ಅನಂತನಾಗ್ ಎನ್​ಕೌಂಟರ್; 4ನೇ ಯೋಧನ ಮೃತದೇಹ ಪತ್ತೆ; ಉಗ್ರರ ಅಟ್ಟಹಾಸ ಇಂದೇ ಕೊನೆಗಾಣಿಸಲು ಸೇನೆ ಸಂಕಲ್ಪ

|

Updated on: Sep 19, 2023 | 12:08 PM

Anantnag Encounter: ಏಳು ದಿನಗಳ ಹಿಂದೆ ದಕ್ಷಿಣ ಕಾಶ್ಮೀರದ ಅನಂತನಾಗ್​ನಲ್ಲಿ ಆರಂಭವಾದ ಉಗ್ರರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗ ಇನ್ನೂ ಮುಗಿದಿಲ್ಲ. ಇನ್ನೂ ಇಬ್ಬರು ಅಥವಾ ಮೂವರು ಉಗ್ರರು ದಟ್ಟಾರಣ್ಯದಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ. ಇದೇ ವೇಳೆ, ಎನ್​ಕೌಂಟರ್ ಸ್ಥಳದಲ್ಲಿ ಭದ್ರತಾ ಪಡೆಗೆ ಸೇರಿಗೆ 4ನೇ ಮೃತದೇಹ ಸಿಕ್ಕಿದೆ. ಇವತ್ತು ಬೆಳಗ್ಗೆ ಉಗ್ರನ ಸುಟ್ಟದೇಹವೊಂದೂ ಸಿಕ್ಕಿದೆ.

ಅನಂತನಾಗ್ ಎನ್​ಕೌಂಟರ್; 4ನೇ ಯೋಧನ ಮೃತದೇಹ ಪತ್ತೆ; ಉಗ್ರರ ಅಟ್ಟಹಾಸ ಇಂದೇ ಕೊನೆಗಾಣಿಸಲು ಸೇನೆ ಸಂಕಲ್ಪ
ಅನಂತನಾಗ್ ಎನ್​ಕೌಂಟರ್
Follow us on

ಶ್ರೀನಗರ, ಸೆಪ್ಟೆಂಬರ್ 19: ಕಾಶ್ಮೀರ ಕಣಿವೆಯ ಅನಂತನಾಗ್​ನಲ್ಲಿ ನಡೆಯುತ್ತಿರುವ ಗುಂಡಿನ ಕಾಳಗ (Anantnag Encounter) ಆರಂಭವಾಗಿ ಇಂದು ಏಳನೇ ದಿನ. ನಿನ್ನೆಯಿಂದ ಮತ್ತೆರಡು ಮೃತದೇಹ ಸಿಕ್ಕಿವೆ. ಇದರಲ್ಲಿ ಒಂದು ದೇಹ ಉಗ್ರನದ್ದಾದರೆ, ಮತ್ತೊಂದು ಸೇನಾ ಯೋಧರೊಬ್ಬರದ್ದು ಎಂದು ಹೇಳಲಾಗಿದೆ. ಇಬ್ಬರು ಉಗ್ರರು ಇನ್ನೂ ಜೀವಂತವಾಗಿದ್ದು, ಅವರನ್ನು ಇಂದೇ ಕೊನೆಗಾಣಿಸುವ ಸಂಕಲ್ಪದಲ್ಲಿ ಭದ್ರತಾ ಪಡೆಗಳು ಇವೆ.

ನಿನ್ನೆಯಿಂದ ಪತ್ತೆಯಾದ ಎರಡು ಮೃತದೇಹಗಳಲ್ಲಿ, ಒಂದು ಸುಟ್ಟು ಕರಕಲಾಗಿರುವ ದೇಹ ಇದೆ. ಇದು ಉಗ್ರನೊಬ್ಬನದೆಂದು ಶಂಕಿಸಲಾಗಿದೆ. ಇದು ಇಂದು ಬೆಳಗ್ಗೆ ಸಿಕ್ಕಿದೆ. ನಿನ್ನೆ ಸಿಕ್ಕಿದ್ದ ಮತ್ತೊಂದು ಮೃತದೇಹ ಯೋಧ ಪ್ರದೀಪ್ ಎನ್ನುವವರದ್ದು ಎಂದು ಗುರುತಿಸಲಾಗಿದೆ. ಈ ಎರಡೂ ಮೃತದೇಹಗಳ ಸ್ಯಾಂಪಲ್​ಗಳನ್ನು ಡಿಎನ್​ಎ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ಮುಳ್ಳಿಗೆ ಮುಳ್ಳು; ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಭಾರತ; 5 ದಿನದಲ್ಲಿ ಹಿಂದಿರುಗುವಂತೆ ಸೂಚನೆ

ಅನಂತನಾಗ್​ನ ಕೋಕರ್ನಾಗ್​ನಲ್ಲಿ ನಡೆಯುತ್ತಿರುವ ಈ ಗುಂಡಿನ ಕಾಳಗ ಸುದೀರ್ಘದ್ದಾಗಿದೆ. ಪಾಕಿಸ್ತಾನ ಬೆಂಬಲಿತ ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಘೋರ ಗುಂಡಿನ ಚಕಮಕಿ ನಡೆದಿತ್ತು. ರಾಷ್ಟ್ರೀಯ ರೈಪಲ್ಸ್ ಪಡೆಯ ಕರ್ನಲ್ ಮನಪ್ರೀತ್ ಸಿಂಗ್, ಮೇಜರ್ ಆಶೀಶ್ ಧೋನಚಕ್ ಮತ್ತು ಜಮ್ಮು ಕಾಶ್ಮೀರ ಡಿಎಸ್​ಪಿ ಹುಮಾಯೂನ್ ಭಟ್ ಅವರು ಈ ಕಾಳಗದಲ್ಲಿ ಬಲಿಯಾಗಿದ್ದರು. ಇದೀಗ ಪ್ರದೀಪ್ ಎಂಬುವವರು ಈ ಪಟ್ಟಿಗೆ ಸೇರಿಕೊಂಡಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿರುವ ಅನಂತನಾಗ್ ಸುತ್ತಮುತ್ತ ದಟ್ಟಾರಣ್ಯ ಇದ್ದು, ಉಗ್ರರು ಅಲ್ಲಿಗೆ ಪಲಾಯನಗೊಂಡು ಗುಹೆಗಳಂತಹ ಸ್ಥಳಗಳಲ್ಲಿ ಅಡಗಿಕೊಂಡಿರುವ ಸಾಧ್ಯತೆ ಇದೆ. ಭದ್ರತಾ ಪಡೆಗಳು ಡ್ರೋನ್ ಮತ್ತು ಹೆಲಿಕಾಪ್ಟರ್ ಬಳಸಿ ಶೋಧ ನಡೆಸುತ್ತಿದ್ದಾರೆ. ಅರಣ್ಯ ಭಾಗದಿಂದ ಜನರ ವಾಸ ಪ್ರದೇಶಗಳತ್ತ ಉಗ್ರರು ನುಸುಳದಿರುವಂತೆ ಎಚ್ಚರವಹಿಸಲು ಭದ್ರತಾ ಪಡೆಗಳು ನಾಕಾಬಂದಿ ಹಾಕಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ