ಕರ್ನಾಟಕದಲ್ಲಿ ರೆಡ್ ಬಸ್ ಸಂಚಾರ ಇರುತ್ತೆ, ನೆರೆಯ ತೆಲಂಗಾಣದಲ್ಲಿ?

|

Updated on: May 18, 2020 | 8:35 PM

ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ. ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ‌ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್​ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ‌ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್​ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಕಂಟೇನ್ಮೆಂಟ್, ರೆಡ್ ಜೋನ್​ಗಳಲ್ಲಿ‌ ಹಾಗೂ ಹೈದರಾಬಾದ್ ಮಹಾನಗರದಲ್ಲಿ‌ ಬಸ್​ಗಳ‌ ಓಡಾಟ ಇರುವುದಿಲ್ಲ. ಬಸ್​ಗಳಲ್ಲಿ ಶೇಕಡಾ […]

ಕರ್ನಾಟಕದಲ್ಲಿ ರೆಡ್ ಬಸ್ ಸಂಚಾರ ಇರುತ್ತೆ, ನೆರೆಯ ತೆಲಂಗಾಣದಲ್ಲಿ?
Follow us on

ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ.

ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ‌ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್​ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ‌ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್​ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.

ಕಂಟೇನ್ಮೆಂಟ್, ರೆಡ್ ಜೋನ್​ಗಳಲ್ಲಿ‌ ಹಾಗೂ ಹೈದರಾಬಾದ್ ಮಹಾನಗರದಲ್ಲಿ‌ ಬಸ್​ಗಳ‌ ಓಡಾಟ ಇರುವುದಿಲ್ಲ. ಬಸ್​ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲು ಸಭೆಯಲ್ಲಿ‌ ತೀರ್ಮಾನಿಸಲಾಗಿದೆ.

Published On - 2:45 pm, Mon, 18 May 20