ಕರ್ನಾಟಕದಲ್ಲಿ ರೆಡ್ ಬಸ್ ಸಂಚಾರ ಇರುತ್ತೆ, ನೆರೆಯ ತೆಲಂಗಾಣದಲ್ಲಿ?
ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ. ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಕಂಟೇನ್ಮೆಂಟ್, ರೆಡ್ ಜೋನ್ಗಳಲ್ಲಿ ಹಾಗೂ ಹೈದರಾಬಾದ್ ಮಹಾನಗರದಲ್ಲಿ ಬಸ್ಗಳ ಓಡಾಟ ಇರುವುದಿಲ್ಲ. ಬಸ್ಗಳಲ್ಲಿ ಶೇಕಡಾ […]
ಹೈದರಾಬಾದ್: ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಅದೇ ರೀತಿ ನೆರೆಯ ತೆಲಂಗಾಣದಲ್ಲಿಯೂ ನಾಳೆಯಿಂದ ಬಸ್ ಸಂಚರಿಸಲಿದೆ.
ಸಾರಿಗೆ ಸಚಿವ ಪೂವ್ವಾಡ ಅಜಯ ನೇತೃತ್ವದಲ್ಲಿ ನಡೆದ ರಸ್ತೆ ಸಾರಿಗೆ ಇಲಾಖೆಯ ಸಭೆಯಲ್ಲಿ ತೆಲಂಗಾಣದಲ್ಲಿ ನಾಳೆಯಿಂದ ಬಸ್ಗಳ ಓಡಾಟ ಆರಂಭಿಸಲು ನಿರ್ಧಾರ ಕೈಗೊಳ್ಳಲಾಯ್ತು. ಹೈದರಾಬಾದ್ ನಗರ ಹೊರತುಪಡಿಸಿ ಎಲ್ಲಾ ಗ್ರೀನ್ ಜೋನ್ಗಳಲ್ಲಿ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ.
ಕಂಟೇನ್ಮೆಂಟ್, ರೆಡ್ ಜೋನ್ಗಳಲ್ಲಿ ಹಾಗೂ ಹೈದರಾಬಾದ್ ಮಹಾನಗರದಲ್ಲಿ ಬಸ್ಗಳ ಓಡಾಟ ಇರುವುದಿಲ್ಲ. ಬಸ್ಗಳಲ್ಲಿ ಶೇಕಡಾ 50ರಷ್ಟು ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
Published On - 2:45 pm, Mon, 18 May 20