
ಅಲ್ವಾರ್, ಜನವರಿ 23: ಈ ಪ್ರೀತಿ(Love) ಎಂಬುದೇ ವಿಚಿತ್ರ, ಎಲ್ಲಿ ಯಾವಾಗ, ಯಾರ ಮೇಲೆ ಹುಟ್ಟುತ್ತೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಗುಣ ನೋಡಿ ಹುಟ್ಟಿದ್ರೆ, ಕೆಲವೊಮ್ಮೆ ಬಣ್ಣ ನೋಡಿ ಹುಟ್ಟುತ್ತೆ. ಕೆಲವೊಮ್ಮೆ ಒಂದೇ ಮನಸ್ಥಿತಿಯವರು ಪ್ರೀತಿಯಲ್ಲಿ ಬಿದ್ದರೆ ಇನ್ನೂ ಕೆಲವೊಮ್ಮೆ ಬೇರೆ ಬೇರೆ ರೀತಿ ಗುಣದವರು ಕೂಡ ಒಂದಾಗುತ್ತಾರೆ. ಆದರೆ ಈ ಪ್ರೇಮ ಕಥೆ ತುಂಬಾ ವಿಚಿತ್ರ.
ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾಗಿದ್ದ ಗೆಳೆಯನನ್ನು ಕೊಂದು ಜೈಲಿಗೆ ಸೇರಿದ್ದ ಯುವತಿ ಹಾಗು ಐದು ಕೊಲೆ ಮಾಡಿ ಅದೇ ಜೈಲಿಗೆ ಸೇರಿದ್ದ ವ್ಯಕ್ತಿ ನಡುವೆ ಪ್ರೇಮಾಂಕುರವಾಗಿದೆ. ಈ ಘಟನೆ ಅಲ್ವಾರ್ನಲ್ಲಿ ನಡೆದಿದೆ.
ಅಲ್ವಾರ್‌ನ ಬರೋಡಮೇವ್‌ನಲ್ಲಿ ಇಂದು ಈ ಇಬ್ಬರ ವಿವಾಹ ಜರುಗಿದೆ. ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಮದುವೆಗಾಗಿ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್‌ಗಳನ್ನು ಪಡೆದಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ರೂಪದರ್ಶಿ ಪ್ರಿಯಾ ಸೇಠ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರು ಸಂಗನೇರ್ ಓಪನ್ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿ ಪ್ರಸಾದ್ ಅವರನ್ನು ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು.
ಮತ್ತಷ್ಟು ಓದಿ: ರಾಮನಗರ: ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಪೊಲೀಸ್ ಠಾಣೆ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ
ಆಕೆಗೆ ಶಿಕ್ಷೆ ವಿಧಿಸಲಾದ ಕೊಲೆ ಪ್ರಕರಣವು 2018 ರ ಹಿಂದಿನದು. ಮೇ 2, 2018 ರಂದು, ಪ್ರಿಯಾ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ದುಷ್ಯಂತ್‌ನನ್ನು ಕೊಂದಿದ್ದಳು. ಸೇಠ್ ಟಿಂಡರ್ ಮೂಲಕ ದುಷ್ಯಂತ್ ಜೊತೆ ಸ್ನೇಹ ಬೆಳೆಸಿಕೊಂಡು ಬಜಾಜ್ ನಗರದಲ್ಲಿರುವ ಫ್ಲಾಟ್‌ಗೆ ಕರೆದಳು. ನಂತರ ಅವಳು ಅವನ ತಂದೆ ಬಳಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು.
ಅವರು 3 ಲಕ್ಷ ರೂಪಾಯಿಗಳನ್ನು ವ್ಯವಸ್ಥೆ ಮಾಡಿ ವರ್ಗಾಯಿಸುವಲ್ಲಿ ಯಶಸ್ವಿಯಾದರು.ಬಿಡುಗಡೆ ಮಾಡಿದರೆ, ಪೊಲೀಸರನ್ನು ತಮ್ಮ ಬಳಿಗೆ ಕರೆದೊಯ್ಯಬಹುದು ಎಂದು ಭಾವಿಸಿ ಹತ್ಯೆ ಮಾಡಿದ್ದರು.
ದುಷ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಪ್ರಿಯಾ ಸೇಠ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈ ಪ್ರಕರಣ ಹನಿಟ್ರ್ಯಾಪ್, ದರೋಡೆ ಮತ್ತು ಕೊಲೆಗೆ ಸಂಬಂಧಿಸಿದೆ. ತನ್ನ ಮಾಜಿ ಪ್ರಿಯಕರ ದಿಕ್ಷಾಂತ್ ಕಮ್ರಾನ ಸಾಲವನ್ನು ತೀರಿಸಲು ಪ್ರಿಯಾ ಜೋತ್ವಾರಾದ ನಿವಾಸಿ ದುಷ್ಯಂತ್ ಶರ್ಮಾನನ್ನು ಪ್ರೇಮ ಬಲೆಗೆ ಬೀಳಿಸಿದಳು.
ತನ್ನ ಫ್ಲಾಟ್‌ನಲ್ಲಿ ತನ್ನನ್ನು ಭೇಟಿಯಾಗಲು ದುಷ್ಯಂತ್‌ಗೆ ಕರೆ ಮಾಡಿದಳು, ಅಲ್ಲಿ ಅವಳ ಗೆಳೆಯ ದಿಕ್ಷಾಂತ್ ಮತ್ತು ಇನ್ನೊಬ್ಬ ಸ್ನೇಹಿತ ಈಗಾಗಲೇ ಇದ್ದರು. ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಅಪಹರಿಸಿ 10 ಲಕ್ಷ ರೂ. ದೋಚಲು ಯೋಜಿಸಿದ್ದರು, ಆದರೆ ಯೋಜನೆ ವಿಫಲವಾಯಿತು. ಈ ಸಮಯದಲ್ಲಿ, ಅವರು ದುಷ್ಯಂತ್‌ಗೆ 3 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಮಾಡಿದರು. ಸಿಕ್ಕಿಬೀಳುವ ಭಯದಿಂದ, ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು.
ದುಷ್ಯಂತ್ ಹತ್ಯೆಗೆ ಸಂಬಂಧಿಸಿದಂತೆ ಪ್ರಿಯಾಳನ್ನು ಪೊಲೀಸರು ಬಂಧಿಸಿದ್ದರು. ಮೇ 3, 2018 ರಿಂದ ಪ್ರಿಯಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ, ಪ್ರಿಯಾ ತನ್ನ ಮಾಜಿ ಗೆಳೆಯ ದೀಕ್ಷಾಂತ್ ನನ್ನು ಅಲ್ಲ, ಬದಲಾಗಿ ತನ್ನ ಹೊಸ ಗೆಳೆಯ ಹನುಮಾನ್ ಪ್ರಸಾದ್ ನನ್ನು ಮದುವೆಯಾಗಲಿದ್ದಾರೆ.
ಹನುಮಾನ್ ಪ್ರಸಾದ್ ಯಾರು?
ಹನುಮಾನ್ ಪ್ರಸಾದ್ ಕೂಡ ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಐದು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪ ಅವರ ಮೇಲಿದೆ ಎಂದು ವರದಿಯಾಗಿದೆ. ಮುಕ್ತ ಜೈಲಿನಲ್ಲಿದ್ದಾಗ, ಅವರು ಮತ್ತು ಪ್ರಿಯಾ ಹತ್ತಿರವಾದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಪ್ರಿಯಾ ಸೇಠ್ ಜೈಪುರದ ಅತ್ಯಂತ ಪ್ರಮುಖ ಮಹಿಳಾ ಗ್ಯಾಂಗ್ಸ್ಟರ್ ಆಗಬೇಕೆಂಬ ಕನಸು ಕಂಡಿದ್ದಳು.ಅಧ್ಯಯನ ಮಾಡಲು ಜೈಪುರಕ್ಕೆ ಬಂದಳು, ಆದರೆ ಶೀಘ್ರದಲ್ಲೇ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದಳು.
ಮೊದಲು ತನ್ನ ಸಂಬಂಧಿಕರ ಮನೆಯನ್ನು ತೊರೆದು ನಂತರ ಪೇಯಿಂಗ್ ಗೆಸ್ಟ್ ಆಗಿ ವಾಸಿಸಲು ಪ್ರಾರಂಭಿಸಿದ್ದಳು. ವೇಶ್ಯಾವಾಟಿಕೆ, ವಂಚನೆ ಮತ್ತು ಎಟಿಎಂ ದರೋಡೆಗಳಲ್ಲಿ ತೊಡಗಿದಳು. ಹನಿಟ್ರ್ಯಾಪ್ ಮಾರ್ಗವನ್ನು ಆರಿಸಿಕೊಂಡಳು, ಶ್ರೀಮಂತ ಯುವಕರನ್ನು ತನ್ನ ಬಲೆಗೆ ಬೀಳಿಸಿ ದರೋಡೆ ಮಾಡುತ್ತಿದ್ದಳು. ಪ್ರಸಾದ್ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ, ಆ ಗೆಳತಿ ಆತನಿಗಿಂತ 10 ವರ್ಷ ದೊಡ್ಡವಳಾಗಿದ್ದಳು. ಅಕ್ಟೋಬರ್ 2, 2017 ರ ರಾತ್ರಿ, ಅವಳು ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ಅವನನ್ನು ತನ್ನ ಮನೆಗೆ ಕರೆದಿದ್ದಳು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ