ಮುಂಬೈ: ಬಹು ನಿರೀಕ್ಷಿತ ಚಿತ್ರ ‘ಮೈದಾನ್’ ಅನ್ನು 2021ರ ಅಕ್ಟೋಬರ್ 15ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ನಟ ಅಜಯ್ ದೇವ್ಗನ್ ಶನಿವಾರ ತಿಳಿಸಿದ್ದಾರೆ.
ಈ ಮೊದಲೇ 2021ರ ಆಗಸ್ಟ್ನಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ಧಾರವಾಗಿತ್ತು. ಆದರೆ ಕೊರೊನಾ ಲಾಕ್ಡೌನ್ನಿಂದ ಚಿತ್ರೀಕರಣ ಮಾಡಲು ಸಾಧ್ಯವಿರಲಿಲ್ಲ. ಆದರೆ ಇದೀಗ ಟ್ವಿಟರ್ನಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಟ ದೇವಗನ್ ಚಿತ್ರ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ.
ಹಲವು ಭಾಷೆಗಳಲ್ಲಿ ಬಿಡುಗಡೆ:
ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಮೈದಾನ್ ವಿಶ್ವದಾದ್ಯಂತ 2021ರ ದಸರಾದ ವೇಳೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಜನವರಿಯಿಂದ ಶೂಟಿಂಗ್ ಪ್ರಕ್ರಿಯೆಗಳು ಪ್ರಾರಂಭವಾಗುತ್ತದೆ ಎಂದು ಟ್ವಿಟರ್ನಲ್ಲಿ ತಿಳಿಸಿದ್ದಾರೆ.
1950 ರಿಂದ ಭಾರತೀಯ ಫುಟ್ಬಾಲ್ ತಂಡದ ಕೋಚ್ ಮತ್ತು ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಸೈಯದ್ ಅಬ್ದುಲ್ ರಹೀಮ್ ಪಾತ್ರವನ್ನು ವಿವರಿಸುವ ಈ ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಲಿದ್ದಾರೆ. ಸೈವಿನ್ ಕ್ವಾಡ್ರಾಸ್ ಚಿತ್ರಕಥೆಯನ್ನು ಬರೆದಿದ್ದರೆ, ರಿತೇಶ್ ಷಾ ಸಂಭಾಷಣೆಗಳನ್ನು ಬರೆದಿದ್ದಾರೆ. ಪ್ರಿಯಮಣಿ, ಗಜರಾಜ್ ರಾವ್ ಮತ್ತು ಬಂಗಾಳಿ ನಟ ರುದ್ರಾನಿಲ್ ಘೋಷ್ ನಟಿಸಿರುವ ಈ ಚಿತ್ರವನ್ನು ಬೋನಿ ಕಪೂರ್, ಆಕಾಶ್ ಚಾವ್ಲಾ ಮತ್ತು ಅರುಣವ ಜಾಯ್ ಸೇನ್ಗುಪ್ತಾ ನಿರ್ಮಾಪಕರಾಗಿ ಸೇವೆ ಸಲ್ಲಿಸಲಿದ್ದಾರೆ.
‘Maidaan’ now releases worldwide in theatres on Dussehra 2021. Shoot commences January 2021.#Maidaan2021 #Priyamani @raogajraj @BoneyKapoor @iAmitRSharma @ItsAmitTrivedi @freshlimefilms @SaiwynQ @ActorRudranil @writish @saregamaglobal @ZeeStudios_ @ZeeStudiosInt pic.twitter.com/9KwxWP1vle
— Ajay Devgn (@ajaydevgn) December 12, 2020
‘ಸಲಗ’ನಿಗಾಗಿ ಸಿದ್ಧವಾಯ್ತು ಶಾಸನ: ದುನಿಯಾ ವಿಜಿಗೆ ಅಭಿಮಾನಿಯ ಸ್ಪೆಷಲ್ ಸರ್ಪ್ರೈಸ್!
Published On - 5:39 pm, Sat, 12 December 20