ITBP: ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಬಸ್ ಅಪಘಾತದಲ್ಲಿ ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

Amit Shah: ಆಗಸ್ಟ್ 16 ರಂದು ಕಾಶ್ಮೀರದ ಪಹಲ್ಗಾಮ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಏಳು ಯೋಧರು ಸಾವನ್ನಪ್ಪಿದ್ದರು. 32 ಮಂದಿ ಗಾಯಗೊಂಡಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಐಟಿಬಿಪಿ ಸಿಬ್ಬಂದಿ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ತಮ್ಮ ಕರ್ತವ್ಯ ಪೂರೈಸಿ ಹಿಂತಿರುಗುತ್ತಿದ್ದರು.

ITBP: ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಬಸ್ ಅಪಘಾತದಲ್ಲಿ ಗಾಯಗೊಂಡ ಯೋಧರ ಆರೋಗ್ಯ ವಿಚಾರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಬಸ್ ಅಪಘಾತದಲ್ಲಿ ಗಾಯಗೊಂಡ ಯೋಧರ ಆರೋಗ್ಯ ಸ್ಥಿತಿ ವಿಚಾರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
Updated By: ಸಾಧು ಶ್ರೀನಾಥ್​

Updated on: Aug 20, 2022 | 8:18 PM

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam, Jammu and Kashmir) ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ ITBP) ವೀರ ಸಿಬ್ಬಂದಿಯ ಆರೋಗ್ಯವನ್ನು ವಿಚಾರಿಸಲು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು (Union Home Minister Amit Shah) ಇಂದು ನವದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ಗೆ (AIIMS Trauma Center) ಭೇಟಿ ನೀಡಿದರು. ಅಮಿತ್ ಶಾ ಅವರು ಕಾನ್‌ಸ್ಟೆಬಲ್/ಜಿಡಿ ಬಲ್ವಂತ್ ಸಿಂಗ್, ಕಾನ್‌ಸ್ಟೆಬಲ್/ಜಿಡಿ ತ್ಸೆವಾಂಗ್ ದೋರ್ಜೆ ಮತ್ತು ಕಾನ್‌ಸ್ಟೆಬಲ್/ಜಿಡಿ ಬಬ್ಲು ಕುಮಾರ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿ ಶುಭ ಹಾರೈಸಿದರು.

ಯೋಧರ ಆರೋಗ್ಯ ಸ್ಥಿತಿ, ಶೀಘ್ರವಾಗಿ ಚೇತರಿಸಿಕೊಳ್ಳುವ ವಿಧಾನ ಮತ್ತು ಭವಿಷ್ಯದಲ್ಲಿ ಅನುಸರಿಸಬೇಕಾದ ವೈದ್ಯಕೀಯ ವಿಧಾನಗಳ ಬಗ್ಗೆ ವೈದ್ಯರು ಗೃಹ ಸಚಿವರಿಗೆ ವಿವರಿಸಿದರು. ಆಗಸ್ಟ್ 16 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಏಳು ಯೋಧರು ಸಾವನ್ನಪ್ಪಿದರು ಮತ್ತು 32 ಮಂದಿ ಗಾಯಗೊಂಡಿದ್ದರು.

ತೀವ್ರವಾಗಿ ಗಾಯಗೊಂಡ ಮೂವರು ITBP ಸಿಬ್ಬಂದಿಯನ್ನು ಉತ್ತಮ ಚಿಕಿತ್ಸೆಗಾಗಿ ವಿಶೇಷ ಏರ್ ಆಂಬ್ಯುಲೆನ್ಸ್ ಮೂಲಕ ಆಗಸ್ಟ್ 19 ರಂದು ಶ್ರೀನಗರದಿಂದ AIIMS JPNA ಟ್ರಾಮಾ ಸೆಂಟರ್, ನವದೆಹಲಿಗೆ ಸ್ಥಳಾಂತರಿಸಲಾಯಿತು. ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ಏಮ್ಸ್ ಟ್ರಾಮಾ ಸೆಂಟರ್‌ಗೆ ಭೇಟಿ ನೀಡಿ ವೀರ ಐಟಿಬಿಪಿ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.

ಆಗಸ್ಟ್ 16 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಏಳು ಯೋಧರು ಸಾವನ್ನಪ್ಪಿದ್ದರು. 32 ಮಂದಿ ಗಾಯಗೊಂಡಿದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಿ ಚಂದನವಾಡಿಯಿಂದ ಹಿಂತಿರುಗುತ್ತಿದ್ದರು. ಗಾಯಗೊಂಡ ಯೋಧರನ್ನು ಅದೇ ದಿನ ಚಿಕಿತ್ಸೆಗಾಗಿ ಶ್ರೀನಗರಕ್ಕೆ ಕರೆದೊಯ್ಯಲಾಯಿತು.