ಉತ್ತರಾಖಂಡದ ಹಳ್ಳಿಗಳಲ್ಲಿ ನಿಗೂಢ ಸೋಂಕು ಪತ್ತೆ? 30 ಗಂಟೆಗಳಲ್ಲಿ ಒಂಬತ್ತು ಜನ ಸಾವು

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ನಿಗೂಢ ಸೋಂಕಿನಿಂದ ಒಂಬತ್ತು ಜನರ ಸಾವಿನಿಂದ ಆತಂಕ ಸೃಷ್ಟಿಯಾಗಿದೆ. ಧೌಲಾದೇವಿ ಬ್ಲಾಕ್‌ನ ಗ್ರಾಮಗಳಲ್ಲಿ ಕಳೆದ ಎರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದವರು 24-30 ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ನೀರಿನ ಟ್ಯಾಂಕ್‌ನಲ್ಲಿ ಕೊಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದು ಟೈಫಾಯಿಡ್, ಅತಿಸಾರಕ್ಕೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಉತ್ತರಾಖಂಡದ ಹಳ್ಳಿಗಳಲ್ಲಿ ನಿಗೂಢ ಸೋಂಕು ಪತ್ತೆ? 30 ಗಂಟೆಗಳಲ್ಲಿ ಒಂಬತ್ತು ಜನ ಸಾವು
ಸಾಂದರ್ಭಿಕ ಚಿತ್ರ

Updated on: Oct 15, 2025 | 1:55 PM

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಸಾಲು ಸಾಲು ಸಾವುಗಳು (Almora mysterious deaths) ಸಂಭವಿಸಿದೆ. ಸಾವಿಗೆ ನಿಗೂಢ ಸೋಂಕು ಕಾರಣ ಎಂದು ಹೇಳಲಾಗಿದೆ. ಇದುವರೆಗೆ ಒಂಬತ್ತು ಜನರು ಸಾವನ್ನಪ್ಪಿದ್ದು, ಇದೀಗ ಅಲ್ಲಿನ ಜನ ಆತಂಕಕ್ಕೆ ಒಳಲಾಗಿದ್ದಾರೆ. ಆರೋಗ್ಯ ಅಧಿಕಾರಿಗಳಿಗೂ ಕೂಡ ಈ ಸಾವಿಗೆ ಕಾರಣ ಏನು, ಇದು ಯಾವ ರೀತಿ ಸೋಂಕು ಎಂದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಸೋಂಕು ಯಾವುದು, ಸಾವಿಗೆ ಕಾರಣ ಏನು ಎಂಬ ಬಗ್ಗೆ ಆರೋಗ್ಯ ಅಧಿಕಾರಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಜತೆಗೆ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆಯನ್ನು ಕೂಡ ನೀಡಿದ್ದಾರೆ.

ಕಳೆದ ಎರಡು ವಾರಗಳಿಂದ, ಅಲ್ಮೋರಾ ಜಿಲ್ಲೆಯ ಧೌಲಾದೇವಿ ಬ್ಲಾಕ್‌ನಲ್ಲಿರುವ ಧೂರ್ತಕ್, ವಿವಾಡಿ ಮತ್ತು ದೇವ್ಲಿಬಗಡ್ ಗ್ರಾಮಗಳ ನಿವಾಸಿಗಳು ಸೋಂಕಿನಿಂದ ಬಳಲುತ್ತಿದ್ದಾರೆ. ನಿಗೂಢ ಸೋಂಕು ಇದ್ದಕ್ಕಿದ್ದಂತೆ ಈ ಪ್ರದೇಶದಲ್ಲಿ ಹರಡಿದೆ. ಈ ನಿಗೂಢ ಸೋಂಕಿನಿಂದ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಇನ್ನು ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಇದ್ದಕ್ಕಿದ್ದಂತೆ ಜ್ವರ ಬಂದ ಇಲ್ಲಿನ ಜನ ಸಾವನ್ನಪ್ಪುತ್ತಿದ್ದಾರೆ. ಮೊದ ಮೊದಲು ಇದು ಹವಾಮಾನ ಬದಲಾವಣೆಯಿಂದ ಹೀಗೆಲ್ಲ ಆಗುತ್ತಿದೆ ಎಂದು ಗ್ರಾಮಸ್ಥರು ಭಾವಿಸಿದರು.

16 ತಂಡಗಳಿಂದ ತನಿಖೆ:

ಒಬ್ಬ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾಗಿ 24 ರಿಂದ 30 ಗಂಟೆಗಳ ಒಳಗೆ ಸಾವನ್ನಪ್ಪುತ್ತಿದ್ದಾನೆ. ಇದೀಗ ಈ ಘಟನೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈಗಾಗಲೇ ಜನರನ್ನು ಪರೀಕ್ಷಿಸಲು ಹದಿನಾರು ವೈದ್ಯರ ತಂಡಗಳು ಹಳ್ಳಿಗಳಿಗೆ ಭೇಟಿ ನೀಡಿದೆ. ವೈದ್ಯರು ನೀಡಿದ ವರದಿ ಪ್ರಕಾರ, ಜನರ ಸ್ಥಿತಿಯ ಆಧಾರದ ಮೇಲೆ ಅವರಿಗೆ ಚಿಕಿತ್ಸೆ ನೀಡಬಹುದು ಮತ್ತು ಅನಾರೋಗ್ಯದ ನಿಜವಾದ ಕಾರಣವನ್ನು ನಿರ್ಧರಿಸಬಹುದು. ಇನ್ನು ಒಂಬತ್ತು ಸಾವುಗಳು 50 ರಿಂದ 70 ವರ್ಷ ವಯಸ್ಸಿನವರಲ್ಲಿ ಮಾತ್ರ ಸಂಭವಿಸಿದೆ.

ಇದನ್ನೂ ಓದಿ: ಜೈಸಲ್ಮೇರ್‌ನಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ; 20 ಜನರು ಸಜೀವದಹನ

ನೀರಿನ ಟ್ಯಾಂಕ್‌ನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಪತ್ತೆ

ಗಂಭೀರ ಇರುವ ಹದಿಮೂರು ಜನರನ್ನು ಅಲ್ಮೋರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ನಾಲ್ವರಿಗೆ ಟೈಫಾಯಿಡ್ ಇರುವುದು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಉರ್ಧೇಶ್ವರ ನೀರಿನ ಟ್ಯಾಂಕ್‌ನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಕಂಡುಬಂದಿದೆ. ಈ ಬ್ಯಾಕ್ಟೀರಿಯಾ ಕಾಲರಾ, ಟೈಫಾಯಿಡ್, ಅತಿಸಾರ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಜನರಲ್ಲಿ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವೈದ್ಯರು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ