ಹಳೇ ಸಂಸತ್ ಕಟ್ಟಡ ಇನ್ಮುಂದೆ ಸಂವಿಧಾನ ಸದನ, ಪ್ರಧಾನಿ ಮೋದಿ ಹೇಳಿದ್ದೇನು?

ಇಂದು, ನಾವು ಇದನ್ನು ಬಿಟ್ಟು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಇಂದು ಗಣೇಶ ಚತುರ್ಥಿಯಾಗಿರುವುದರಿಂದ ಇದು ಮಂಗಳಕರ" ಎಂದು ಪ್ರಧಾನಿ ಹೇಳಿದ್ದು, ತಮ್ಮ ಪಕ್ಕದಲ್ಲಿ ಕುಳಿತಿದ್ದ ಉಭಯ ಸದನಗಳ ಸ್ಪೀಕರ್‌ಗಳ ಕಡೆಗೆ ತಿರುಗಿ ವಿನಂತಿಸಿದ್ದಾರೆ. ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಸಮಾಲೋಚನೆಯ ನಂತರ ನೀವು ಅದನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಹಳೇ ಸಂಸತ್ ಕಟ್ಟಡ ಇನ್ಮುಂದೆ ಸಂವಿಧಾನ ಸದನ, ಪ್ರಧಾನಿ ಮೋದಿ ಹೇಳಿದ್ದೇನು?
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Sep 19, 2023 | 1:45 PM

ದೆಹಲಿ ಸೆಪ್ಟೆಂಬರ್ 19: ಹಳೆಯ ಸಂಸತ್ ಕಟ್ಟಡವನ್ನು “ಸಂವಿಧಾನ ಸದನ (Constitution House)” ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಹಳೇ ಸಂಸತ್ ಭವನದಲ್ಲಿನ ಕೊನೆಯ ಭಾಷಣದ ನಂತರ ಮೋದಿ, ಎಲ್ಲಾ ಸಂಸದರನ್ನ ಹೊಸ ಸಂಸತ್ತಿನ ಕಟ್ಟಡಕ್ಕೆ ಕರೆದೊಯ್ದರು. ಎಲ್ಲರೂ ಹೊಸ ಸಂಸತ್​​ಗೆ ನಡೆದುಕೊಂಡೇ ಹೋಗಿದ್ದಾರೆ. ಈ ಹೊಸ ಸಂಸತ್ ಕಟ್ಟಡ ಇಂದಿನಿಂದ ಭಾರತದ ಅಧಿಕೃತ ಭಾರತೀಯ ಸಂಸತ್ ಆಗಿದೆ.

ಇಂದು, ನಾವು ಇದನ್ನು ಬಿಟ್ಟು ಹೊಸ ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ. ಇಂದು ಗಣೇಶ ಚತುರ್ಥಿಯಾಗಿರುವುದರಿಂದ ಇದು ಮಂಗಳಕರ” ಎಂದು ಪ್ರಧಾನಿ ಹೇಳಿದ್ದು, ತಮ್ಮ ಪಕ್ಕದಲ್ಲಿ ಕುಳಿತಿದ್ದ ಉಭಯ ಸದನಗಳ ಸ್ಪೀಕರ್‌ಗಳ ಕಡೆಗೆ ತಿರುಗಿ ವಿನಂತಿಸಿದ್ದಾರೆ. ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಸಮಾಲೋಚನೆಯ ನಂತರ ನೀವು ಅದನ್ನು ಪರಿಗಣಿಸುತ್ತೀರಿ ಎಂದು ನಾನು ಭಾವಿಸುತ್ತೇನೆ.

ಈಗ ನಾವು ಅಲ್ಲಿಗೆ (ಹೊಸ ಸಂಸತ್ತಿನ ಕಟ್ಟಡ) ಹೋಗುತ್ತಿದ್ದೇವೆ, ಈ ಸದನದ ಈ ಘನತೆ ಎಂದಿಗೂ ಕಡಿಮೆಯಾಗಬಾರದು. ನಾವು ಇದನ್ನು ‘ಹಳೆಯ ಸಂಸತ್’ ಎಂದು ಕರೆಯಬಾರದು. ನೀವಿಬ್ಬರೂ ಅನುಮತಿ ನೀಡಿದರೆ ಈ ಕಟ್ಟಡವು ನಮಗೆ ಸದಾ ಸ್ಪೂರ್ತಿಯಾಗುವಂತೆ ‘ಸಂವಿಧಾನ ಸದನ’ ಎಂದು ಕರೆಯಲ್ಪಡಲಿ ಎಂದು ವಿನಂತಿಸುತ್ತೇನೆ.‘ ಸಂವಿಧಾನ ಸದನ ಎಂದು ಕರೆಯುವಾಗ ಒಮ್ಮೆ ಇಲ್ಲಿ ಸಂವಿಧಾನ ರಚನಾ ಸಭೆಯಲ್ಲಿ ಕುಳಿತಿದ್ದ ಮಹಾನ್ ವ್ಯಕ್ತಿಗಳ ನೆನಪುಗಳು ಅದರೊಂದಿಗೆ ಬೆಸೆದುಕೊಳ್ಳುತ್ತವೆ. ಮುಂದಿನ ಪೀಳಿಗೆಗೆ ಈ ಉಡುಗೊರೆಯನ್ನು ನೀಡಲಿರುವ ಈ ಅವಕಾಶವನ್ನು ನೀವು ಬಿಟ್ಟುಕೊಡಬಾರದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ರಿಟಿಷ್ ವಾಸ್ತುಶಿಲ್ಪಿಗಳಾದ ಸರ್ ಎಡ್ವಿನ್ ಲುಟಿಯೆನ್ಸ್ ಮತ್ತು ಹರ್ಬರ್ಟ್ ಬೇಕರ್ ವಿನ್ಯಾಸಗೊಳಿಸಿದ ಸಾಂಪ್ರದಾಯಿಕ ಹಳೆಯ ಕಟ್ಟಡವು 1927 ರಲ್ಲಿ ಪೂರ್ಣಗೊಂಡಿದ್ದು 96 ವರ್ಷ ಹಳೆಯದು. ಇಷ್ಟು ವರ್ಷಗಳಾಗಿದ್ದರಿಂದ ಇಂದಿನ ಅವಶ್ಯಕತೆಗಳಿಗೆ ಇದು ಅಸಮರ್ಪಕವಾಗಿದೆ ಎಂದು ಕಂಡುಬಂದಿದೆ.

ಇದನ್ನೂ ಓದಿ:  ಸಂಸತ್ ಭವನಕ್ಕೆ ಸದಸ್ಯರು ವಿದಾಯ ಹೇಳುವ ಮುನ್ನ ಅದರ ಸಭಾಂಗಣದಲ್ಲಿ ಫೋಟೋಶೂಟ್!

ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಕಟ್ಟಡದ ಪ್ರತಿ ಇಟ್ಟಿಗೆಗೆ ನಮನ ಸಲ್ಲಿಸಿದ್ದು, ಸಂಸದರು “ಹೊಸ ಭರವಸೆ ಮತ್ತು ಆತ್ಮವಿಶ್ವಾಸದಿಂದ ಹೊಸ ಕಟ್ಟಡವನ್ನು ಪ್ರವೇಶಿಸುತ್ತಾರೆ ಎಂದು ಹೇಳಿದರು. ಕಟ್ಟಡವನ್ನು ಕೆಡವಲಾಗುವುದಿಲ್ಲ. ಸಂಸತ್​​ನ ಕಾರ್ಯಕ್ರಮಗಳಿಗೆ ಹೆಚ್ಚು ಕ್ರಿಯಾತ್ಮಕ ಸ್ಥಳಗಳನ್ನು ಒದಗಿಸಲು ಅದನ್ನು ಸರಿಮಾಡಲಾಗುವುದು ಎಂದು ಸರ್ಕಾರಿ ಮೂಲಗಳು ಹೇಳುತ್ತವೆ. ಹಳೆಯ ಕಟ್ಟಡದ ಒಂದು ಭಾಗವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬಹುದು ಎಂದು ಕೆಲವು ವರದಿಗಳು ಸೂಚಿಸುತ್ತವೆ.

ಐತಿಹಾಸಿಕ ಕಟ್ಟಡವ ಸಂರಕ್ಷಿಸಲಾಗುವುದು, ಏಕೆಂದರೆ ಇದು ದೇಶದ ಪುರಾತತ್ವ ಆಸ್ತಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Tue, 19 September 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್