ಪಕ್ಕದಲ್ಲೇ ಇದ್ದ ಪತಿ ಮೊಬೈಲ್​ ನೋಡ್ತಿದ್ದಾಗ, ಸಂಜೆಗತ್ತಲಲ್ಲಿ ಮದುವೆಯ ವಾರ್ಷಿಕ ದಿನ ಬೀಚ್‌ನಿಂದ ಗೃಹಿಣಿ ನಾಪತ್ತೆ!

| Updated By: ಸಾಧು ಶ್ರೀನಾಥ್​

Updated on: Jul 26, 2022 | 2:45 PM

Vizag Police: ಆರ್.ಕೆ. ಬೀಚ್ ನಲ್ಲಿ ನಿನ್ನೆ ಸೋಮವಾರ ಅಸಲಿಗೆ ನಡೆದಿದ್ದೇನು.. ಮದುವೆ ವಾರ್ಷಿಕ ದಿನ ಸಮುದ್ರ ತೀರದಲ್ಲಿ ಮಹಿಳೆಯೊಬ್ಬರು ನಾಪತ್ತೆ.. ಅದೂ ಪತಿ ಪಕ್ಕದಲ್ಲೇ ಇರುವಾಗ.. ಪಕ್ಕದಲ್ಲಿದ್ದ ಪತ್ನಿ ನಿಮಿಷದಲ್ಲಿ ನಾಪತ್ತೆಯಾಗಿದ್ದು ನಿಗೂಢವಾಗಿದೆ.

ಪಕ್ಕದಲ್ಲೇ ಇದ್ದ ಪತಿ ಮೊಬೈಲ್​ ನೋಡ್ತಿದ್ದಾಗ, ಸಂಜೆಗತ್ತಲಲ್ಲಿ ಮದುವೆಯ ವಾರ್ಷಿಕ ದಿನ ಬೀಚ್‌ನಿಂದ ಗೃಹಿಣಿ  ನಾಪತ್ತೆ!
ಪಕ್ಕದಲ್ಲೇ ಇದ್ದ ಪತಿ ಮೊಬೈಲ್​ ನೋಡ್ತಿದ್ದಾಗ, ಸಂಜೆಗತ್ತಲಲ್ಲಿ ಮದುವೆಯ ವಾರ್ಷಿಕ ದಿನ ಬೀಚ್‌ನಿಂದ ನಾಪತ್ತೆಯಾದ ಗೃಹಿಣಿ!
Follow us on

ವಿಶಾಖಪಟ್ಟಣಂ ಆರ್‌ಕೆ ಬೀಚ್‌ನಲ್ಲಿ ನಾಪತ್ತೆಯಾಗಿರುವ ಸಾಯಿ ಪ್ರಿಯಾ ಎಂಬ ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಸಾಯಿ ಪ್ರಿಯಾ ಹೋಗಿದ್ದಾದರೂ ಎಲ್ಲಿಗೆ? ನಿನ್ನೆ ಸಂಜೆ ಸೋಮವಾರ 6 ರಿಂದ 7 ರ ನಡುವೆ ಏನಾಯಿತು? ಗಂಡನ ಪಕ್ಕದಲ್ಲಿದ್ದ ಹೆಂಡತಿ ಒಂದೇ ನಿಮಿಷದಲ್ಲಿ ಹೇಗೆ ನಾಪತ್ತೆಯಾದಳು? ಎಂಬುದು ನಿಗೂಢವಾಗಿದೆ.

ಶ್ರೀನಿವಾಸ್ – ಸಾಯಿ ಪ್ರಿಯಾ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ನಿನ್ನೆ 2ನೇ ಮದುವೆ ವಾರ್ಷಿಕ ದಿನವಾದ್ದರಿಂದ ವಿಶಾಖಪಟ್ಟಣ ಬೀಚ್​ಗೆ ಹೋಗಿದ್ದರು. ಬೆಳಗ್ಗೆ ಸಿಂಹಾಚಲಂ ದೇವಸ್ಥಾನಕ್ಕೆ ಹೋಗಿ, ಮಧ್ಯಾಹ್ನದ ವೇಳೆಗೆ ಮನೆಗೆ ಹೋದೆ. ಅಲ್ಲಿಯೇ ಊಟ ಮಾಡಿ ಸಂಜೆ ಬೀಚ್‌ಗೆ ಹೋಗಿದ್ದೆವು. ಇಬ್ಬರೂ ಸಮುದ್ರತೀರದಲ್ಲಿ ಫೋಟೋ, ಸೆಲ್ಫೀಗಳನ್ನು ತೆಗೆಯುತ್ತಾ ದಂಪತಿ ಕಾಲ ಕಳೆದಿದ್ದಾರೆ. ಆದರೆ ಶ್ರೀನಿವಾಸ್ ತಮ್ಮ ಮೊಬೈಲ್​ ಫೋನ್ ನಲ್ಲಿ ಮೆಸೇಜ್​​ಗಳನ್ನು ಪರಿಶೀಲಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಸಾಯಿಪ್ರಿಯಾ ನಾಪತ್ತೆಯಾಗಿದ್ದಾರೆ. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಸುತ್ತಮುತ್ತ ಜಾಲಾಡಿದ್ದಾರೆ. ಯಾವುದೇ ಪ್ರಯೋಜನವಾಗದೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಇದರಿಂದಾಗಿ ನಿನ್ನೆ ರಾತ್ರಿ ತ್ರೀಟೌನ್ ಪೊಲೀಸರೊಂದಿಗೆ ಮೆರೈನ್ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಇಂದೂ ಮತ್ತೆ ಹುಡುಕಾಟ ನಡೆಸಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೀಚ್‌ಗೆ ಹೋದ ಮಗಳು ಮರಳಿ ಮನೆಗೆ ಬಂದಿಲ್ಲ ಎಂದು ಸಾಯಿ ಪ್ರಿಯಾ ತಂದೆ ದುಃಖ ವ್ಯಕ್ತಪಡಿಸುತ್ತಿದ್ದಾರೆ. ಸಾಯಿ ಪ್ರಿಯಾ ನಾಪತ್ತೆ ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿವೆ.

To read in Telugu Click Here