Amit Shah: ಅದಾನಿ ವಿಚಾರದಲ್ಲಿ ಮುಚ್ಚುಮರೆ ಏನಿಲ್ಲ: ಕಾಂಗ್ರೆಸ್ ಆರೋಪಕ್ಕೆ ಅಮಿತ್ ಶಾ ಉತ್ತರ

|

Updated on: Feb 14, 2023 | 10:45 AM

Gautam Adani Controversy: ಉದ್ಯಮಿ ಗೌತಮ್ ಅದಾನಿಗೆ ಬಿಜೆಪಿಗೆ ಬೆಂಬಲ ನೀಡುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಅಮಿತ್ ಶಾ ತಳ್ಳಿಹಾಕಿದ್ದಾರೆ. ಅದಾನಿ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಭಯವಾಗಲೀ, ಮುಚ್ಚುಮರೆಯಾಗಲೀ ಇಲ್ಲ ಎಂದು ಅವರು ಹೇಳಿದ್ದಾರೆ.

Amit Shah: ಅದಾನಿ ವಿಚಾರದಲ್ಲಿ ಮುಚ್ಚುಮರೆ ಏನಿಲ್ಲ: ಕಾಂಗ್ರೆಸ್ ಆರೋಪಕ್ಕೆ ಅಮಿತ್ ಶಾ ಉತ್ತರ
ಕೇಂದ್ರ ಗೃಹಸಚಿವ ಅಮಿತ್ ಶಾ
Follow us on

ನವದೆಹಲಿ: ಸಂಸತ್​ನಲ್ಲಿ ಕಾಂಗ್ರೆಸ್​ನಿಂದ ಕೋಲಾಹಲಕ್ಕೆ ಕಾರಣವಾಗಿರುವ ಉದ್ಯಮಿ ಗೌತಮ್ ಅದಾನಿ (Gautam Adani) ವಿಚಾರದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪ್ರತಿಕ್ರಿಯೆ ನೀಡಿದ್ದಾರೆ. ಅದಾನಿ ವಿಚಾರದಲ್ಲಿ ಬಿಜೆಪಿಗೆ ಯಾವುದೇ ಮುಚ್ಚುಮರೆ ಇಲ್ಲ, ಆತಂಕವೂ ಇಲ್ಲ ಎಂದು ಅವರು ಉತ್ತರಿಸಿದ್ದಾರೆ. ಗೌತಮ್ ಅದಾನಿಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಅಮಿತ್ ಶಾ ಎಎನ್​ಐ ಸಂದರ್ಶನವೊಂದರಲ್ಲಿ (ANI Interview of Amit Shah) ಮಾತನಾಡುತ್ತಾ ಸ್ಪಷ್ಟನೆ ನೀಡಿದರು.

ಗೌತಮ್ ಅದಾನಿಯನ್ನು ಬಿಜೆಪಿ ಬೆಂಬಲಿಸುತ್ತಿದೆ ಎನ್ನಲು ಕಾಂಗ್ರೆಸ್ ಬಳಿ ಏನಾದರೂ ಸಾಕ್ಷ್ಯಾಧಾರ ಇದ್ದರೆ ಕೋರ್ಟ್​ಗೆ ಹೋಗಲಿ ಎಂದೂ ಅಮಿತ್ ಶಾ ಈ ವೇಳೆ ಸವಾಲು ಹಾಕಿದರು.

“ಅವರು ಕೋರ್ಟ್​ಗೆ ಯಾಕೆ ಹೋಗಲ್ಲ? ಪೆಗಾಸಸ್ ವಿವಾದ ಎದ್ದಾಗ, ಸಾಕ್ಷ್ಯಾಧಾರ ಇದ್ದರೆ ಕೋರ್ಟ್​ಗೆ ಹೋಗಿ ನೀಡಿ ಎಂದು ಹೇಳಿದ್ದೆ. ಅವರು ಆ ಕೆಲಸ ಮಾಡಲಿಲ್ಲ. ಅವರಿಗೆ ಧ್ವನಿ ಹೊರಡಿಸುವುದು ಮಾತ್ರ ಗೊತ್ತು. ನ್ಯಾಯಾಲಯ ನಮ್ಮ ಸುಪರ್ದಿಯಲ್ಲಿ ಇಲ್ಲವಲ್ಲ” ಎಂದು ಅಮಿತ್ ಶಾ ಈ ಸಂದರ್ಶನದಲ್ಲಿ ತಿಳಿಸಿದರು.

ಇದನ್ನೂ ಓದಿ: Suvendu Adhikari: ವಿಧಾನಸಭೆಯಿಂದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಅಮಾನತು ತಪ್ಪಿಸಿದ ಮಮತಾ ಬ್ಯಾನರ್ಜಿ

ವಿಶ್ವದ ಟಾಪ್ 3 ಉದ್ಯಮಿ ಎನಿಸುವ ಮಟ್ಟಕ್ಕೆ ಹೋಗಿದ್ದ ಗೌತಮ್ ಅದಾನಿ ಅವರು ಕೃತಕವಾಗಿ ಸಂಪತ್ತು ಉಬ್ಬಿಸಿದ್ದಾರೆ ಎಂದು ಹಿಂಡನ್ಬರ್ಗ್ ರಿಸರ್ಚ್ ಎಂಬ ಕಂಪನಿಯು ಕಳೆದ ತಿಂಗಳು ವರದಿ ಮಾಡಿತ್ತು. ಅದರ ಬೆನ್ನಲ್ಲೇ ಅದಾನಿ ಗ್ರೂಪ್​ನ ಅನೇಕ ಸಂಸ್ಥೆಗಳ ಷೇರುಗಳು ಪ್ರಪಾತಕ್ಕೆ ಕುಸಿದಿವೆ. ಅದಾನಿ ಷೇರು ಸಂಪತ್ತು ಲಕ್ಷಾಂತರ ಕೋಟಿ ರೂನಷ್ಟು ಕರಗಿಹೋಗಿದೆ. ಗೌತಮ್ ಅದಾನಿ ಕೆಲ ವರ್ಷಗಳಲ್ಲೇ ಲಕ್ಷಾಂತರ ಕೋಟಿಯಷ್ಟು ದಿಢೀರ್ ಆಗಿ ಸಂಪತ್ತು ಗಳಿಸಲು ಹೇಗೆ ಸಾಧ್ಯವಾಯಿತು. ಈ ಬಗ್ಗೆ ಮತ್ತು ಹಿಂಡನ್ಬರ್ಗ್ ರಿಸರ್ಚ್​ನ ವರದಿಯಲ್ಲಿರುವ ಅಂಶದ ಬಗ್ಗೆ ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ತನಿಖೆ ಆಗಬೇಕು ಎಂದು ಸಂಸತ್​ನಲ್ಲಿ ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತಾ ಬಂದಿದೆ.

ಎಎನ್​ಐ ಸುದ್ದಿ ಸಂಸ್ಥೆ ನಿನ್ನೆ ನಡೆಸಿದ ಸಂದರ್ಶನದಲ್ಲಿ ಅಮಿತ್ ಶಾ ಅವರು ಈ ವಿಚಾರದ ಬಗ್ಗೆ ಸ್ಪಂದಿಸಿ, ಕಾಂಗ್ರೆಸ್ಸಿಗರಿಗೆ ಕೋರ್ಟ್​ಗೆ ಹೋಗುವಂತೆ ಸಲಹೆ ನೀಡಿದ್ದಾರೆ.

ಪ್ರತಿಸ್ಪರ್ಧೆಯೇ ಇಲ್ಲ:

ಮುಂಬರುವ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಸತತ ಮೂರನೇ ಬಾರಿ ಅಧಿಕಾರ ಹಿಡಿಯುತ್ತದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಸ್ಪರ್ಧೆಯೇ ಇಲ್ಲ. ಪಿಎಂ ಮೋದಿಗೆ ಇಡೀ ದೇಶದ ಬೆಂಬಲ ಇದೆ ಎಂದೂ ಅಮಿತ್ ಶಾ ಹೇಳಿದರು.

ಇದನ್ನೂ ಓದಿ: Siddhivinayak Metro Station: ಮುಂಬೈನ ಸಿದ್ಧಿವಿನಾಯಕ ಮೆಟ್ರೋ ಸ್ಟೇಷನ್​ನ ಮೆಟ್ರೋ ಶೆಡ್​ನಲ್ಲಿ ಅಗ್ನಿ ಅವಘಡ

ಇನ್ನು, ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಕಲಾಪದಲ್ಲಿ ಆಡಿದ ಮಾತುಗಳನ್ನು ಕಡತದಿಂದ ತೆಗೆದುಹಾಕಿದ ಕ್ರಮದ ಬಗ್ಗೆ ಮಾತನಾಡಿದ ಅಮಿತ್ ಶಾ, ಇಂಥದ್ದು ಆಗಿರುವುದು ಇದೇ ಮೊದಲ್ಲ. ಸಂಸದೀಯ ಕಲಾಪಗಳ ಇತಿಹಾಸದಲ್ಲಿ ಅನೇಕ ನಿದರ್ಶನಗಳಿವೆ. ಸಂಸತ್​ನ ಮನೆಗಳಿ ಅಸಂಸದೀಯವಾಗಿ ಮಾತನಾಡಬಾರದು. ನಿಯಮಗಳ ಅಡಿಯಲ್ಲಿ ಸಂಸದೀಯ ಭಾಷೆಯಲ್ಲಿ ಚರ್ಚೆಗಳನ್ನು ನಡೆಸಲು ಅವಕಾಶ ಇದೆ ಎಂದು ಅಭಿಪ್ರಾಯಪಟ್ಟರು.

Published On - 10:45 am, Tue, 14 February 23