ರಸ್ತೆಯಲ್ಲಿ ಸಿಕ್ಕ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ವಾಪಾಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ಉಪನ್ಯಾಸಕ

ಆಂಧ್ರಪ್ರದೇಶದ ಕಾಕಿನಾಡದ ಖಾಸಗಿ ಕಾಲೇಜಿನ ಉಪನ್ಯಾಸಕ ಸತೀಶ್ ತಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ್ದಾರೆ. ಮಹಿಳೆಯೊಬ್ಬರು ಕಳೆದುಕೊಂಡಿದ್ದ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಅವರಿಗೆ ಸಿಕ್ಕಿತ್ತು. ಅವರು ತಕ್ಷಣ ಪೊಲೀಸರನ್ನು ಸಂಪರ್ಕಿಸಿ ಎಸ್ಪಿ ಬಿಂದು ಮಾಧವ್ ಸಮ್ಮುಖದಲ್ಲಿ ಅದನ್ನು ಆ ಮಹಿಳೆಗೆ ಹಿಂದಿರುಗಿಸಿದರು. ಈ ಘಟನೆ ಈಗ ಎಲ್ಲರಿಂದಲೂ ಪ್ರಶಂಸೆ ಪಡೆಯುತ್ತಿದೆ. ಕಾಕಿನಾಡದ ಗಾಂಧಿನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಿಕ್ಕ ಚಿನ್ನದ ಬಳೆಯನ್ನು ತಾವೇ ತೆಗೆದುಕೊಂಡು ಹೋಗದೆ ಪೊಲೀಸರ ಮೂಲಕ ಆ ಮಹಿಳೆಗೆ ತಲುಪಿಸಿದ್ದಾರೆ.

ರಸ್ತೆಯಲ್ಲಿ ಸಿಕ್ಕ 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ವಾಪಾಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ಉಪನ್ಯಾಸಕ
ಚಿನ್ನದ ಬಳೆ
Image Credit source: Getty Images

Updated on: Nov 16, 2026 | 6:39 PM

ಕಾಕಿನಾಡ, ನವೆಂಬರ್ 16: ರಸ್ತೆಯಲ್ಲಿ ಬಿದ್ದಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ಪ್ರಾಮಾಣಿಕವಾಗಿ ಪೊಲೀಸರಿಗೆ ಒಪ್ಪಿಸುವ ಮೂಲಕ ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರು ಮಾನವೀಯತೆ ಮತ್ತು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಕಾಕಿನಾಡ ನಗರದ ಗಾಂಧಿನಗರದಲ್ಲಿ ಈ ಘಟನೆ ನಡೆದಿದ್ದು, ಉಪನ್ಯಾಸಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕಾಕಿನಾಡದ ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಗಾಂಧಿನಗರದ ರಸ್ತೆಯಲ್ಲಿ ಸಾಗುತ್ತಿದ್ದಾಗ, ನೆಲದ ಮೇಲೆ ತಳತಳ ಹೊಳೆಯುತ್ತಿದ್ದ ವಸ್ತುವೊಂದು ಅವರ ಕಣ್ಣಿಗೆ ಬಿದ್ದಿದೆ. ಕುತೂಹಲದಿಂದ ಹತ್ತಿರ ಹೋಗಿ ಪರಿಶೀಲಿಸಿದಾಗ, ಅದು ಸುಮಾರು 5 ಲಕ್ಷ ರೂ. ಬೆಲೆಬಾಳುವ ದುಬಾರಿ ಚಿನ್ನದ ಬಳೆ ಎಂಬುದು ತಿಳಿದುಬಂದಿದೆ.

Loading...

ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಅರಣ್ಯಾಧಿಕಾರಿ ಮನೆಯಲ್ಲಿ ಖಜಾನೆಯೇ ಪತ್ತೆ: 2.5 ಕೆ.ಜಿ ಚಿನ್ನ, 1.6 ಕೆ.ಜಿ ಬೆಳ್ಳಿ ವಶಕ್ಕೆ

ಮಹಿಳೆಯೊಬ್ಬರು ಆಕಸ್ಮಿಕವಾಗಿ ಈ ಬಳೆಯನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಅರಿತ ಉಪನ್ಯಾಸಕ ಸತೀಶ್, ಯಾವುದೇ ಆಸೆಗೆ ಒಳಗಾಗದೆ ತಕ್ಷಣವೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಪೊಲೀಸರ ತನಿಖೆಯ ಬಳಿಕ ಆ ಚಿನ್ನದ ಬಳೆ ಗಾಂಧಿನಗರದ ಮಹಿಳೆಯೊಬ್ಬರಿಗೆ ಸೇರಿದ್ದು ಎಂಬುದು ದೃಢಪಟ್ಟಿತು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಬಿಂದು ಮಾಧವ್ ಅವರ ಸಮ್ಮುಖದಲ್ಲಿ ಉಪನ್ಯಾಸಕ ಸತೀಶ್ ಅವರು ಆ ಚಿನ್ನದ ಬಳೆಯನ್ನು ಸಂಬಂಧಪಟ್ಟ ಮಹಿಳೆಗೆ ಸುರಕ್ಷಿತವಾಗಿ ಮರಳಿಸಿದರು.

ಸಾಮಾನ್ಯವಾಗಿ, ಯಾರಿಗಾದರೂ ಬೆಲೆಬಾಳುವ ವಸ್ತು ಸಿಕ್ಕಿದಾಗ ಹಲವರು ಅದನ್ನು ತಮ್ಮ ಜೇಬಿನಲ್ಲಿಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಅದನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಕೆಲವೇ ಮಂದಿ ಮಾತ್ರ ಅದು  ಯಾರಿಗೆ ಸೇರಿದ್ದು ಎಂದು ಪತ್ತೆಹಚ್ಚಿ ಅವರಿಗೆ ತಲುಪಿಸುವ ಬಗ್ಗೆ ಯೋಚನೆ ಮಾಡುತ್ತಾರೆ. ಸತೀಶ್ ತಮಗೆ ಸಿಕ್ಕ ಚಿನ್ನದ ಬಳೆಯನ್ನು ಪೊಲೀಸರಿಗೆ ನೀಡಿದರು. ನಂತರ, ಎಸ್ಪಿ ಬಿಂದು ಮಾಧವ್ ಅವರ ಸಮ್ಮುಖದಲ್ಲಿ, ಅವರು ಚಿನ್ನವನ್ನು ಅದರ ಮಾಲೀಕರಾದ ಜಯಂತಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ: ರೈಲಿನ ಎಸಿ ಕೋಚ್​ನಲ್ಲಿ ಮಹಿಳೆಯ ಚಿನ್ನದ ಸರ, ನಗದು ಕದ್ದ ಕಳ್ಳ, ಚೈನ್ ಎಳೆದರೂ ಸಹಾಯಕ್ಕೆ ಬರದ ಸಿಬ್ಬಂದಿ ವಿರುದ್ಧ ಆಕ್ರೋಶ

ಯಾವುದೇ ಸ್ವಾರ್ಥವಿಲ್ಲದೆ ಕಂಡುಕೊಂಡ ಅಮೂಲ್ಯವಾದ ಆಭರಣವನ್ನು ಹಿಂದಿರುಗಿಸಿದ ಸತೀಶ್ ಅವರ ಪ್ರಾಮಾಣಿಕತೆಯನ್ನು ಎಸ್ಪಿ ಬಿಂದು ಮಾಧವ್ ವಿಶೇಷವಾಗಿ ಅಭಿನಂದಿಸಿದ್ದಾರೆ. ಮತ್ತೊಂದೆಡೆ, ಕಳೆದುಹೋದ ಚಿನ್ನದ ಬಳೆಯನ್ನು ಮರಳಿ ಪಡೆದ ನಂತರ ಜಯಂತಿ ಸಂತೋಷ ವ್ಯಕ್ತಪಡಿಸಿದ್ದಾರೆ. ಸತೀಶ್ ಅವರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸಿದ್ದಾರೆ. ಲಕ್ಷಗಟ್ಟಲೆ ಬೆಲೆಬಾಳುವ ಆಭರಣಕ್ಕಿಂತ ಹೆಚ್ಚು ಬೆಲೆಬಾಳುವ ತನ್ನ ಪ್ರಾಮಾಣಿಕತೆಯನ್ನು ತೋರಿಸಿರುವ ಸತೀಶ್ ಈಗ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಘಟನೆಯು ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us