ಆಂಧ್ರ ವಿಧಾನಸಭೆಯಲ್ಲಿ ದಿಶಾ ಮಸೂದೆ ಅಂಗೀಕಾರ, 21 ದಿನದಲ್ಲೇ ಅತ್ಯಾಚಾರಿಗಳಿಗೆ ಶಿಕ್ಷೆ

|

Updated on: Dec 13, 2019 | 4:25 PM

ಹೈದರಾಬಾದ್‌: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಎನ್​ಕೌಂಟರ್​ ಬಗ್ಗೆ ಪರ, ವಿರೋಧ ವ್ಯಕ್ತವಾದರೂ ಪೊಲೀಸರ ಕ್ರಮಕ್ಕೆ ಹೆಚ್ಚಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ದಿಶಾ ಮಸೂದೆ ಅಂಗೀಕಾರವಾಗಿದೆ. ದಿಶಾ ಕಾಯ್ದೆ ಪ್ರಕಾರ ಎಫ್​ಐಆರ್ ದಾಖಲಾದ 21 ದಿನಗಳಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬಹುದಾಗಿದೆ. ದಿಶಾ […]

ಆಂಧ್ರ ವಿಧಾನಸಭೆಯಲ್ಲಿ ದಿಶಾ ಮಸೂದೆ ಅಂಗೀಕಾರ, 21 ದಿನದಲ್ಲೇ ಅತ್ಯಾಚಾರಿಗಳಿಗೆ ಶಿಕ್ಷೆ
Follow us on

ಹೈದರಾಬಾದ್‌: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಸಜೀವ ದಹನ ಪ್ರಕರಣ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಘಟನೆ ನಡೆದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರು. ಎನ್​ಕೌಂಟರ್​ ಬಗ್ಗೆ ಪರ, ವಿರೋಧ ವ್ಯಕ್ತವಾದರೂ ಪೊಲೀಸರ ಕ್ರಮಕ್ಕೆ ಹೆಚ್ಚಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈಗ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸರ್ವಾನುಮತದಿಂದ ದಿಶಾ ಮಸೂದೆ ಅಂಗೀಕಾರವಾಗಿದೆ. ದಿಶಾ ಕಾಯ್ದೆ ಪ್ರಕಾರ ಎಫ್​ಐಆರ್ ದಾಖಲಾದ 21 ದಿನಗಳಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬಹುದಾಗಿದೆ. ದಿಶಾ ಮಸೂದೆಗೆ ತೆಲುಗು ದೇಶಂ ಪಕ್ಷವೂ ಬೆಂಬಲ ನೀಡಿದೆ.