ಮತ್ತೆ ರಸ್ತೆ ಅಪಘಾತ: ಬೆಳಗಿನ ಜಾವ ನಾಲ್ವರು ವಲಸೆ ಕಾರ್ಮಿಕರ ದುರ್ಮರಣ
ಮಹಾರಾಷ್ಟ್ರ: ವಲಸೆ ಕಾರ್ಮಿಕರ ಬದುಕು ನಿಜಕ್ಕೂ ದುರಂತ ಅಂತ್ಯ ಕಾಣುತ್ತಿದೆ. ನಿನ್ನೆ ರಾತ್ರಿ ಬಸ್ಸಿನಲ್ಲಿ ತಮ್ಮೂರುಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರ ಪೈಕಿ ನಾಲ್ಕು ಮಂದಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ಇಂದು ಬೆಳಗಿನ ಜಾವ ಯಾವತ್ಮಾಲ್ ಬಳಿ ಕಾರ್ಮಿಕರಿದ್ದ ಬಸ್ಸು, ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಸೋಲಾಪುರದಿಂದ ಜಾರ್ಖಂಡ್ ಕಡೆಗೆ ಪ್ರಯಾಣಿಸುತ್ತಿತ್ತು. ಭೀಕರ ಅಪಘಾತದಲ್ಲಿ 15 ಕಾರ್ಮಿಕರು ಗಾಯಗೊಂಡಿದ್ದಾರೆ. ಲಾಕ್ಡೌನ್ ಕಾಲದಲ್ಲಿ ದೇಶಾದ್ಯಂತ ಇದುವರೆಗೆ ಇಂತಹ ರಸ್ತೆ ಅಪಘಾತಗಳಲ್ಲಿ ಸುಮಾರು 400 ಮಂದಿ ಕಾರ್ಮಿಕರು […]
ಮಹಾರಾಷ್ಟ್ರ: ವಲಸೆ ಕಾರ್ಮಿಕರ ಬದುಕು ನಿಜಕ್ಕೂ ದುರಂತ ಅಂತ್ಯ ಕಾಣುತ್ತಿದೆ. ನಿನ್ನೆ ರಾತ್ರಿ ಬಸ್ಸಿನಲ್ಲಿ ತಮ್ಮೂರುಗಳಿಗೆ ಹೊರಟಿದ್ದ ವಲಸೆ ಕಾರ್ಮಿಕರ ಪೈಕಿ ನಾಲ್ಕು ಮಂದಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.
ಇಂದು ಬೆಳಗಿನ ಜಾವ ಯಾವತ್ಮಾಲ್ ಬಳಿ ಕಾರ್ಮಿಕರಿದ್ದ ಬಸ್ಸು, ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಸೋಲಾಪುರದಿಂದ ಜಾರ್ಖಂಡ್ ಕಡೆಗೆ ಪ್ರಯಾಣಿಸುತ್ತಿತ್ತು. ಭೀಕರ ಅಪಘಾತದಲ್ಲಿ 15 ಕಾರ್ಮಿಕರು ಗಾಯಗೊಂಡಿದ್ದಾರೆ. ಲಾಕ್ಡೌನ್ ಕಾಲದಲ್ಲಿ ದೇಶಾದ್ಯಂತ ಇದುವರೆಗೆ ಇಂತಹ ರಸ್ತೆ ಅಪಘಾತಗಳಲ್ಲಿ ಸುಮಾರು 400 ಮಂದಿ ಕಾರ್ಮಿಕರು ದುರಂತ ಸಾವು ಕಂಡಿದ್ದಾರೆ.
Published On - 10:42 am, Tue, 19 May 20