತೆ ನಡೆದಿದ್ದು ತುಂಬಾ ಕೆಟ್ಟ ಘಟನೆ, ಕಳೆದ ಕೆಲ ದಿನಗಳು ತುಂಬಾ ಕಷ್ಟಕರವಾಗಿತ್ತು: ಸಂಸದೆ ಸ್ವಾತಿ ಮಲಿವಾಲ್

ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಲಿವಾಲ್ ತಮ್ಮದೇ ಪಕ್ಷದ ಮುಖಂಡನಿಂದ ತಮ್ಮ ಮೇಲಾದ ಹಲ್ಲೆ ಬಗ್ಗೆ ಮಾತನಾಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

Swathi Maliwal Case: ನನ್ನ ಜತೆ ನಡೆದಿದ್ದು ತುಂಬಾ ಕೆಟ್ಟ ಘಟನೆ, ಕಳೆದ ಕೆಲ ದಿನಗಳು ತುಂಬಾ ಕಷ್ಟಕರವಾಗಿತ್ತು: ಸಂಸದೆ ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್
Follow us
|

Updated on: May 17, 2024 | 12:33 PM

ನನ್ನ ಜತೆ ನಡೆದಿದ್ದು ತುಂಬಾ ಕೆಟ್ಟ ಘಟನೆ ಎಂದು ಸಂಸದೆ ಸ್ವಾತಿ ಮಲಿವಾಲ್(Swathi Maliwal) ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ನಿವಾಸದಲ್ಲಿ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ವಿಭವ್ ಕುಮಾರ್ ತಮ್ಮ ಜತೆ ನಡೆದುಕೊಂಡಿರುವ ರೀತಿ ಬಗ್ಗೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ನಡೆದ ಘಟನೆಯ ಕುರಿತು ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ. ಕಳೆದ ದಿನಗಳು ನನಗೆ ತುಂಬಾ ಕಷ್ಟಕರವಾಗಿತ್ತು. ಪ್ರಾರ್ಥಿಸಿದವರಿಗೆ ನಾನು ಧನ್ಯವಾದ ಹೇಳುತ್ತೇನೆ. ಚಾರಿತ್ರ್ಯವಧೆ ಮಾಡಲು ಯತ್ನಿಸಿದವರು ಬೇರೆ ಪಕ್ಷದವರ ಒತ್ತಾಯದ ಮೇರೆಗೆ ಮಾಡುತ್ತಿದ್ದಾರೆ, ಅವರಿಗೂ ದೇವರ ದಯೆ ಇರಲಿ ಎಂದು ಸ್ವಾತಿ ಟ್ವೀಟ್​ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಪಿಸಿಆರ್​ಗೆ ಕರೆ ಮಾಡಿ ಸ್ವಾತಿ ಈ ವಿಚಾರವನ್ನು ವಿವರವಾಗಿ ಪೊಲೀಸರಿಗೆ ತಿಳಿಸಿದ್ದಾರೆ. ದೆಹಲಿ ಪೊಲೀಸರು ಹಲ್ಲೆ, ಕಿರುಕುಳ ಮತ್ತು ಬೆದರಿಕೆ ಸೆಕ್ಷನ್​ಗಳಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ. ತಡರಾತ್ರಿ ಸ್ವಾತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಪೊಲೀಸರು ವಿಭವ್​ ಕುಮಾರ್​ಗಾಗಿ ಹುಡುಕಾಟ ನಡೆಸಿದ್ದಾರೆ.

ಮತ್ತಷ್ಟು ಓದಿ: ನಾನು ಸದಾ ಮಹಿಳೆಯರ ಪರ; ಸ್ವಾತಿ ಮಲಿವಾಲ್ ಪ್ರಕರಣಕ್ಕೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ

ಮೇ 13ರಂದು ಸ್ವಾತಿ ಮಲಿವಾಲ್ ಅರವಿಂದ್ ಕೇಜ್ರಿವಾಲ್​ರನ್ನು ಭೇಟಿಯಾಗಲು ನಿವಾಸಕ್ಕೆ ಬಂದಿದ್ದರು. ಡ್ರಾಯಿಂಗ್​ ರೂಮ್​ನಲ್ಲಿ ಕಾಯುತ್ತಿರುವಾಗ ವಿಭವ್ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ವಾತಿ ದೂರಿನಲ್ಲಿ ತಿಳಿಸಿದ್ದಾರೆ.

ಸ್ವಾತಿ ಟ್ವೀಟ್​

ಈ ನಡುವೆ ರಾಷ್ಟ್ರೀಯ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಮೂರು ದಿನಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಕೇಳಿದೆ. ವರದಿಯನ್ನು ಸಿದ್ಧಪಡಿಸುವಂತೆ ಸಂಬಂಧ ಹೆಚ್ಚುವರಿ ಪೊಲೀಸ್​ ಆಯುಕ್ತ ಪಿಎಸ್​ ಕುಶ್ವಾಹ ನೇತೃತ್ವದ ದ್ವಿಸದಸ್ಯರ ತಂಡ ದೆಹಲಿಯಲ್ಲಿರುವ ಸ್ವಾತಿ ಮಲಿವಾಲ್ ನಿವಾಸಕ್ಕೆ ತಲುಪಿದ್ದಾರೆ. ಮೇ 13ರಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ಸ್ವಾತಿ ವಿವರಿಸಿದ್ದಾರೆ.

ಪೊಲೀಸರು ಕಾರ್ಯಪ್ರವೃತ್ತ ಎಫ್​ಐಆರ್​ ದಾಖಲಿಸಿದ ಬಳಿಕ ದೆಹಲಿ ಪೊಲೀಸ್​ ತಮಡಗಳು ಕಾರ್ಯಾಚರಣೆಗೆ ಇಳಿದಿವೆ. ಉತ್ತರ ಜಿಲ್ಲೆ, ಕ್ರೈಂ ಬ್ರಾಂಚ್ ಇಡೀ ಪ್ರಕರಣದ ತನಿಖೆಯಲ್ಲಿ ನಿರತವಾಗಿದೆ. ಸುಮಾರು 10 ಪೊಲೀಸ್ ತಂಡವು ಇಡೀ ಪ್ರಕರಣದ ತನಿಖೆಯಲ್ಲಿ ತೊಡಗಿದೆ. ಈ ಪೈಕಿ ನಾಲ್ಕು ತಂಡಗಳು ವಿಭವ್ ಇರುವ ಸ್ಥಳವನ್ನು ಪತ್ತೆ ಮಾಡುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ