ನಾನು ಸದಾ ಮಹಿಳೆಯರ ಪರ; ಸ್ವಾತಿ ಮಲಿವಾಲ್ ಪ್ರಕರಣಕ್ಕೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ

ಅರವಿಂದ್ ಕೇಜ್ರಿವಾಲ್ ಅವರ ಭೇಟಿಗಾಗಿ ದೆಹಲಿಯಲ್ಲಿನ ಅವರ ನಿವಾಸಕ್ಕೆ ತೆರಳಿದ್ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಕೇಜ್ರಿವಾಲ್ ಅವರ ಪಿಎ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಈ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಸದಾ ಮಹಿಳೆಯರ ಪರ; ಸ್ವಾತಿ ಮಲಿವಾಲ್ ಪ್ರಕರಣಕ್ಕೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ
ಪ್ರಿಯಾಂಕಾ ಗಾಂಧಿ
Follow us
ಸುಷ್ಮಾ ಚಕ್ರೆ
|

Updated on: May 16, 2024 | 4:05 PM

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi), ಮಹಿಳೆಯ ಮೇಲೆ ಯಾವುದೇ ದೌರ್ಜನ್ಯ ನಡೆದರೆ ಆಕೆಯೊಂದಿಗೆ ನಾನು ನಿಲ್ಲುವುದಾಗಿ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯೆ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದರು. ಸ್ವಾತಿ ಮಲಿವಾಲ್ ಅವರು ಈ ಕುರಿತು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋಗಿದ್ದರು. ಸಿಎಂ ನಿವಾಸದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪಿಎ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಸ್ವಾತಿ ಮಲಿವಾಲ್ ಜೊತೆ ಕೇಜ್ರಿವಾಲ್ ಪಿಎ ಅನುಚಿತ ವರ್ತನೆ; ಒಪ್ಪಿಕೊಂಡ ಆಮ್ ಆದ್ಮಿ ಪಾರ್ಟಿ

“ಯಾವುದೇ ಮಹಿಳೆಗೆ ಎಲ್ಲಿಯಾದರೂ ಯಾವುದೇ ದೌರ್ಜನ್ಯ ನಡೆದರೆ, ನಾವು ಮಹಿಳೆಯೊಂದಿಗೆ ನಿಲ್ಲುತ್ತೇವೆ. ನಾನು ಯಾವಾಗಲೂ ಮಹಿಳೆಯರ ಪರವಾಗಿ ನಿಲ್ಲುತ್ತೇನೆ. ಅವರು ಯಾವ ಪಕ್ಷದವರಾಗಿದ್ದರೂ ಅದು ಗಣನೆಗೆ ಬರುವುದಿಲ್ಲ. ಈ ಪ್ರಕರಣದ ಕುರಿತು ಆಪ್ ತಮ್ಮ ನಡುವೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಎಂಬುದು ಅವರಿಗೆ ಬಿಟ್ಟದ್ದು” ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಅರವಿಂದ್ ಕೇಜ್ರಿವಾಲ್ ಅವರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷದ ಪರವಾಗಿ ಹೇಳಿಕೆ ನೀಡಿದ್ದರು. ಸ್ವಾತಿ ಮಲಿವಾಲ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಸಿಎಂ ನಿವಾಸಕ್ಕೆ ಬಂದಿದ್ದರು. ಅವರು ಕೇಜ್ರಿವಾಲ್‌ಗಾಗಿ ಡ್ರಾಯಿಂಗ್ ರೂಮ್‌ನಲ್ಲಿ ಕಾಯುತ್ತಿದ್ದಾಗ, ಬಿಭವ್ ಕುಮಾರ್ (ಸಿಎಂ ಅವರ ಆಪ್ತ ಕಾರ್ಯದರ್ಶಿ) ಅಲ್ಲಿಗೆ ಆಗಮಿಸಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸಂಜಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಇದನ್ನೂ ಓದಿ: ಸ್ವಾತಿ ಮಲಿವಾಲ್ ಮೇಲೆ ದೌರ್ಜನ್ಯ; ಬಿಭವ್ ಕುಮರ್​​ಗೆ ಮಹಿಳಾ ಆಯೋಗದಿಂದ ಸಮನ್ಸ್

ಇದಾದ ನಂತರವೂ ಬುಧವಾರ, ಬಿಭವ್ ಕುಮಾರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ರಾಷ್ಟ್ರೀಯ ಮಹಿಳಾ ಆಯೋಗವು (NCW) ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರಿಗೆ ಮೇ 17ರಂದು ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್