ಆಂಧ್ರಪ್ರದೇಶ: ಮಲಗಿದ್ದಾಗ ಮಂಚದಡಿ ಬಾಂಬ್ ಸ್ಟೋಟ, ಸರ್ಕಾರಿ ಅಧಿಕಾರಿ ಸಾವು

|

Updated on: Oct 01, 2024 | 1:56 PM

ಸರ್ಕಾರಿ ಅಧಿಕಾರಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ ಮಂಚದಡಿ ಬಾಂಬ್​ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ವೈಎಸ್‌ಆರ್ ಕಡಪಾ ಜಿಲ್ಲೆಯಲ್ಲಿ ಗ್ರಾಮ ಕಂದಾಯ ಸಹಾಯಕರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಆಂಧ್ರಪ್ರದೇಶ: ಮಲಗಿದ್ದಾಗ ಮಂಚದಡಿ ಬಾಂಬ್ ಸ್ಟೋಟ, ಸರ್ಕಾರಿ ಅಧಿಕಾರಿ ಸಾವು
ಮೃತ ಸರ್ಕಾರಿ ಅಧಿಕಾರಿ
Image Credit source: India Today
Follow us on

ಸರ್ಕಾರಿ ಅಧಿಕಾರಿಯೊಬ್ಬರು ಮನೆಯಲ್ಲಿ ಮಲಗಿದ್ದಾಗ ಮಂಚದಡಿ ಬಾಂಬ್​ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ವೈಎಸ್‌ಆರ್ ಕಡಪಾ ಜಿಲ್ಲೆಯಲ್ಲಿ ಗ್ರಾಮ ಕಂದಾಯ ಸಹಾಯಕರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಈ ಕೃತ್ಯದ ಹಿಂದಿನ ಉದ್ದೇಶವಿನ್ನೂ ಸ್ಪಷ್ಟವಾಗಿಲ್ಲ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಡಿ ನರಸಿಂಹುಲು ಅವರು ತಮ್ಮ ಮನೆಯಲ್ಲಿ ಮಲಗಿದ್ದಾಗ ಅವರ ಹಾಸಿಗೆಯ ಕೆಳಗೆ ಡಿಟೋನೇಟರ್ ಇರಿಸಿದ್ದ ಬಾಂಬ್ ಸ್ಫೋಟಗೊಂಡಿದೆ.

ನರಸಿಂಹುಲು ಸ್ಥಳದಲ್ಲೇ ಮೃತಪಟ್ಟರೆ, ಪತ್ನಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ದಂಪತಿಯ ಮಕ್ಕಳು ಮತ್ತೊಂದು ಕೋಣೆಯಲ್ಲಿ ಮಲಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಪರದಾಡುವಂತಾಯಿತು. ಘಟನೆಯ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: ಸೊಮಾಲಿಯಾದಲ್ಲಿ ಅವಳಿ ಸ್ಫೋಟ: 6 ಮಂದಿ ಸಾವು, 10 ಜನರಿಗೆ ಗಾಯ

ಮತ್ತೊಂದು ಘಟನೆ
ಹೂಗ್ಲಿಯಲ್ಲಿ ಬಾಂಬ್​ ಸ್ಫೋಟ, ಓರ್ವ ಸಾವು, ಇಬ್ಬರಿಗೆ ಗಾಯ

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಇಂದು ಬಾಂಬ್​ ಸ್ಫೋಟ(Bomb Blast) ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಹೂಗ್ಲಿ ಜಿಲ್ಲೆಯ ಪಾಂಡುವಾ ಎಂಬಲ್ಲಿ ಬಾಲಕರ ಗುಂಪು ಆಟವಾಡುತ್ತಿದ್ದ ಕೊಳದ ಬಳಿ ಈ ಘಟನೆ ನಡೆದಿದೆ. ಮಕ್ಕಳು ಗುಂಪು ಆಟವಾಡುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದ್ದು, ಮೂವರು ಗಾಯಗೊಂಡಿದ್ದಾರೆ. ಅವರನ್ನು ಪಾಂಡುವ ಆಸ್ಪತ್ರೆಗೆ ಕಳುಹಿಸಲಾಯಿತು, ಓರ್ವ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರಿಗೆ ಗಾಯಗಳ ತೀವ್ರತೆಯಿಂದಾಗಿ ಚುಂಚೂರ ಇಮಾಂಬರ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಹೂಗ್ಲಿ ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಫೋಟದಲ್ಲಿ ಟಿಎಂಸಿ ಕೈವಾಡವಿದೆ ಎಂದು ಸ್ಥಳೀಯ ಬಿಜೆಪಿ ಸಂಸದ ಲಾಕೆಟ್ ಚಟರ್ಜಿ ಆರೋಪಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ