ಬಿಯರ್ ಬಾಟಲಿಗಳಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಸ್ಥಳೀಯರು ನಾ ಮುಂದು ತಾ ಮುಂದು ಎಂದು ಮುತ್ತಿಗೆ ಹಾಕಿ ಕೊಂಡೊಯ್ದಿದ್ದಾರೆ. ಇದರಿಂದ ಮಾಲೀಕನಿಗೆ ಭಾರಿ ಫಜೀತಿ ಉಂಟಾಗಿತ್ತು. ಆಂಧ್ರಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ, ಅನೇಕ ಬಾಟಲಿಗಳು ಒಡೆದಿದ್ದವು, ಇನ್ನೂ ಕೆಲವು ಬಾಟಲಿಗಳು ಸುರಕ್ಷಿತವಾಗಿದ್ದವು. ಈ ಸುದ್ದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೇಗವಾಗಿ ಹರಡಿತು.
ತಕ್ಷಣ ರಸ್ತೆಗೆ ಆಗಮಿಸಿದ ಸ್ಥಳೀಯರು ತಮ್ಮ ಕೈಲಾದಷ್ಟು ಬಾಟಲಿಗಳನ್ನು ತೆಗೆದುಕೊಂಡು ಹೋದರು, ಸುಮಾರು 200 ಬಿಯರ್ ಕೇಸ್ ತುಂಬಿದ್ದ ಟ್ರಕ್ ಟ್ರಕ್ ಇದಾಗಿತ್ತು.
ಮತ್ತಷ್ಟು ಓದಿ: Beer Record: ಬೇಸಿಗೆ ಎಫೆಕ್ಟ್; ತಂಪು ತಂಪು ಬಿಯರ್ ಬಿಯರ್; ತೆಲಂಗಾಣದಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗೆ?
ಇದು ಬಯಾವರಂ ಹೆದ್ದಾರಿಯಲ್ಲಿ ನಡೆದಿದ್ದು, ಟ್ರಕ್ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿತ್ತು, ಚಾಲಕ ನಿಲ್ಲಿಸಲು ಯತ್ನಿಸಿದಾಗ ಮಾರ್ಗಮಧ್ಯೆ ಟ್ರಕ್ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ತಕ್ಷಣ 200ಕ್ಕೂ ಹೆಚ್ಚು ಬಿಯರ್ ಕೇಸ್ ರಸ್ತೆಗೆ ಬಿದ್ದಿದೆ.
VIDEO | A vehicle carrying 200 cartons of beer overturned in Andhra Pradesh’s Anakapalli on Tuesday, following which people rushed to grab the beer bottles. pic.twitter.com/nIYHQCF9U8
— Press Trust of India (@PTI_News) June 6, 2023
ಸ್ಥಳೀಯರು ಇದರ ಸಂಪೂರ್ಣ ಪ್ರಯೋಜನ ಪಡೆದಿದ್ದಾರೆ. ತಕ್ಷಣ ಸ್ಥಳೀಯರು ಅಪಘಾತದ ಸ್ಥಳಕ್ಕೆ ದಾಳಿ ನಡೆಸಿ ತಮ್ಮ ಕೈಲಾದಷ್ಟು ಬಾಟಲಿಗಳನ್ನು ಎತ್ತಿಕೊಂಡು ಓಡಿ ಹೋಗಿರುವ ವಿಡಿಯೋ ಈಗ ವೈರಲ್ ಆಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ