ಪ್ರಧಾನಿಗೆ ಅಗೌರವ ತೋರಿದ್ದಕ್ಕೆ 2024ರಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಬೆಲೆ ತೆರಲಿವೆ: ಅಮಿತ್ ಶಾ

|

Updated on: May 25, 2023 | 8:56 PM

ಈ ನಕಾರಾತ್ಮಕ ದೃಷ್ಟಿಕೋನವು ದೇಶಕ್ಕೆ ಎಂದಿಗೂ ಪ್ರಯೋಜನವಾಗುವುದಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿಮ್ಮನ್ನು (ಕಾಂಗ್ರೆಸ್) ಗೌರವಿಸುತ್ತಿದ್ದೆವು. ಆದರೆ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿಯಾಗಿದ್ದರೂ, ನೀವು ಅವರನ್ನು (ಮೋದಿ) ಬೆಂಬಲಿಸುತ್ತಿಲ್ಲ, ಇದು ಜನಾದೇಶದ ಅಗೌರವವಾಗಿದೆ.

ಪ್ರಧಾನಿಗೆ ಅಗೌರವ ತೋರಿದ್ದಕ್ಕೆ 2024ರಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಬೆಲೆ ತೆರಲಿವೆ: ಅಮಿತ್ ಶಾ
ಅಮಿತ್ ಶಾ
Follow us on

ಮೇ 28 ರಂದು ನಡೆಯಲಿರುವ ನೂತನ ಸಂಸತ್ ಭವನದ (New Parliament building) ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ಉದ್ದೇಶಿಸಿರುವ ಕಾಂಗ್ರೆಸ್ (Congress) ಮತ್ತು ಇತರ ವಿರೋಧ ಪಕ್ಷಗಳು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮತ್ತು ಜನಾದೇಶಕ್ಕೆ ಅಗೌರವ ತೋರಿದ್ದಕ್ಕೆ ಬೆಲೆ ತೆರಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಗುರುವಾರ ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ, ಜನತಾ ದಳ (ಯುನೈಟೆಡ್), ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಸೇರಿದಂತೆ ಕಾಂಗ್ರೆಸ್ ಮತ್ತು ಇತರ 18 ಪಕ್ಷಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದು, ನೂತನ ಕಟ್ಟಡವನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ಉದ್ಘಾಟಿಸಬೇಕೇ ಹೊರತು ಮೋದಿ ಉದ್ಘಾಟನೆ ಮಾಡಬಾರದು ಎಂದಿವೆ.

ಪ್ರಜಾಪ್ರಭುತ್ವ ಮತ್ತು ಭಾರತದ ಜನರು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಲು ಮತ ಹಾಕಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮತ್ತು ಅದರ ರಾಜಮನೆತನ (ಗಾಂಧಿ) ಒಂಬತ್ತು ವರ್ಷಗಳ ನಂತರವೂ ಪ್ರಧಾನಿಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರು ಸಂಸತ್ತಿನಲ್ಲಿ ಮಾತನಾಡಲು ಪ್ರಧಾನಿಗೆ ಅವಕಾಶ ನೀಡುವುದಿಲ್ಲ. ಅವರು ಮಾತನಾಡುವಾಗ ಅಥವಾ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಕಲಾಪಗಳನ್ನು ಬಹಿಷ್ಕರಿಸುತ್ತಾರೆ ಎಂದು ಅಸ್ಸಾಂನ ಗುವಾಹಟಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಶಾ ಹೇಳಿದ್ದಾರೆ.
ದೇಶದ ಜನಸಾಮಾನ್ಯರ ಆಶೀರ್ವಾದ ಮೋದಿಯವರ ಮೇಲಿರುವುದರಿಂದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಬಹಿಷ್ಕಾರ ಗಣನೆಯಲ್ಲಿರುವುದಿಲ್ಲ.  ನೀವು (ಕಾಂಗ್ರೆಸ್) ಮಾಡುತ್ತಿರುವುದನ್ನು ಭಾರತದ 1.3 ಶತಕೋಟಿಗೂ ಹೆಚ್ಚು ಜನರು ವೀಕ್ಷಿಸುತ್ತಿದ್ದಾರೆ. ಮತ್ತು ಮುಂದಿನ ಲೋಕಸಭೆ ಚುನಾವಣೆಯಲ್ಲಿ, ನೀವು ಜನರ ಜನಾದೇಶವನ್ನು ಪಡೆಯಲು ಹೋದಾಗ, ನೀವು ಕಡಿಮೆ ಸಂಖ್ಯೆಯ ಸ್ಥಾನಗಳನ್ನು (2019 ಕ್ಕಿಂತ) ಪಡೆಯುತ್ತೀರಿ. ಮೋದಿಜಿ 300 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಈ ನಕಾರಾತ್ಮಕ ದೃಷ್ಟಿಕೋನವು ದೇಶಕ್ಕೆ ಎಂದಿಗೂ ಪ್ರಯೋಜನವಾಗುವುದಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿಮ್ಮನ್ನು (ಕಾಂಗ್ರೆಸ್) ಗೌರವಿಸುತ್ತಿದ್ದೆವು. ಆದರೆ ಸ್ಪಷ್ಟ ಬಹುಮತದೊಂದಿಗೆ ಪ್ರಧಾನಿಯಾಗಿದ್ದರೂ, ನೀವು ಅವರನ್ನು (ಮೋದಿ) ಬೆಂಬಲಿಸುತ್ತಿಲ್ಲ, ಇದು ಜನಾದೇಶದ ಅಗೌರವವಾಗಿದೆ.

ಭಾನುವಾರದ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿರುವ ಇತರ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾ 2024 ರ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಂತೆಯೇ ಆಗಲಿದೆ. ಜಾರ್ಖಂಡ್ ವಿಧಾನಸಭೆಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮಾಡಿದರು. ಈ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ಆಹ್ವಾನಿಸಲಾಗಿಲ್ಲ.

ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುತ್ತೇನೆ, ಜನರು ಶಾಂತಿ ಕಾಪಾಡಬೇಕು: ಅಮಿತ್ ಶಾ

ನಾನು ಕಾಂಗ್ರೆಸ್‌ಗೆ ಕೇಳಲು ಬಯಸುತ್ತೇನೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಛತ್ತೀಸ್‌ಗಢದ ಮುಖ್ಯಮಂತ್ರಿಗಳು ಅಲ್ಲಿ ಹೊಸ ವಿಧಾನಸಭೆ ಕಟ್ಟಡದ ಶಂಕುಸ್ಥಾಪನೆ ಮಾಡಲಿಲ್ಲವೇ? ಆದಿವಾಸಿ ಮಹಿಳೆಯಾಗಿದ್ದ ರಾಜ್ಯದ ರಾಜ್ಯಪಾಲರು ಆಗ ಎಲ್ಲಿದ್ದರು? ನೀವು ಅವರನ್ನೇಕೆ ಆಹ್ವಾನಿಸಲಿಲ್ಲ? ಎಂದು ಶಾ ಕೇಳಿದ್ದಾರೆ.

ಅಸ್ಸಾಂ, ಮಣಿಪುರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇದೇ ರೀತಿಯ ನಿದರ್ಶನಗಳನ್ನು ಉಲ್ಲೇಖಿಸಿದ ಶಾ,ಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರು ಆಯಾ ರಾಜ್ಯಗಳ ರಾಜ್ಯಪಾಲರನ್ನು ಆಹ್ವಾನಿಸದೆಯೇ ಶಂಕುಸ್ಥಾಪನೆ ಅಥವಾ ಹೊಸ ವಿಧಾನಸಭೆ ಕಟ್ಟಡಗಳನ್ನು ಉದ್ಘಾಟಿಸಿದ್ದಾರೆ ಎಂದು ಹೇಳಿದ್ದಾರೆ.

ಅಸ್ಸಾಂಗೆ ಒಂದು ದಿನದ ಭೇಟಿ ನೀಡಿದ ಶಾ,ಗುವಾಹಟಿ ಕ್ಯಾಂಪಸ್‌ನ ನ್ಯಾಷನಲ್ ಫೋರೆನ್ಸಿಕ್ ಸೈನ್ಸಸ್ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) 9ನೇ ಕ್ಯಾಂಪಸ್‌ನ ಶಂಕುಸ್ಥಾಪನೆ ಮಾಡಿದ್ದು ಅಸ್ಸಾಂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡ 44,703 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ