ಆಂಧ್ರಪ್ರದೇಶದಲ್ಲಿ ರೈಲಿಗೆ ಕಾರು ಡಿಕ್ಕಿ, ಕಾರಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು

|

Updated on: Mar 30, 2023 | 1:28 PM

ಆಂಧ್ರಪ್ರದೇಶದಲ್ಲಿ ರೈಲಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ರೈಲಿಗೆ ಕಾರು ಡಿಕ್ಕಿ, ಕಾರಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರು
ಅಪಘಾತ
Follow us on

ಆಂಧ್ರಪ್ರದೇಶದಲ್ಲಿ ರೈಲಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದ ಏಲೂರಿನ ಭೀಮಡೋಲು ಜಂಕ್ಷನ್​ನಲ್ಲಿ ಬರುತ್ತಿದ್ದ ಡುರೊಂಟೊ ಎಕ್ಸ್​ಪ್ರೆಸ್​ ರೈಲಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಕಾರು ಸಂಪೂರ್ಣ ಜಖಂ ಆಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಬೆಳಗ್ಗೆ ಕಾರಿನಲ್ಲಿ ಕೆಲವು ಪ್ರಯಾಣಿಕರೊಂದಿಗೆ ಚಾಲಕ ರೈಲ್ವೆ ಗೇಟ್ ದಾಟಲು ಯತ್ನಿಸಿದ ಪರಿಣಾಮ ಅಪಘಾತ ಸಂಭವಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಮೀಪಿಸುತ್ತಿರುವ ರೈಲನ್ನು ನೋಡಿದ ಬೊಲೆರೊ ಕಾರಿನಲ್ಲಿದ್ದವರು ಇಳಿದು ಓಡಿಹೋಗಿದ್ದಾರೆ. ಕಾರು ರೈಲು ಹಳಿಯ ಮೇಲೆಯೇ ಇತ್ತು.

ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಏತನ್ಮಧ್ಯೆ, ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದ ಡುರೊಂಟೊ ಎಕ್ಸ್‌ಪ್ರೆಸ್ ರೈಲು ಕಾರಿಗೆ ಡಿಕ್ಕಿ ಹೊಡೆದ ನಂತರ ಅದರ ಎಂಜಿನ್‌ಗೆ ಹಾನಿಯಾಗಿದೆ. ರೈಲಿನ ಸಿಬ್ಬಂದಿ ಭೀಮಡೋಳು ಜಂಕ್ಷನ್‌ನಲ್ಲಿ ಗೇಟ್ ಹಾಕಿದ್ದು, ಹಳಿ ದಾಟುವ ಪ್ರಯತ್ನದಲ್ಲಿ ಟಾಟಾ ಏಸ್ ವಾಹನ ಡಿಕ್ಕಿ ಹೊಡೆಯಲು ಯತ್ನಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ