ತಿರುಮಲ: ದೇವರ ದರ್ಶನಕ್ಕೆಂದು ತಿರುಪತಿ ಬೆಟ್ಟ ಹತ್ತುತ್ತಿದ್ದಂತೆ ದಾರಿ ಮಧ್ಯೆಯೇ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಹಾಗೂ ಜತೆಗಿದ್ದ ಇನ್ನೋರ್ವ ವಯಸ್ಸಾದ ವ್ಯಕ್ತಿಯನ್ನು ಮುಸ್ಲಿಂ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಹೆಗಲ ಮೇಲೆ ಹೊತ್ತು ಸಾಗಿದ ಮಾನವೀಯ ಘಟನೆ ನಡೆದಿದೆ.
ನಂದಲೂರ್ ಮಂಡಲ್ ನಿವಾಸಿಯಾಗಿರುವ ಮಂಗಿ ನಾಗೇಶ್ವರಮ್ಮ (58) ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುತ್ತಿದ್ದರು. ಆದರೆ ಮಾರ್ಗಮಧ್ಯದಲ್ಲಿ ಅವರಿಗೆ ರಕ್ತದ ಒತ್ತಡ ಅಧಿಕವಾಗಿ ಅಸ್ವಸ್ಥರಾದರು. ಮುಂದೆ ನಡೆಯಲು ಆಕೆಗೆ ಸಾಧ್ಯವಾಗಲೇ ಇಲ್ಲ. ಈ ಹೊತ್ತಲ್ಲಿ ಭಕ್ತರೊಂದಿಗೇ ನಡೆದು ಬರುತ್ತಿದ್ದ ಕಡಪಾ ಜಿಲ್ಲೆಯ ವಿಶೇಷ ಪೊಲೀಸ್ ದಳದ ಸಿಬ್ಬಂದಿ ಇದನ್ನು ಗಮನಿಸಿದರು.
ಅವರಲ್ಲಿ ಶೇಖ್ ಅರ್ಶದ್ ಎಂಬ ಕಾನ್ಸ್ಟೆಬಲ್ ನಾಗೇಶ್ವರಮ್ಮನವರನ್ನು ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 6 ಕಿ.ಮೀ.ದೂರ ಹೊತ್ತು ಸಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹಾಗೇ, ನಾಗೇಶ್ವರ್ ರಾವ್ ಎಂಬ ಹಿರಿಯ ವ್ಯಕ್ತಿಯ ಆರೋಗ್ಯದಲ್ಲೂ ಏರುಪೇರಾಗಿ, ಅವರನ್ನೂ ಭುಜದ ಮೇಲೆ ಹೊತ್ತು, ವಾಹನ ಸಂಚಾರ ಇರುವ ರಸ್ತೆಗೆ ಕರೆದೊಯ್ದಿದ್ದಾರೆ. ಅರ್ಶದ್ರ ಈ ಕಾರ್ಯವನ್ನು ಮೇಲಧಿಕಾರಿಗಳು, ಉಳಿದ ಭಕ್ತರು ಶ್ಲಾಘಿಸಿದ್ದಾರೆ.
ಮಗುವಿಗೆ ವಾಹನ ಡಿಕ್ಕಿ: ಮಾನವೀಯತೆಯೇ ಶ್ರೇಷ್ಠ ಧರ್ಮ ಎಂದು ನೆರವು ನೀಡಿದ ಶಾ ಬಜಾರ್ ವ್ಯಾಪಾರಿಗಳು
Published On - 6:19 pm, Thu, 24 December 20