ತಮಿಳುನಾಡಿನ ‘ಇಡ್ಲಿ ಅಮ್ಮ’ನಿಗಾಗಿ ಕೆಲವೇ ತಿಂಗಳಲ್ಲಿ ಹೊಸ ಮನೆ, ಕ್ಯಾಂಟೀನ್​ ನಿರ್ಮಾಣ; ಭೂಮಿ ಖರೀದಿ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

|

Updated on: Apr 04, 2021 | 5:04 PM

ಹೂಡಿಕೆ ಮಾಡುವುದಕ್ಕೂ ಮೊದಲು ಆನಂದ್ ಮಹೀಂದ್ರಾ ವೃದ್ಧೆಯ ಬಳಿ ನಿಮ್ಮ ಅಗತ್ಯತೆ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ಅವರು, ಇಡ್ಲಿ ತಯಾರಿಸಲು ಒಂದು ಕ್ಯಾಂಟೀನ್ ಮತ್ತು ಮನೆ ನನ್ನ ಆದ್ಯತೆ ಎಂದಿದ್ದರು.

ತಮಿಳುನಾಡಿನ ‘ಇಡ್ಲಿ ಅಮ್ಮ’ನಿಗಾಗಿ ಕೆಲವೇ ತಿಂಗಳಲ್ಲಿ ಹೊಸ ಮನೆ, ಕ್ಯಾಂಟೀನ್​ ನಿರ್ಮಾಣ; ಭೂಮಿ ಖರೀದಿ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ
ಇಡ್ಲಿ ಅಮ್ಮ ಕೆ.ಕಮಲಾಥಾಳ್ ಮತ್ತು ಆನಂದ್ ಮಹೀಂದ್ರಾ
Follow us on

ತಮಿಳುನಾಡಿನಲ್ಲಿ ಇಡ್ಲಿ ಅಮ್ಮಾ ಎಂದೇ ಪ್ರಸಿದ್ಧರಾಗಿರುವ ಕೆ.ಕಮಲಾಥಾಳ್ ಬಗ್ಗೆ ಈಗೆರಡು ವರ್ಷಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿತ್ತು. ಈ ವೃದ್ಧೆ 1 ರೂಪಾಯಿಗೆ ಒಂದು ಇಡ್ಲಿ ಮಾರುವ ವಿಷಯ 2019ರ ಸೆಪ್ಟೆಂಬರ್​ನಲ್ಲಿ ದೊಡ್ಡ ಸುದ್ದಿಯೇ ಆಗಿತ್ತು. ಅದನ್ನು ನೋಡಿದ್ದ ಉದ್ಯಮಿ ಆನಂದ್ ಮಹೀಂದ್ರಾ, ಇಡ್ಲಿ ಅಮ್ಮನ ಉದ್ಯಮದಲ್ಲಿ ತಾವು ಹೂಡಿಕೆ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಅದರಂತೆ, ಸುಮಾರು ಒಂದು ವರ್ಷದ ಬಳಿಕ ಈ ಭರವಸೆಯನ್ನು ಆನಂದ್ ಮಹೀಂದ್ರಾ ಈಡೇರಿಸಿದ್ದಾರೆ.

80ವರ್ಷದ ವೃದ್ಧೆ ಕೆ.ಕಮಲಾಥಾಳ್ ಕಳೆದ 30ವರ್ಷಗಳಿಂದಲೂ ಇಡ್ಲಿ ತಯಾರಿಸಿ, ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಇವರು ಮೂಲತಃ ವಡಿವೇಲಂಪಲಯಂ ಗ್ರಾಮದವರು. 2019ರವರೆಗೆ ಇವರ ಬಗ್ಗೆ ತುಂಬ ಜನರಿಗೆ ಗೊತ್ತಿರಲಿಲ್ಲ. ಅವರ ಪಾಡಿಗೆ ಅವರು, ಬೆಳಗೆದ್ದು ಇಡ್ಲಿ ತಯಾರಿಸಿ ಬಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ 1 ರೂ.ಗೆ ಬಡಿಸುತ್ತಿದ್ದರು. 2019ರಲ್ಲಿ ಕೆ.ಕಮಲಾಥಾಳ್​ ಬಗ್ಗೆ ಸಿಕ್ಕಾಪಟೆ ಸುದ್ದಿಯಾಯಿತು. ಇವರ ಶ್ರದ್ಧೆಗೆ ದೇಶವೇ ಸಲಾಂ ಎಂದಿತ್ತು. ಅಂದು ಈ ವೃದ್ಧೆ ಕಟ್ಟಿಗೆ ಒಲೆಯಲ್ಲಿಯೇ ಇಡ್ಲಿ ಬೇಯಿಸುತ್ತಿರುವ ವಿಡಿಯೋವನ್ನು ಆನಂದ್​ ಮಹೀಂದ್ರಾ ಅವರೂ ಪೋಸ್ಟ್ ಮಾಡಿಕೊಂಡಿದ್ದರು. ಯಾರಾದರೂ ಅವರ ಅಡ್ರೆಸ್ ಹೇಳಿ, ನಾನು ಅವರಿಗೆ ಎಲ್​ಪಿಜಿ ಸಿಲಿಂಡರ್​ ಗ್ಯಾಸ್​ ಕೊಡುತ್ತೇನೆ. ಹಾಗೇ, ಅವರ ಉದ್ಯಮದಲ್ಲಿ ಹೂಡಿಕೆ ಮಾಡುತ್ತೇನೆ ಎಂದಿದ್ದರು.

ಇಷ್ಟಾದ ಬಳಿಕ ಕೊಯಮತ್ತೂರ್​ನ ಭಾರತ್​ ಗ್ಯಾಸ್​ ಏಜೆನ್ಸಿ ಕೆ.ಕಮಲಾಥಾಳ್​ಗಾಗಿ ಉಚಿತವಾಗಿ ಎಲ್​ಪಿಜಿ ನೀಡಿತ್ತು. ಈಗ ಆನಂದ್​ ಮಹೀಂದ್ರಾ ಅವರು ಕೂಡ ತಮ್ಮ ಭರವಸೆ ಈಡೇರಿಸಿದ್ದಾರೆ. ಇಡ್ಲಿ ಅಮ್ಮನಿಗಾಗಿ ಕೆಲವೇ ದಿನಗಳಲ್ಲಿ ಹೊಸ ಕ್ಯಾಂಟೀನ್​, ಮನೆಯನ್ನು ನಿರ್ಮಿಸಿಕೊಡಲಿದ್ದಾರೆ. ಅದಕ್ಕಾಗಿ ಈಗಾಗಲೇ ಭೂಮಿಯನ್ನು ಖರೀದಿಸಿದ್ದು, ನೋಂದಣಿಯೂ ಆಗಿದೆ. ತ್ವರಿತವಾಗಿ ನೋಂದಣಿ ಮಾಡಿಕೊಟ್ಟ ತೋಂಡಮುತೂರಿನ ರಿಜಿಸ್ಟ್ರಾರ್ ಕಚೇರಿಗೆ ಆನಂದ್ ಮಹೀಂದ್ರಾ ಧನ್ಯವಾದವನ್ನೂ ಹೇಳಿ ಟ್ವೀಟ್ ಮಾಡಿದ್ದಾರೆ.

ಹೂಡಿಕೆ ಮಾಡುವುದಕ್ಕೂ ಮೊದಲು ಆನಂದ್ ಮಹೀಂದ್ರಾ ವೃದ್ಧೆಯ ಬಳಿ ನಿಮ್ಮ ಅಗತ್ಯತೆ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ್ದ ಅವರು, ಇಡ್ಲಿ ತಯಾರಿಸಲು ಒಂದು ಕ್ಯಾಂಟೀನ್ ಮತ್ತು ಮನೆ ನನ್ನ ಆದ್ಯತೆ ಎಂದಿದ್ದರು. ಅದರಂತೆ ಕಾರ್ಯಪ್ರವೃತ್ತವಾದ ಮಹೀಂದ್ರಾ ಗ್ರೂಪ್​​ನ ಸಿಬ್ಬಂದಿ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: IPL 2021: ದಯವಿಟ್ಟು ನನ್ನ ಜರ್ಸಿಯಲ್ಲಿರುವ ಆಲ್ಕೋಹಾಲ್ ಬ್ರಾಂಡ್ ಲೋಗೋ ತೆಗೆಯಿರಿ! ಮೊಯೀನ್ ಅಲಿಯ ಈ ನಿರ್ಧಾರಕ್ಕೆ ಬಲವಾದ ಕಾರಣವಿದೆ

Bigg Boss Kannada: ಇನ್ನೊಬ್ಬಳು ಹುಡುಗಿ ಬೇಕಿತ್ತು ಎಂದ ಮಂಜು! ಕಿಚ್ಚನ ತಿರುಗೇಟಿಗೆ ಲ್ಯಾಗ್​ ಗಪ್​ಚುಪ್​